ಸಮೂಹ ಸಂಚಯ – ಲಿಪ್ಯಂತರಣದ ಕಾರ್ಯದಲ್ಲಿ ಭಾಗವಹಿಸುವುದು ಹೇಗೆ?

ಕನ್ನಡ ಪುಸ್ತಕಗಳ ಹುಡುಕಿ ಬನ್ನಿ – ಸಮೂಹ ಸಂಚಯ

ಕನ್ನಡ ಪುಸ್ತಕಗಳನ್ನು ಸುಲಭವಾಗಿ ಇಂಟರ್ನೆಟ್‌ನಲ್ಲಿ ಮತ್ತು ವಿಕಿಪೀಡಿಯದಲ್ಲಿ ಹುಡುಕುವಂತೆ ಮಾಡಲು ಹೊರಟಿರುವ ಸಮೂಹ ಸಂಚಯ – ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ ಕನ್ನಡ ಪುಸ್ತಕಗಳ ಹೆಸರು, ಲೇಖಕರು ಹಾಗೂ ಪ್ರಕಾಶಕರ ಹೆಸರನ್ನು ಕಂಗ್ಲೀಷ್‌ನಿಂದ ಕನ್ನಡೀಕರಿಸುತ್ತಿದೆ. ೫೦೦೦ದಷ್ಟು ಪುಟಗಳನ್ನು ಹೆಣೆಯುವುದರೊಂದಿಗೆ ೨೦೦೦ ಪುಸ್ತಕಗಳು ಕನ್ನಡಿಗರಿಗೆ ಸುಲಭವಾಗಿ ಇಂಟರ್‌ನೆಟ್‌ನಲ್ಲಿ (ಕನ್ನಡದಲ್ಲೇ) ಹುಡುಕಲು ಸಿಗಲಿವೆ. ಕನ್ನಡ ಸಂಚಯದ ಹೊಸ ಯೋಜನೆ – ಸಮೂಹ ಸಂಚಯ ಸಮುದಾಯದ ಒಗ್ಗಟ್ಟಿನ...

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ ಬಳಗವು ಹಂಚಿಕೊಳ್ಳಲು ಹರ್ಷಿಸುತ್ತದೆ. ನಿರಂಜನ (೧೯೨೪-೧೯೯೨) ,  ಇದು ಕುಳಕುಂದ ಶಿವರಾವ್ ಅವರ ಲೇಖನಾಮ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಅವರ ಸುಮಾರು ಐದು ದಶಕಗಳ ಸಂಮೃದ್ಧವಾದ ಕೃತಿಗಳು ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು...

ಪುಸ್ತಕ: ಕಂಪ್ಯೂಟರ್ ಮತ್ತು ಕನ್ನಡ

ಪದವಿ ವಿದ್ಯಾರ್ಥಿಗಳು ಮತ್ತು ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಆಸಕ್ತಿ ಇರುವವರಿಗಾಗಿ ಪರಿಚಯಾತ್ಮಕ ಪಠ್ಯಪುಸ್ತಕ “ಕಂಪ್ಯೂಟರ್ ಮತ್ತು ಕನ್ನಡ”ವನ್ನು ಮಿತ್ರಮಾಧ್ಯಮ ತಂಡ ನೆನ್ನೆ ಹೊರತಂದಿದೆ. ಸೆಪ್ಟೆಂಬರ್ ೨೯, ೨೦೧೪ರಂದು ಸುರಾನಾ ಕಾಲೇಜಿನಲ್ಲಿ ನೆಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಖ್ಯಾತ ಕನ್ನಡ ಗಾಯಕ ‘ರಘು ದೀಕ್ಷಿತ್’ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಪುಸ್ತಕ ಕ್ರಿಯೇಟೀವ್ ಕಾಮನ್ಸ್ ಪರವಾನಗಿಯಡಿ ಲಭ್ಯವಿದ್ದು, ಬೇಳೂರು ಸುದರ್ಶನ, ಟಿ.ಜಿ ಶ್ರೀನಿಧಿ, ಡಾ. ಯು.ಬಿ ಪವನಜ,...

IPv6 ನಿಷ್ಕ್ರಿಯಗೊಳಿಸುವುದು ಹೇಗೆ?

ಉಬುಂಟು ೧೨.೦೪, ಲಿನಕ್ಸ್ ಮಿಂಟ್ ಇತ್ಯಾದಿಗಳಲ್ಲಿ IPv6 ನಿಂದಾಗಿ ಇಂಟರ್ನೆಟ್ ಸಂಪರ್ಕ ಬಹಳ ನಿಧಾನವಾಗಿ ಕೆಲಸ ಮಾಡುವುದು. ಇದು ಸಾಮಾನ್ಯವಾಗಿ ಕೇಳಿಬರುವ ತೊಂದರೆಯಾಗಿದೆ. IPv6ನ ಬಳಕೆ ಇನ್ನೂ ದಿನಬಳಕೆಯಲ್ಲಿ ಇಲ್ಲದಿರುವುದರಿಂದ ಇದನ್ನು ನಿಷ್ಕ್ರಿಯಗೊಳಿಸುವುದರಿಂದ ಈ ತೊಂದರೆ ನಿವಾರಿಸಬಹುದು. ನಿಷ್ಕ್ರಿಯಗೊಳಿಸಲು ಈ ಕೆಳಗೆ ನೀಡಿರುವ ಹಂತಗಳನ್ನು ಹಂತ ಹಂತವಾಗಿ ನಿಮ್ಮ ಉಬುಂಟುವಿನಲ್ಲಿ ಬಳಸಿ: ೧. Ctrl+Alt+T ಪ್ರೆಸ್ ಮಾಡಿ ಟರ್ಮಿನಲ್ ತೆರೆಯಿರಿ. ೨. ಟರ್ಮಿನಲ್‌ನಲ್ಲಿ ಈ ಸಾಲನ್ನು ಟೈಪ್ ಮಾಡಿ: sudo gedit...

« Previous Entries Next Entries »

Powered by HostRobust | © 2006 - 2014 Linuxaayana