Currently Browsing: ತಂತ್ರಾಂಶಗಳು

ಮೊಝಿಲ್ಲಾ ಫೈರ್ಫಾಕ್ಸ್ ಆಂಡ್ರಾಯ್ ಮೊಬೈಲ್ ಆವೃತ್ತಿ ಕನ್ನಡದಲ್ಲಿ

ಬಿಡುಗಡೆಗೆ ಮುನ್ನ – ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದೆ ಸ್ಯಾಮ್‌ಸಂಗ್ ಮೊಬೈಲ್‌ಗಳು ೯ ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತಿರುವ ವಿಷಯ ತಿಳಿದ ಮೊಝಿಲ್ಲಾ ತಂಡ, ಆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಮೊಝಿಲ್ಲಾ ಫೈರ್ಫಾಕ್ಸ್‌ನ ಫೆನೆಕ್ (Fennec) ಆವೃತ್ತಿಯನ್ನು ಹೊರತರಲು ಸಂಬಂಧಪಟ್ಟ ಸಮುದಾಯಗಳನ್ನು ಮಾರ್ಚ್‌ನಲ್ಲಿ ಸಂಪರ್ಕಿಸಿತ್ತು. ಅದರಲ್ಲಿ ಕನ್ನಡವೂ ಒಂದು. ಫೆನೆಕ್ ಆವೃತ್ತಿ ೩೧ರಲ್ಲಿ ಕನ್ನಡವನ್ನೂ ನೋಡುವ ಅವಕಾಶ ಇದರಿಂದ ಲಭ್ಯವಾಯಿತು (ಮೊಬೈಲ್‌ನಲ್ಲಿ). ಈಗಾಗಲೇ ಮೊಝಿಲ್ಲಾ ಡೆಸ್ಕ್‌ಟಾಪ್ ಆವೃತ್ತಿ...

ಲಿನಕ್ಸ್ ತಂತ್ರಾಂಶಗಳ ಅವಲಂಬನೆಯ ಬಗ್ಗೆ ತಿಳಿಯುವುದು ಹೇಗೆ?

ಈಗಾಗಲೇ ನಿಮ್ಮ ಲಿನಕ್ಸ್‌ನಲ್ಲಿ ಇನ್ಸ್ಟಾಲ್ ಮಾಡಿರುವ ತಂತ್ರಾಂಶಗಳು ಒಂದಲ್ಲಾ ಒಂದು ತಂತ್ರಾಂಶಗಳ ಜೊತೆಗೆ ಅವಲಂಬಿತವಾಗಿರುತ್ತವೆ. ಯಾವುದೇ ಒಂದು ತಂತ್ರಾಂಶವನ್ನು ಅದರಲ್ಲೂ ಸಿಸ್ಟಂ ಲೈಬ್ರರಿಗಳೆಂದು ಕರೆಸಿಕೊಳ್ಳುವ ತಂತ್ರಾಂಶಗಳನ್ನು ಅನ್‌ಇನ್ಸ್ಟಾಲ್ ಮಾಡುವ ಮುನ್ನ, ಇನ್ಯಾವುದೇ ತಂತ್ರಾಂಶಗಳಿಗೆ ತೊಂದರೆ ಆಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳಿತು. ಅದರಲ್ಲೂ ಸಿಸ್ಟಂ ಅಡ್ಮಿನಿಸ್ಟ್ರೇಟರ್‌ಗಳಿಗೆ ಇದರ ಅವಶ್ಯಕತೆ ತುಂಬಾ ಇರುತ್ತದೆ.  ಈ ಕೆಳಗಿನ ಕಮ್ಯಾಂಡ್ ಬಳಸಿ ಯಾವುದೇ ತಂತ್ರಾಂಶಗಳ...

ವಚನ ಸಂಚಯ ವರ್ಡ್‌ಪ್ರೆಸ್ ಪ್ಲಗಿನ್(ಪ್ರಯೋಗಾತ್ಮಕ/ಬೀಟಾ)

