USB ಡ್ರೈವ್ ನಲ್ಲಿ ಲಿನಕ್ಸ್

unetbootin – ಇದರ ಬಗ್ಗೆ _ರಾಫವ_ ಒಂದು ಕಾಮೆಂಟಿನಲ್ಲಿ ಹೇಳಿದ್ದ ನೆನಪಿದೆಯೇ? ಹೊಸದಾಗಿ ಲಿನಕ್ಸ್ ಬಳಸಬೇಕು ಅಂತಿರೋರು, ಹೊಸ ಹೊಸ ಗ್ನು/ಲಿನಕ್ಸ್ ಆವೃತ್ತಿಗಳನ್ನು ಟೆಸ್ಟ ಮಾಡಿನೋಡ್ಬೇಕು ಅಂತಿರೋ ನನ್ನಂತಹವರು ಪ್ರತಿ ಭಾರಿಯೂ ಲಿನಕ್ಸ್ ಅನ್ನು ನಮ್ಮ ಲ್ಯಾಪ್ಟಾಪ್ ಗಳಲ್ಲಿ ಅಥವಾ ಡೆಸ್ಕಾಪ್ ಗಳಲ್ಲಿ ಪುನ: ಪುನ: ಇನ್ಸ್ಟಾಲ್ ಮಾಡ್ಕೊಳ್ಳಿಕ್ಕೆ ಇಷ್ಟ ಪಡಲ್ಲ. ಹಾಗಿದ್ರೆ ಅದನ್ನ ಬಳಸೋದಾದ್ರೂ ಹ್ಯಾಗೆ? ವರ್ಚುಅಲ್ ಬಾಕ್ಸ್ – ಸಂಪದದಲ್ಲಿ ಬರುತ್ತಿರೋ ತಂತ್ರಜ್ಞಾನ ಕುರಿತಾದ ಲೇಖನಗಳನ್ನು ನೀವು ಓದ್ತಿದ್ರೆ...

ಉಬುಂಟು ೯.೦೪ ನಲ್ಲಿ ಕನ್ನಡ – ಭಾಗ ೩

ಈಗ ಕನ್ನಡ ಓದ್ಲಿಕ್ಕೆ, ಬರೀಲಿಕ್ಕೆ ಆಯ್ತು. ಈಗ ಕನ್ನಡದ ಲಾಗಿನ್ ಪೇಜ್  ಹಾಗು ಮೆನು ಇತ್ಯಾದಿಗಳನ್ನು ಕನ್ನಡದಲ್ಲಿ ಕಾಣೋದು ಹ್ಯಾಗೆ? ನೋಡೋಣ್ವಾ? ಮೊದಲ ಲೇಖನದಲ್ಲಿ ಕನ್ನಡ ಭಾಷೆಯ ಸಪೋರ್ಟ್ ಹ್ಯಾಗೆ ಹಾಕಿಕೊಳ್ಳೋದು ಅಂತ ತಿಳಿದುಕೊಂಡಿದ್ದೀವಿ ಅಲ್ವಾ? ನೆನಪಿಗೆ ಬರ್ತಿಲ್ಲಾ ಅಂತಂದ್ರೆ ಈ ಕೆಳಗಿನ ಚಿತ್ರ ನೋಡಿ, ಜ್ಞಾಪಕ ಬರುತ್ತೆ. ಈಗ ಲ್ಯಾಂಗ್ವೇಜ್ ಸಪೋರ್ಟ್ ವಿಂಡೋದಲ್ಲಿ ಕನ್ನಡ ಸೆಲೆಕ್ಟ್ ಮಾಡಿಕೊಂಡ್ರಾಯ್ತು. ಇದರ ನಂತರ ಒಮ್ಮೆ ಲಾಗ್-ಔಟ್ ಆಗಿ ಮತ್ತೆ ಲಾಗಿನ್ ಆದ್ರೆ ನಿಮಗೆ ಎಲ್ಲ ಮೆನು ಇತ್ಯಾದಿ ಕನ್ನಡದಲ್ಲೇ...

