ನಾವೆಲ್ ಅಟ್ಯಚ್‌ಮೇಟ್ ತೆಕ್ಕೆಗೆ

ನವೆಂಬರ್ ೨೦೧೦ ರಲ್ಲಿ ನಾವೆಲ್ ತಾನು ಅಟ್ಯಾಚ್‌ಮೇಟ್ ತೆಕ್ಕೆಗೆ ಸರಿಯುವುದಾಗಿ ಹೇಳಿದ್ದರೂ ಕಳೆದವಾರದವರೆಗೆ ಅದು ನಿಜವಾಗಿರಲಿಲ್ಲ. ಯು.ಎಸ್ ಕಾನೂನು ಇಲಾಕೆಯ ಕೊನೆಯಗಳಿಗೆಯ ಹೊಂದಾಣಿಕೆಗಳಿಂದಾಗಿ ನಾವೆಲ್ ತನ್ನ ವ್ಯಾವಹಾರಿಕ ಸಂಬಂದಗಳಿಗೆ ಅಟ್ಯಾಚ್‌ಮೇಟ್ ನೊಂದಿಗೆ ೨.೨ ಬಿಲಿಯನ್ ಡಾಲರುಗಳ ಒಪ್ಪಂದಕ್ಕೆ ಕೊನೆಗೂ ಸಹಿ ಹಾಕಿದೆ. ಅಟ್ಯಾಚ್‌ಮೇಟ್‌ನ ಒಡೆತನದಲ್ಲಿ ನಾವೆಲ್ ಪೂರ್ಣಪ್ರಮಾಣದ ಅಂಗಸಂಸ್ಥೆಯಾಗಿ ಬೆಳೆಯಲಿದೆ. ನಾವೆಲ್ ನ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಕ್ಕೆ ಸಂಬಂದಿಸಲ್ಪಟ್ಟ ಕೆಲಸಗಳಿಗೆ ತಾನು...

ಸ್ಲಾಕ್ವೇರ್ ಆವೃತ್ತಿ ೧೩.೩೭ ಬಿಡುಗಡೆ

ಮೊದಲಿಗೆ ಇದ್ದದ್ದು ಸ್ಲಾಕ್ವೇರ್ – ೧೮ ವರ್ಷಗಳ ನಂತರವೂ ಇದೊಂದು ಬಲಿಷ್ಟ ಗ್ನು/ಲಿನಕ್ಸ್ ವಿತರಣೆ. ಸ್ಲಾಕ್ವೇರ್ (Slackware), ೧೯೯೩ ರಲ್ಲಿ ಬಿಡುಗಡೆಯಾದ ಪ್ರಥಮ ಗ್ನು/ಲಿನಕ್ಸ್ ವಿತರಣೆ. ಪ್ಯಾಟ್ರಿಕ್ ವೋಲ್ಕರ್ಡಿಂಗ್ (Patrick Volkerding) ಎಂಬಾತ ಹೊರತಂದ ಈ ವಿತರಣೆ ಈಗ ೧೩.೩೭ ಆವೃತ್ತಿಯ ಬಿಡುಗಡೆ ಕಂಡಿದೆ. ಎಂದಿನಂತೆ ವಾಲ್ಕರ್ಡಿಂಗ್ ಈ ಆವೃತ್ತಿಗೆ ಹೊಸ ಬದಲಾವಣೆಗಳನ್ನು, ಹೊಸ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು, ಹೊಸ ಕರ್ನೆಲ್ ಅನ್ನು ಸ್ಕ್ಲಾಕ್ವೇರ್ ಗೆ ಸೇರಿಸಿ ನಮ್ಮೆದುರಿಗಿಟ್ಟಿದ್ದಾರೆ....

