ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ ಕೊಂಚ ಮಟ್ಟಿನ ಚಟುವಟಿಕೆಯನ್ನು ಕಾಣಬಹುದಾಗಿರುತ್ತದೆ. ಹೀಗೆ ಉತ್ಸುಕರಾಗಿರುವವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ತಂತ್ರಾಂಶ ಸಂಬಂಧಿ ಅನುವಾದ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಇವರಿಗೆ...
ನಾಸಾ ಇತ್ತೀಚೆಗೆ code.nasa.gov ಎಂಬ ಹೊಸ ತಾಣವನ್ನು ತಂತ್ರಜ್ಞಾನ ಅಭಿವೃದ್ದಿಗೆ ತೆರೆದಿದೆ. ಇದು ಮುಂದೆ ನಾಸಾದ ಓಪನ್ಸೋರ್ಸ್ ತಾಣವಾಗಲಿದೆ. ತಂತ್ರಜ್ಞಾನದ ಅಭಿವೃದ್ದಿಯನ್ನು ಜನಸಮುದಾಯದ ಭಾಗವಹಿಸುವಿಕೆಯ ಮೂಲಕ ಅತಿ ಕಡಿಮೆ ಖರ್ಚಿನಲ್ಲೂ ಹಾಗು ಯಾವುದೇ ಸಂಸ್ಥೆಯ ಹೊರಗಿನ ಹೆಚ್ಚು ಬುದ್ದಿಮತ್ತೆಯ ಅನುಭವಿ ತಜ್ಞರಿಂದ ಪಡೆದುಕೊಳ್ಳುವುದಕ್ಕೆ ‘ಓಪನ್ಸೋರ್ಸ್‘ ಯೋಜನೆಗಳಲ್ಲಿ ಆಯಾ ಯೋಜನೆಯ ಸಂಪೂರ್ಣ ಸೋರ್ಸ್ ಅಥವ ಮಾಹಿತಿಯನ್ನು ಸ್ವತಂತ್ರವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ ಸೋರ್ಸ್ಕೋಡ್ ಉಪಯೋಗಿಸಿಕೊಂಡು...
ಕಂಪ್ಯೂಟರ್ನಲ್ಲಿ ಕನ್ನಡ ಓದಲು ಮತ್ತು ಬರೆಯಲು ಅನೇಕ ಫಾಂಟುಗಳಿವೆ. ಆದರೆ ನಮಗೆಲ್ಲಾ ಈಗಾಗಲೇ ಅರಿವಿಗೆ ಬಂದಿರುವಂತೆ, ಎಲ್ಲರೂ ನಾವು ಟೈಪಿಸಿದ ಪದಗಳನ್ನು ಓದಲು ಯುನಿಕೋಡ್ ಶಿಷ್ಟತೆಯನ್ನು ಬಳಸಿರಬೇಕು. ಆಗಲೇ ಎಲ್ಲರನ್ನು ಸುಲಭವಾಗಿ ತಲುಪಲು ಸಾಧ್ಯ. ಇಲ್ಲವಾದಲ್ಲಿ. ನಿಮ್ಮ ಲೇಖನವನ್ನು ಓದುವ ಪ್ರತಿಯೊಬ್ಬರೂ ನೀವು ಬಳಸಿದ ಫಾಂಟನ್ನು ತಮ್ಮ ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಂಡಿರಬೇಕಾಗುತ್ತದೆ. ಕನ್ನಡದ ಮೊದಲ ಕೆಲವು ಫಾಂಟುಗಳನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ವಹಿಸಿಕೊಂಡಿತ್ತು. ಇದರ...
ಜರ್ಮನಿಯ ರಿಕ್ಯುರಿಟಿ ಲ್ಯಾಬ್ಸ್ ನ ಅನ್ವೇಷಕರು ಜಾವಾಸ್ಕ್ರಿಪ್ಟ್ ಆಧಾರಿತ ಓಪನ್ ಪಿ.ಜಿ.ಪಿ ಎನ್ಕ್ರಿಪ್ಷನ್ ತಂತ್ರಾಂಶವನ್ನು ಬಳಕೆದಾರರಿಗೆ ಬಿಡುಗಡೆ ಮಾಡಿದ್ದಾರೆ. ಇಂಟರ್ನೆಟ್ ನ ವೆಬ್ಮೈಲ್ ಬಳಕೆಯ ಸಮಯದಲ್ಲಿ ತಮ್ಮ ಸಂದೇಶವನ್ನು ಓಪನ್ ಪಿ.ಜಿ.ಪಿ ತಂತ್ರಜ್ಞಾನ ಬಳಸಿ ಸುರಕ್ಷಿತವಾಗಿ ಬೇರೆಡೆಗೆ ಕಳುಹಿಸಬಹುದು. GPG4Browsers ಎಂಬ ಈ ತಂತ್ರಾಂಶ http://gpg4browsers.recurity.com ನಲ್ಲಿ ಲಭ್ಯವಿದೆ. ಈ ತಂತ್ರಾಂಶದ ಪ್ಲಗಿನ್ ಗೂಗಲ್ ಕ್ರೋಮ್ ಬ್ರೌಸರ್ ನಲ್ಲಿ ಕೆಲಸ ಮಾಡಲಿಕ್ಕೆ ಈಗಾಗಲೇ ಅಣಿಯಾಗಿದೆ ಹಾಗೂ ನೀವು...
ಉಬುಂಟು ೧೧.೧೦ ಈಗಾಗಲೇ ನಮ್ಮಲ್ಲನೇಕರ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಗಳನ್ನೇರಿರಬಹುದು. ಹಿಂದಿನ ಉಬುಂಟುಗಳಿಗಿಂದ ಇದರಲ್ಲಿ ಭಿನ್ನವಾಗಿದ್ದದ್ದು ಉಬುಂಟು ಯುನಿಟಿ ಡೆಸ್ಕ್ಟಾಪ್ ಮತ್ತು ಜಿನೋಮ್ -೩ ನ ಹೊಸ ಆವೃತ್ತಿ . ಇದರಲ್ಲಿ ಕನ್ನಡ ಓದಲಿಕ್ಕೆ ನಾವೇನೂ ಮಾಡಬೇಕಿಲ್ಲ. ಇನ್ಟಾಲ್ ಆದ ತಕ್ಷಣದಿಂದಲೇ ಕನ್ನಡ ಓದಲಿಕ್ಕೆ ಪ್ರಾರಂಭಿಸಬಹುದು. ಕನ್ನಡದಲ್ಲಿ ಟೈಪಿಸಲಿಕ್ಕೆ ಐ-ಬಸ್ ಇನ್ಸ್ಟಾಲ್ ಮಾಡಿಕೊಂಡರಾಯ್ತು. Settings -> System Settings -> Language Support ಅಥವಾ ವಿಂಡೋಸ್ ಕೀ ಪ್ರೆಸ್ ಮಾಡಿ...