ಇದೀಗ ತಾನೇ ಹೊಸ ಫೈರ್ಫಾಕ್ಸ್ ಹಾಕಿಕೊಂಡಿದ್ವಲ್ಲಾ, ಉಬುಂಟು ಹೊಸ ಫೈರ್ಫಾಕ್ಸ್ ೪ ಹೊಂದಿದೆಯಲ್ಲ. ಮತ್ತೇನಿದು ಫೈರ್ಫಾಕ್ಸ್ ೫ ಅಂತೀರಾ? ಹೌದು, ಫೈರ್ಫಾಕ್ಸ್ ಬೇಗ ಬೇಗ ಅಭಿವೃದ್ದಿಗೊಳ್ಳುತ್ತಿದೆ. ಹೊಸ ಹೊಸ ತಂತ್ರಜ್ಞಾನ, ತಂತ್ರಾಂಶ, ಆವಿಷ್ಕಾರಗಳನ್ನು ತನ್ನ ಬಳಕೆದಾರರಿಗೆ ಹೊತ್ತು ತರುತ್ತಿದೆ. ಇತ್ತೀಚೆಗೆ ನೆಡೆದ ಬ್ರೌಸರ್ ಸೆಕ್ಯೂರಿಟಿ ಟೆಸ್ಟ್ ನಲ್ಲಿ ಹ್ಯಾಕ್ ಆಗದೆ ಉಳಿದ ಬ್ರೌಸರ್ ಇದಾಗಿದೆ. ಗೂಗಲ್ ಕೋಮ್ ಕೂಡ ಇದೇ ಸಾಮರ್ಥ್ಯವನ್ನು ಪ್ರದರ್ಶಿಸಿದರೆ, ಆಫಲ್ನ ಸಫಾರಿ ಮೊದಲಿಗೆ ಹ್ಯಾಕ್ ಆದ ಬ್ರೌಸರ್ನಲ್ಲಿ...
ಸ್ಕೂಲ್ ಮೆಟ್ಟಿಲೇರುತ್ತ, ಸಣ್ಣ ಪುಟ್ಟ ಲೆಕ್ಕ ಪಾಠಗಳನ್ನು ಕಲಿಯುತ್ತ, ೧೨ನೇ ವರ್ಷದ ಆಸುಪಾಸಿಗೆ ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುತ್ತ ಬೆಳೆದ ನನ್ನ, ನಿಮ್ಮಂತಹವರ ಕಥೆ ಹಳೆಯದಾಯಿತು ಬಿಡಿ. ವಿಶ್ವವ್ಯಾಪಿ ತನ್ನ ಚಾಚನ್ನು ಹರಿಸಿರುವ ಕಂಪ್ಯೂಟರು, ಕೀಲಿಮಣೆಯ ಮೇಲೆಯೇ ಸಂಪರ್ಕವನ್ನು ನೀಡುವ ಇಂಟರ್ನೆಟ್ ಇರುವ ಈ ಶತಮಾನದಲ್ಲಿ, ಅಪ್ಪ ಅಮ್ಮಂದಿರನ್ನೂ ಮೀರಿಸಿ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಳ್ಳುತ್ತಿರುವ ಅನೇಕರು ಇಂದು ನಮ್ಮ ಸುತ್ತಮುತ್ತಲಿದ್ದಾರೆ. ವಿಸ್ಮಯಗಳ ಲೋಕದಲ್ಲಿ ಇದೂ ಒಂದು....