೧೧ ಮತ್ತು ೧೨ನೇ ಶತಮಾನದ, ಕನ್ನಡದ ಅತಿ ಪ್ರಮುಖ ಸಾಹಿತ್ಯ ಪ್ರಕಾರಗಳಲ್ಲೊಂದಾದ ವಚನ ಸಾಹಿತ್ಯವನ್ನು ನಮ್ಮ ‘ವಚನ ಸಂಚಯ’ ತಂಡ ನಿಮ್ಮ ಮುಂದೆ ತಂದಿರುವುದು ನಿಮಗೆ ತಿಳಿದೇ ಇದೆ. ಇದನ್ನು ದಿನ ನಿತ್ಯ ಎಲ್ಲರಿಗೆ ತಲುಪಿಸುವ ಕೆಲಸ ಟ್ವಿಟರ್ ಮತ್ತು ಫೇಸ್‌ಬುಕ್ ಮೂಲಕವೂ ನೆಡೆದಿದೆ. ಪ್ರಾಯೋಗಿಕವಾಗಿ ಇದನ್ನು ವರ್ಡ್‌ಪ್ರೆಸ್ ಬಳಸುವ ಎಲ್ಲ ಕನ್ನಡ ಬ್ಲಾಗಿಗರೂ ತಮ್ಮ ಬ್ಲಾಗ್‌ಗಳಲ್ಲಿ ಬಳಸುವಂತಾಗಲು ಈ ಪ್ಲಗಿನ್‌ ಅನ್ನು ಅಭಿವೃದ್ದಿ ಪಡಿಸಲಾಗಿರುತ್ತದೆ. ಆಸಕ್ತರು ಇದನ್ನು ಡೌನ್‌ಲೋಡ್ ಮಾಡಿ ನಿಮ್ಮ...

ವಿಕಿಮೀಡಿಯ ಇನ್ಪುಟ್ ‌ಟೂಲ್ಸ್ ಬಳಸಿ, ಕಂಗ್ಲೀಷ್ ಬದಲು ಕನ್ನಡದಲ್ಲಿ ಬರೆಯಿರಿ

ಸಾಮಾಜಿಕ ಜಾಲತಾಣಗಳಲ್ಲಿ, ಎಸ್.ಎಮ್.ಎಸ್, ಇ-ಮೇಲ್‌ಗಳಲ್ಲಿ ಬರೆಯುವ ಕಂಗ್ಲೀಷ್ (kanglish) ಓದಲು ಹಿಂಸೆಯಾದಾಗ ಅದೆಷ್ಟೇ ಒಳ್ಳೆಯ ಮಾಹಿತಿ ಇದ್ದರೂ, ಅದನ್ನು ಓದದೆ ಮುಂದುವರೆಯುವುದು ನನ್ನ ಅಭ್ಯಾಸ. ಆದರೆ ಇದರಿಂದ ಭಾಷೆಗೆ ಇಂಟರ್‌ನೆಟ್‌ನಲ್ಲಿ ದೊರಕಬೇಕಾದ ಜಾಗವನ್ನೂ ಕಂಗ್ಲೀಷ್ ಬರೆಯುವ ಅನೇಕರು ಕಸಿಯುತ್ತಿರುವುದನ್ನು ಕಂಡಾಗ, ಮತ್ತೆ ಮತ್ತೆ ಕನ್ನಡ ಟೈಪಿಸುವುದು ಹೇಗೆ ಎಂದು ಹೇಳುವುದನ್ನು ಆಗ್ಗಾಗೆ ಮಾಡಿದರೂ, ಅದನ್ನು ಇನ್ನೊಮ್ಮೆ ಬ್ಲಾಗಿಸಲೇ ಬೇಕಿರುವ ಅಗತ್ಯತೆ ಹೆಚ್ಚುತ್ತಿದೆ. ಕನ್ನಡದ ಪದಗಳನ್ನು...

ಲಿನಕ್ಸ್‌ನಲ್ಲಿ ಮದರ್‌ಬೋರ್ಡ್ ಮಾದರಿ ಕಂಡುಹಿಡಿಯುವುದು

  dmidecode -t 2 ಕಮ್ಯಾಂಡ್ ಬಳಸಿಕೊಂಡು ನಿಮ್ಮ ಕಂಪ್ಯೂಟರಿನ ಮದರ್‌ಬೋರ್ಡ್‌ನ ಮಾದರಿಯನ್ನು ಸುಲಭವಾಗಿ ಕಂಡುಕೊಳ್ಳಬಹುದು.  ಉಬುಂಟುವಿನಲ್ಲಿ ನೇರವಾಗಿ ಈ ಕಮ್ಯಾಂಡ್ ಬಳಸಲು ಸಾಧ್ಯವಾಗದಿದ್ದಲ್ಲಿ, ಈ ಕೆಳಕಂಡಂತೆ  sudo ಬಳಸಿ ಉತ್ತರ ಪಡೆದುಕೊಳ್ಳಬಹುದು. ~$ sudo dmidecode -t 2 # dmidecode 2.12 SMBIOS 2.7 present. Handle 0x0011, DMI type 2, 15 bytes Base Board Information Manufacturer: LENOVO Product Name: 3254D7Q Version: Not Available Serial Number:...

« Previous Entries Next Entries »

Powered by HostRobust | © 2006 - 2014 Linuxaayana