ಉಬುಂಟು ೯.೦೪ ನಲ್ಲಿ ಕನ್ನಡ – ಭಾಗ ೨

ಕನ್ನಡ ಎನೋ ಸರಿಯಾಗೇ ಬರ್ಲಿಕ್ಕೆ ಶುರು ಮಾಡಿದೆ. ಈಗ ಬರಹದಲ್ಲಿ ಟೈಪ್ ಮಾಡೋ ಹಾಗೆ ಸುಲಭವಾಗಿ ಟೈಪ್ ಮಾಡ್ಲಿಕ್ಕೆ inscript ಮತ್ತು KGP ಲೇಔಟ್ ನಲ್ಲಿ ಆಗ್ತಿಲ್ವಲ್ಲಾ. ಹ್ಯಾಗೆ ಇದನ್ನ ಸರಿ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಹಾಗಿದ್ರೆ ಈ ಭಾಗದಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರವಿದೆ. ಮುಂದೆ ಓದಿ. ಬರಹ ಕೀ ಬೋರ್ಡ್ ಲೇಔಟ್ ಬೇಕು ಅಂತಂದ್ರೆ scim-m17n ಅನ್ನೋ ಒಂದು ಪ್ಯಾಕೇಜ್ ಇನ್ಸ್ಟಾಲ್ ಮಾಡ್ಕೊಬೇಕು. ಅದಕ್ಕೆ ಮೊದಲು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಓಪನ್ ಮಾಡಿ. ನಂತರ  m17n ಅಂತ ಸರ್ಚ್ ಮಾಡಿ....

ಲಿನಕ್ಸನಲ್ಲಿ ಪ್ರಿಂಟರ್ ಸುಲಭವಾಗಿ ಕೆಲಸ ಮಾಡುತ್ತಾ?

ಪ್ರಿಂಟರ್ ಗಳನ್ನು ಕಂಪ್ಯೂಟರ್ ಜೊತೆ ಜೋಡಣೆ ಮಾಡಿ, ಅದರಲ್ಲಿ ಒಂದು ಪ್ರಿಂಟ್ ತಗೋಳೋ ಅಷ್ಟರಲ್ಲಿ ಸಾಕು ಸಾಕಾಗಿ ಹೋಗ್ತಿತ್ತು. ಮೊದಲೆಲ್ಲಾ, ಟಿ.ವಿ.ಎಸ್ ಇತರೆ ಪ್ರಿಂಟರ್ ಗಳೊಂದಿಗೆ ಅವುಗಳ ಡ್ರೈವರ್ (Driver Software) ತಂತ್ರಾಂಶ ಸಿಗದೆ, ಗ್ನು/ಲಿನಕ್ಸ್ ನಲ್ಲಿರಲಿ, ವಿಂಡೋಸ್ ನಲ್ಲಿ ಕೂಡ ಹೆಣಗಾಡಿದ್ದಿದೆ. ಈಗ ಪ್ರಿಂಟರ್ಗಳನ್ನು ಉಪಯೋಗಿಸೋದು ತುಂಬಾ ಸುಲಭ. ಪ್ರಿಂಟರ್ ತಂದು, ಅದರ ಕೇಬಲ್ ಅನ್ನು ನಿಮ್ಮ ಕಂಪ್ಯೂಟರ್ ಗೆ ಜೋಡಿಸಿ, ಸ್ವಿಚ್ ಆನ್ ಮಾಡಿದರಾಯಿತು (ಗ್ನು/ಲಿನಕ್ಸ್ ನಲ್ಲಿ ). ನಿಮಗೇ ತಿಳಿಯದಂತೆ,...

ಟೆಸ್ಟ್ ಡಿಸ್ಕ್(testdisk) – ಗ್ನು ಪಾರ್ಟೀಷನ್ ರಿಕವರಿ ಟೂಲ್

ಒಮ್ಮೆ ಕಂಪ್ಯೂಟರ್ನಲ್ಲಿ ಆಟ ಆಡ್ಲಿಕ್ಕೆ ಶುರು ಮಾಡಿದ್ರೆ ,ಅದನ್ನ ಕೆಲಸ ಮಾಡದ ಹಾಗೆ ಮಾಡಿ ಮತ್ತೆ ಅದನ್ನ ಮೊದಲಿನ ಸ್ಥಿತಿಗೆ ತರೋವರೆಗೂ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಕಡೆ ತಲೆ ಕೆಡಿಸಿ ಕೊಳ್ಳೊ ನನ್ನಂತಹವರಿಗೆ ಮತ್ತು, ಏನೋ ಮಾಡ್ಲಿಕ್ಕೋಗಿ ತಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನ ಡಾಟಾ ಕಳೆದು ಕೊಂಡು ಪರದಾಡುತ್ತಿರುವವರಿಗೆ ಈ ಲೇಖನ. ಮೊನ್ನೆ ಹಾರ್ಡಿಸ್ಕ್ ಪಾರ್ಟೀಷನ್ ಮಾಡಿ ಲಿನಕ್ಸ್ ಇನ್ಸ್ಟಾಲ್ ಮಾಡಿಕೊಳ್ಲಿಕ್ಕೆ ಹೊರಟ ಗೆಳೆಯನೊಬ್ಬ ಮಾಡಿದ ಸಣ್ಣ ತಪ್ಪೊಂದು ಅವನ ಎಲ್ಲ ಪಾರ್ಟೀಷನ್ ಗಳನ್ನ “ಕಾಣದಂತೆ ಮಾಯ ಮಾಡಿತ್ತು”....

« Previous Entries Next Entries »

Powered by HostRobust | © 2006 - 2014 Linuxaayana