ಲಿನಕ್ಸೂ – ತೊಂದರೆಗಳೂ – ಪರಿಹಾರಗಳು

ಮೊನ್ನೆ ಒಮ್ಮೆ ಹೀಗಾಯ್ತು… itrans ನಲ್ಲಿ ‘ಅರ್ಹ’ ಟೈಪಿಸಲು ಪ್ರಯತ್ನಿ ಸೋತೆ. kn-itrans.mim (/usr/share/m17n/kn-itrans.mim) ನಲ್ಲಿದ್ದ ಈ ಕೆಳಗಿನ ಸಂಕೇತ ಅರ್ಹ ಪದವನ್ನು ಟೈಪಿಸಲು ಬಿಡುತ್ತಿಲ್ಲ. (“rh” “ಱ್”) ; not in ITRANS Kannada table ಕಾಮೆಂಟ್ ಮಾಡಿ ಐ-ಬಸ್ ರೀಸ್ಟಾರ್ಟ್ ಮಾಡಿದ ನಂತರ ಸರಿಯಾಗಿ ಕೆಲಸ ಮಾಡುತ್ತಿದೆ. ಹೀಗೆ ಯಾವಾಗಲೋ ಒಮ್ಮೆ ವರ್ಷಾನುವರ್ಷಗಳಿಂದ ಲಿನಕ್ಸ್ ಬಳಸುತ್ತಿರುವ ನಮಗೇ ಹೊಸ ತೊಂದರೆ ತಾಪತ್ರಯಗಳು ಕಾಡುತ್ತಲೇ ಇರುತ್ತವೆ. ಹಾಗೆಂದು ಎಲ್ಲವೂ ಕೆಲಸ ಮಾಡುವುದೇ ಇಲ್ಲ...

Grub – ರಿಇನ್ಸ್ಟಾಲ್ ಮಾಡ್ಬೇಕಾದ್ರೆ…

ನಿಮ್ಮಲ್ಲನೇಕರು ಗ್ನು/ಲಿನಕ್ಸ್ ಜೊತೆಗೆ ವಿಂಡೋಸ್ ಬಳಸ್ತೀರ. ಕೆಲವೊಮ್ಮೆ ವಿಂಡೋಸ್ ರಿಇನ್ಸ್ಟಾಲ್ ಮಾಡ್ಬೇಕಾದಾಗ ನಿಮ್ಮ ಸಿಸ್ಟಂನಲ್ಲಿನ ಲಿನಕ್ಸ್ ಬೂಟ್ ಲೋಡರ್ (Grub) ಮತ್ತೆ ಬೂಟ್ ಸಮಯದಲ್ಲಿ ಬರದೆ ವಿಂಡೋಸ್ ಸೀದಾ ಬೂಟ್ ಆಗುವುದುಂಟು. ಇದಕ್ಕೆ ಕಾರಣ, ವಿಂಡೋಸ್ ನ ಇನ್ಸ್ಟಾಲರ್ ನಿಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನಲ್ಲಿರುವ ಮೊದಲನೆ ಬೂಟ್ ಸೆಕ್ಟರ್ ಅಥವಾ ಹಾರ್ಡಿಸ್ಕ್ ನ ಟ್ರಾಕ್ ಶುರುವಾಗುವ ಮೊದಲನೆ ಮೆಮೊರಿ ಲೊಕೇಷನ್ ಎಂದು ಕರೆಸಿಕೊಳ್ಳುವ ಎಂ.ಬಿ.ಆರ್ ಅನ್ನು ಹೊಸದಾಗಿ ಬರೆಯುವುದೇ ಆಗಿದೆ. ಮತ್ತೆ ಮೊದಲಿನಂತೆ...

ಫೆಡೋರ ೧೫ – ತರಲಿದೆ ಡೈನಮಿಕ್ ಫೈರ್‌ವಾಲ್

ಗ್ನು/ಲಿನಕ್ಸ್ ಸುರಕ್ಷತೆಯ ಹಿಂದೆ iptables ಎಂಬ ಸಣ್ಣದೊಂದು ತಂತ್ರಾಂಶದ ಪಾತ್ರ ಬಹಳ ಮಹತ್ವದ್ದು. ನಿಮ್ಮ ಕಂಪ್ಯೂಟರಿನ ನೆಟ್ವರ್ಕ್ ಕಾರ್ಡು ನಿಮ್ಮನ್ನು ಲೋಕದ ಇನ್ಯಾವುದೋ ಕಂಪ್ಯೂಟರನ್ನು ನಿಮ್ಮ ಸಂಪರ್ಕಜಾಲಕ್ಕೆ ತರುವಾಗ ಯಾವ ಸಂದೇಶ ನುಸುಳಬೇಕು, ಯಾವುದು ಬೇಡ, ಕಂಪ್ಯೂಟರಿನ ಯಾವ ಪೋರ್ಟ್ ಎತ್ತಕ್ಕೆ ಸಂದೇಶ ರವಾನಿಸ ಬೇಕು ಎಂಬುದೆಲ್ಲವನ್ನು ನಿರ್ಧರಿಸಿ ಬೇಡದ ಸಂಪರ್ಕವನ್ನು ಕಡಿಯಲು ಐ.ಪಿ.ಟೇಬಲ್ (iptable) ಸಹಾಯ ಮಾಡುತ್ತದೆ. ಕಂಪ್ಯೂಟರಿನ ಸಂದೇಶಗಳು ನೆಟ್ವರ್ಕ್ ಕೇಬಲುಗಳ ಮಧ್ಯೆ ಹರಿದಾಡುವಾಗ ಎಲ್ಲಿಗೆ,...

