ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ ಕೊಂಚ ಮಟ್ಟಿನ ಚಟುವಟಿಕೆಯನ್ನು ಕಾಣಬಹುದಾಗಿರುತ್ತದೆ. ಹೀಗೆ ಉತ್ಸುಕರಾಗಿರುವವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ತಂತ್ರಾಂಶ ಸಂಬಂಧಿ ಅನುವಾದ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಇವರಿಗೆ...
ನಾಸಾ ಇತ್ತೀಚೆಗೆ code.nasa.gov ಎಂಬ ಹೊಸ ತಾಣವನ್ನು ತಂತ್ರಜ್ಞಾನ ಅಭಿವೃದ್ದಿಗೆ ತೆರೆದಿದೆ. ಇದು ಮುಂದೆ ನಾಸಾದ ಓಪನ್ಸೋರ್ಸ್ ತಾಣವಾಗಲಿದೆ. ತಂತ್ರಜ್ಞಾನದ ಅಭಿವೃದ್ದಿಯನ್ನು ಜನಸಮುದಾಯದ ಭಾಗವಹಿಸುವಿಕೆಯ ಮೂಲಕ ಅತಿ ಕಡಿಮೆ ಖರ್ಚಿನಲ್ಲೂ ಹಾಗು ಯಾವುದೇ ಸಂಸ್ಥೆಯ ಹೊರಗಿನ ಹೆಚ್ಚು ಬುದ್ದಿಮತ್ತೆಯ ಅನುಭವಿ ತಜ್ಞರಿಂದ ಪಡೆದುಕೊಳ್ಳುವುದಕ್ಕೆ ‘ಓಪನ್ಸೋರ್ಸ್‘ ಯೋಜನೆಗಳಲ್ಲಿ ಆಯಾ ಯೋಜನೆಯ ಸಂಪೂರ್ಣ ಸೋರ್ಸ್ ಅಥವ ಮಾಹಿತಿಯನ್ನು ಸ್ವತಂತ್ರವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ ಸೋರ್ಸ್ಕೋಡ್ ಉಪಯೋಗಿಸಿಕೊಂಡು...