Currently Browsing: ನುರಿತ ಬಳಕೆದಾರರಿಗೆ

Grub – ರಿಇನ್ಸ್ಟಾಲ್ ಮಾಡ್ಬೇಕಾದ್ರೆ…

ನಿಮ್ಮಲ್ಲನೇಕರು ಗ್ನು/ಲಿನಕ್ಸ್ ಜೊತೆಗೆ ವಿಂಡೋಸ್ ಬಳಸ್ತೀರ. ಕೆಲವೊಮ್ಮೆ ವಿಂಡೋಸ್ ರಿಇನ್ಸ್ಟಾಲ್ ಮಾಡ್ಬೇಕಾದಾಗ ನಿಮ್ಮ ಸಿಸ್ಟಂನಲ್ಲಿನ ಲಿನಕ್ಸ್ ಬೂಟ್ ಲೋಡರ್ (Grub) ಮತ್ತೆ ಬೂಟ್ ಸಮಯದಲ್ಲಿ ಬರದೆ ವಿಂಡೋಸ್ ಸೀದಾ ಬೂಟ್ ಆಗುವುದುಂಟು. ಇದಕ್ಕೆ ಕಾರಣ, ವಿಂಡೋಸ್ ನ ಇನ್ಸ್ಟಾಲರ್ ನಿಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನಲ್ಲಿರುವ ಮೊದಲನೆ ಬೂಟ್ ಸೆಕ್ಟರ್ ಅಥವಾ ಹಾರ್ಡಿಸ್ಕ್ ನ ಟ್ರಾಕ್ ಶುರುವಾಗುವ ಮೊದಲನೆ ಮೆಮೊರಿ ಲೊಕೇಷನ್ ಎಂದು ಕರೆಸಿಕೊಳ್ಳುವ ಎಂ.ಬಿ.ಆರ್ ಅನ್ನು ಹೊಸದಾಗಿ ಬರೆಯುವುದೇ ಆಗಿದೆ. ಮತ್ತೆ ಮೊದಲಿನಂತೆ...

ಫೆಡೋರ ೧೫ – ತರಲಿದೆ ಡೈನಮಿಕ್ ಫೈರ್‌ವಾಲ್

ಗ್ನು/ಲಿನಕ್ಸ್ ಸುರಕ್ಷತೆಯ ಹಿಂದೆ iptables ಎಂಬ ಸಣ್ಣದೊಂದು ತಂತ್ರಾಂಶದ ಪಾತ್ರ ಬಹಳ ಮಹತ್ವದ್ದು. ನಿಮ್ಮ ಕಂಪ್ಯೂಟರಿನ ನೆಟ್ವರ್ಕ್ ಕಾರ್ಡು ನಿಮ್ಮನ್ನು ಲೋಕದ ಇನ್ಯಾವುದೋ ಕಂಪ್ಯೂಟರನ್ನು ನಿಮ್ಮ ಸಂಪರ್ಕಜಾಲಕ್ಕೆ ತರುವಾಗ ಯಾವ ಸಂದೇಶ ನುಸುಳಬೇಕು, ಯಾವುದು ಬೇಡ, ಕಂಪ್ಯೂಟರಿನ ಯಾವ ಪೋರ್ಟ್ ಎತ್ತಕ್ಕೆ ಸಂದೇಶ ರವಾನಿಸ ಬೇಕು ಎಂಬುದೆಲ್ಲವನ್ನು ನಿರ್ಧರಿಸಿ ಬೇಡದ ಸಂಪರ್ಕವನ್ನು ಕಡಿಯಲು ಐ.ಪಿ.ಟೇಬಲ್ (iptable) ಸಹಾಯ ಮಾಡುತ್ತದೆ. ಕಂಪ್ಯೂಟರಿನ ಸಂದೇಶಗಳು ನೆಟ್ವರ್ಕ್ ಕೇಬಲುಗಳ ಮಧ್ಯೆ ಹರಿದಾಡುವಾಗ ಎಲ್ಲಿಗೆ,...