ಯುನಿಟಿ-೨ಡಿ

ಉಬುಂಟು ೧೧.೦೪ (ನ್ಯಾಟಿ ನಾರ್ವಾಲ್) ಬಳಸುವವರಿಗೆ ಹೊಸ ಯುನಿಟಿ(Unity) ಡೆಸ್ಟಾಪ್ ಇಷ್ಟವಾದರೂ ಅದನ್ನು ಬಳಸುವುದು ಕಷ್ಟವಾಗಬಹುದು. ಮುಖ್ಯ ಕಾರಣ ಗ್ರಾಫಿಕ್ಸ್ ಕಾರ್ಡ್ ನ ಬೆಂಬಲ. nVidia ದ ಅನೇಕ ಕಾರ್ಡ್ ಗಳು ಹಳೆಯ ಡ್ರೈವರ್ ಸಹಾಯದಿಂದ ಕೆಲಸ ಮಾಡಿದರೂ ಕೆಲವೊಮ್ಮೆ ಕಪ್ಪು ಪರದೆಯಿಂದ ಬಳಕೆದಾರರನ್ನು ಹೆದರಿಸುವುದುಂಟು. ಹೀಗಿದ್ದೂ ಯುನಿಟಿಯನ್ನೊಮ್ಮೆ ತಮ್ಮ ಕಂಪ್ಯೂಟರಿನಲ್ಲಿ ನೋಡಲಿಚ್ಚಿಸುವವರು ಯುನಿಟಿಯ ೨ಡಿ ಆವೃತ್ತಿಯನ್ನು ಉಪಯೋಗಿಸಿ ನೋಡಬಹುದು. ಯುನಿಟಿ ೨ಡಿ ಇನ್ಸ್ಟಾಲ್ ಮಾಡಿಕೊಳ್ಳಲು ಈ ಕೆಳಗಿನ ಕಮ್ಯಾಂಡ್...

ಬ್ರೌಸರ್ ಮೂಲಕ ಪ್ರಿಂಟರ್ ನಿರ್ವಹಣೆ

ಲಿನಕ್ಸ್ ನಲ್ಲಿ ಪ್ರಿಂಟರ್ ಗಳನ್ನು ನಿರ್ವಹಿಸುವುದರ ಬಗ್ಗೆ ಒಂದೆರಡು ಮಾತು. ಲಿನಕ್ಸ್ ಹಳೆಯ ಮತ್ತು ಹೊಸ ಪ್ರಿಂಟರ್ಗಳನ್ನು ಯಾವುದೇ ಡ್ರೈವರ್ ತಂತ್ರಾಂಶಗಳ ಇನ್ಸ್ಟಾಲೇಷನ್ ಇಲ್ಲದೆಯೇ ಉಪಯೋಗಕ್ಕೆ ಅಣಿಗೊಳಿಸಬಲ್ಲದು. ಡಾಟ್ ಮ್ಯಾಟ್ರಿಕ್ಸ್ ನಿಂದ ಹಿಡಿದು ಇಂದಿನ ಲೇಸರ್ ಪ್ರಿಂಟರ್ಗಳೂ ಸುಲಭವಾಗಿ ಕೆಲಸ ಮಾಡುತ್ತವೆ. ಆದರೆ ಕೆಲವೊಂದು ಖಾಸಗಿ ಮಾಲೀಕತ್ವದ ಪ್ರಿಂಟರ್ ಉತ್ಪಾದಕ ಸಂಸ್ಥೆಗಳು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಅಭಿವೃದ್ದಿಗೆ ಬೇಕಾದ ಮೂಲ ಹಾರ್ಡ್ವೇರ್ ನ ವಿವರಗಳನ್ನು ಬಹಿರಂಗಗೊಳಿಸದೆ ಇರುವುದರಿಂದ...

« Previous Entries

Powered by HostRobust | © 2006 - 2014 Linuxaayana