ಬ್ರೌಸರ್ ಮೂಲಕ ಪ್ರಿಂಟರ್ ನಿರ್ವಹಣೆ

ಲಿನಕ್ಸ್ ನಲ್ಲಿ ಪ್ರಿಂಟರ್ ಗಳನ್ನು ನಿರ್ವಹಿಸುವುದರ ಬಗ್ಗೆ ಒಂದೆರಡು ಮಾತು. ಲಿನಕ್ಸ್ ಹಳೆಯ ಮತ್ತು ಹೊಸ ಪ್ರಿಂಟರ್ಗಳನ್ನು ಯಾವುದೇ ಡ್ರೈವರ್ ತಂತ್ರಾಂಶಗಳ ಇನ್ಸ್ಟಾಲೇಷನ್ ಇಲ್ಲದೆಯೇ ಉಪಯೋಗಕ್ಕೆ ಅಣಿಗೊಳಿಸಬಲ್ಲದು. ಡಾಟ್ ಮ್ಯಾಟ್ರಿಕ್ಸ್ ನಿಂದ ಹಿಡಿದು ಇಂದಿನ ಲೇಸರ್ ಪ್ರಿಂಟರ್ಗಳೂ ಸುಲಭವಾಗಿ ಕೆಲಸ ಮಾಡುತ್ತವೆ. ಆದರೆ ಕೆಲವೊಂದು ಖಾಸಗಿ ಮಾಲೀಕತ್ವದ ಪ್ರಿಂಟರ್ ಉತ್ಪಾದಕ ಸಂಸ್ಥೆಗಳು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಅಭಿವೃದ್ದಿಗೆ ಬೇಕಾದ ಮೂಲ ಹಾರ್ಡ್ವೇರ್ ನ ವಿವರಗಳನ್ನು ಬಹಿರಂಗಗೊಳಿಸದೆ ಇರುವುದರಿಂದ...

ಪರರ ಕೈಯಲ್ಲಿ ನಮ್ಮಪಾಸ್‌ವರ್ಡ್

ಪ್ರಜಾವಾಣಿಯಲ್ಲಿ  ೧೨ನೇ ಡಿಸೆಂಬರ್ ೨೦೧೦ ರಂದು ಪ್ರಕಟವಾದ ಲೇಖನ ನಿನ್ನೆ ರಾತ್ರಿ ಪಾರ್ಟಿಯಲ್ಲಿ ಸಿಕ್ಕವನು ಇಂದು ಬೆಳಗಾಗುವ ಹೊತ್ತಿಗೆ ಲಂಡನ್ ತಲುಪಿರಲು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದ ನಾನು ತಕ್ಷಣ ಅವನಿಗೆ ಫೋನ್ ಮಾಡಿದರೆ ನಿದ್ರೆಗಣ್ಣಿನಲ್ಲೇ ಫೋನ್ ಎತ್ತಿಕೊಂಡು ಬೆಳ್ಳಂಬೆಳಗ್ಗೆ ಏನು ನಿನ್ನ ಕಿರಿಕಿರಿ ಎಂದು ಗೊಣಗಲಾರಂಭಿಸಿದ. ಬೆಳಿಗ್ಗೆ ಎದ್ದು ಮೇಲ್ ಚೆಕ್ ಮಾಡಿದರೆ ಗೆಳೆಯನ ಮೇಲ್. ಸಬ್ಜೆಕ್ಟ್ ಲೈನ್‌ನಲ್ಲಿದ್ದ ವಿಷಯ ನೋಡಿ ಗಾಬರಿಯಾಗಿ ಮೇಲ್ ತೆರೆದರೆ ‘ನಾನು ನಿನ್ನೆಯಷ್ಟೇ ಲಂಡನ್‌ಗೆ ಬಂದೆ. ನಿನಗೆ...

ಪಿ.ಡಿ.ಎಫ್ ಗೆ ಪ್ರಿಂಟ್ ಮಾಡಿ

ಅಂತರ್ಜಾಲ ಜಾಲಡುವಾಗ ದೊರೆಯುವ ಅನೇಕ ಪುಟಗಳನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳೋಣ ಅಂದ್ರೆ ಆಗಾಗ ಅದು ಸಾಧ್ಯ ಆಗದೆ ಹೋಗಬಹುದು. ಆ ಕೊಂಡಿಗಳನ್ನು ಬುಕ್ ಮಾರ್ಕ್ ಮಾಡಿ ನಂತರ ತೆಗೆದು ನೋಡೋದು ಅಂದ್ರೆ ಕನಸೇ ಬಿಡಿ. ಆಹ್! ಒಂದು ಪ್ರಿಂಟರ್ ಇದ್ದಿದ್ರೆ ಅನ್ಸೋದಂತೂ ನಿಜ. ಒಂದು ಸಣ್ಣ ಉಪಾಯ ಹೇಳಿಕೊಡ್ಲಾ? ಉಬುಂಟು ಉಪಯೋಗಿಸ್ತಿದ್ರೆ, ctrl + p ಪ್ರೆಸ್ ಮಾಡಿ ನೀವು ಬ್ರೌಸ್ ಮಾಡುತ್ತಿರುವ ಪೇಜ್ ಅನ್ನು ಪ್ರಿಂಟರ್ ಇಲ್ಲದೆ ಕೂಡ ಪ್ರಿಂಟ್ ಮಾಡಿಕೊಳ್ಳಬಹುದು. ಹೌದು PDF, PS  (Post Script) ಅಥವಾ SVG (Simple Vector...

« Previous Entries Next Entries »

Powered by HostRobust | © 2006 - 2014 Linuxaayana