ಯುನಿಟಿ-೨ಡಿ

ಉಬುಂಟು ೧೧.೦೪ (ನ್ಯಾಟಿ ನಾರ್ವಾಲ್) ಬಳಸುವವರಿಗೆ ಹೊಸ ಯುನಿಟಿ(Unity) ಡೆಸ್ಟಾಪ್...

ಬ್ರೌಸರ್ ಮೂಲಕ ಪ್ರಿಂಟರ್ ನಿರ್ವಹಣೆ

ಲಿನಕ್ಸ್ ನಲ್ಲಿ ಪ್ರಿಂಟರ್ ಗಳನ್ನು ನಿರ್ವಹಿಸುವುದರ ಬಗ್ಗೆ ಒಂದೆರಡು ಮಾತು. ಲಿನಕ್ಸ್ ಹಳೆಯ ಮತ್ತು ಹೊಸ ಪ್ರಿಂಟರ್ಗಳನ್ನು ಯಾವುದೇ ಡ್ರೈವರ್ ತಂತ್ರಾಂಶಗಳ ಇನ್ಸ್ಟಾಲೇಷನ್ ಇಲ್ಲದೆಯೇ ಉಪಯೋಗಕ್ಕೆ ಅಣಿಗೊಳಿಸಬಲ್ಲದು. ಡಾಟ್ ಮ್ಯಾಟ್ರಿಕ್ಸ್ ನಿಂದ ಹಿಡಿದು ಇಂದಿನ ಲೇಸರ್ ಪ್ರಿಂಟರ್ಗಳೂ ಸುಲಭವಾಗಿ ಕೆಲಸ ಮಾಡುತ್ತವೆ. ಆದರೆ ಕೆಲವೊಂದು ಖಾಸಗಿ ಮಾಲೀಕತ್ವದ ಪ್ರಿಂಟರ್ ಉತ್ಪಾದಕ ಸಂಸ್ಥೆಗಳು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಅಭಿವೃದ್ದಿಗೆ ಬೇಕಾದ ಮೂಲ ಹಾರ್ಡ್ವೇರ್ ನ ವಿವರಗಳನ್ನು ಬಹಿರಂಗಗೊಳಿಸದೆ ಇರುವುದರಿಂದ...

USB ಡ್ರೈವ್ ನಲ್ಲಿ ಲಿನಕ್ಸ್

unetbootin – ಇದರ ಬಗ್ಗೆ _ರಾಫವ_ ಒಂದು ಕಾಮೆಂಟಿನಲ್ಲಿ ಹೇಳಿದ್ದ ನೆನಪಿದೆಯೇ? ಹೊಸದಾಗಿ ಲಿನಕ್ಸ್ ಬಳಸಬೇಕು ಅಂತಿರೋರು, ಹೊಸ ಹೊಸ ಗ್ನು/ಲಿನಕ್ಸ್ ಆವೃತ್ತಿಗಳನ್ನು ಟೆಸ್ಟ ಮಾಡಿನೋಡ್ಬೇಕು ಅಂತಿರೋ ನನ್ನಂತಹವರು ಪ್ರತಿ ಭಾರಿಯೂ ಲಿನಕ್ಸ್ ಅನ್ನು ನಮ್ಮ ಲ್ಯಾಪ್ಟಾಪ್ ಗಳಲ್ಲಿ ಅಥವಾ ಡೆಸ್ಕಾಪ್ ಗಳಲ್ಲಿ ಪುನ: ಪುನ: ಇನ್ಸ್ಟಾಲ್ ಮಾಡ್ಕೊಳ್ಳಿಕ್ಕೆ ಇಷ್ಟ ಪಡಲ್ಲ. ಹಾಗಿದ್ರೆ ಅದನ್ನ ಬಳಸೋದಾದ್ರೂ ಹ್ಯಾಗೆ? ವರ್ಚುಅಲ್ ಬಾಕ್ಸ್ – ಸಂಪದದಲ್ಲಿ ಬರುತ್ತಿರೋ ತಂತ್ರಜ್ಞಾನ ಕುರಿತಾದ ಲೇಖನಗಳನ್ನು ನೀವು ಓದ್ತಿದ್ರೆ...

« Previous Entries Next Entries »

Powered by HostRobust | © 2006 - 2014 Linuxaayana