ಕನ್ನಡ ಪುಸ್ತಕಗಳನ್ನು ಸುಲಭವಾಗಿ ಇಂಟರ್ನೆಟ್ನಲ್ಲಿ ಮತ್ತು ವಿಕಿಪೀಡಿಯದಲ್ಲಿ ಹುಡುಕುವಂತೆ ಮಾಡಲು ಹೊರಟಿರುವ ಸಮೂಹ ಸಂಚಯ – ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ ಕನ್ನಡ ಪುಸ್ತಕಗಳ ಹೆಸರು, ಲೇಖಕರು ಹಾಗೂ ಪ್ರಕಾಶಕರ ಹೆಸರನ್ನು ಕಂಗ್ಲೀಷ್ನಿಂದ ಕನ್ನಡೀಕರಿಸುತ್ತಿದೆ. ೫೦೦೦ದಷ್ಟು ಪುಟಗಳನ್ನು ಹೆಣೆಯುವುದರೊಂದಿಗೆ ೨೦೦೦ ಪುಸ್ತಕಗಳು ಕನ್ನಡಿಗರಿಗೆ ಸುಲಭವಾಗಿ ಇಂಟರ್ನೆಟ್ನಲ್ಲಿ (ಕನ್ನಡದಲ್ಲೇ) ಹುಡುಕಲು ಸಿಗಲಿವೆ. ಕನ್ನಡ ಸಂಚಯದ ಹೊಸ ಯೋಜನೆ – ಸಮೂಹ ಸಂಚಯ ಸಮುದಾಯದ ಒಗ್ಗಟ್ಟಿನ...
ಅರಿವಿನ ಅಲೆಗಳನ್ನು ೨೦೧೩ರಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯದಿನೋತ್ಸವ, ಕನ್ನಡ ರಾಜ್ಯೋತ್ಸವದಂತಹ ಮಹತ್ವದ ದಿನಗಳಂದು ಹೊರತರಲು ಆಲೋಚಿಸಿದ್ದು, ಮೊದಲಿಗೆ ಜನವರಿ ೨೬ ರ ಗಣರಾಜ್ಯೋತ್ಸವದಿಂದಲೇ ಇದರ ಪ್ರಯತ್ನಕ್ಕೆ ನಮ್ಮೊಂದಿಗೆ ಕೈ ಜೋಡಿಸಲು ಈ ಮೂಲಕ ಕೋರುತ್ತೇವೆ. ಕೇವಲ ಐ.ಟಿ ತಂತ್ರಜ್ಞಾನವೊಂದೇ ನಮ್ಮ ಅರಿವಿನ ಅಲೆಗಳ ಮೂಲಕ ಮೂಡಬೇಕೆ ಅಥವಾ ದಿನನಿತ್ಯ ಬಳಸುವ ವಿಜ್ಞಾನದೆಡೆಗೂ ಗಮನ ಹರಿಸಬೇಕೆ ಎಂಬಿತ್ಯಾದಿ ಚರ್ಚೆಗಳ ನಂತರ, ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎರಡರ ಕಡೆಗೂ ಕನ್ನಡದಲ್ಲಿ ಬರವಣಿಗೆಯ ಮೂಲಕ...
Press Release ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ ಕನ್ನಡ ತಂತ್ರಾಂಶಗಳ ಅನುವಾದದಲ್ಲಿ ಬಳಸಬೇಕಿರುವ ಪದಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉದ್ಧೇಶಿಸಲಾದಂತಹ ಅವಲೋಕನ ಕಾರ್ಯಗಾರವನ್ನು ಜನವರಿ ೨೮ ಹಾಗು ೨೯ ರಂದು FUEL ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿಯಲ್ಲಿ (ಸಿಐಎಸ್) ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಗಣಕದಲ್ಲಿ ಹೆಚ್ಚಾಗಿ ಬಳಸಲಾಗುವ ಪರ್ಯಾಯ ಕನ್ನಡ ಪದಗಳ ಅವಲೋಕಿಸುವ ಸಲುವಾಗಿ ಕನ್ನಡ ಸಮುದಾಯದ ಮೂಲಕ ಅವಲೋಕನ ನಡೆಸಲಾಯಿತು. ಕಂಪ್ಯೂಟರ್ ತಂತ್ರಾಂಶಗಳ...