ಮೊಝಿಲ್ಲಾ ಫೈರ್ಫಾಕ್ಸ್ ಆಂಡ್ರಾಯ್ ಮೊಬೈಲ್ ಆವೃತ್ತಿ ಕನ್ನಡದಲ್ಲಿ

by | Apr 28, 2014 | ತಂತ್ರಾಂಶಗಳು, ಸಮುದಾಯ, ಸುದ್ದಿ | 0 comments

ಬಿಡುಗಡೆಗೆ ಮುನ್ನ – ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದೆ

ಸ್ಯಾಮ್‌ಸಂಗ್ ಮೊಬೈಲ್‌ಗಳು ೯ ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತಿರುವ ವಿಷಯ ತಿಳಿದ ಮೊಝಿಲ್ಲಾ ತಂಡ, ಆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಮೊಝಿಲ್ಲಾ ಫೈರ್ಫಾಕ್ಸ್‌ನ ಫೆನೆಕ್ (Fennec) ಆವೃತ್ತಿಯನ್ನು ಹೊರತರಲು ಸಂಬಂಧಪಟ್ಟ ಸಮುದಾಯಗಳನ್ನು ಮಾರ್ಚ್‌ನಲ್ಲಿ ಸಂಪರ್ಕಿಸಿತ್ತು. ಅದರಲ್ಲಿ ಕನ್ನಡವೂ ಒಂದು. ಫೆನೆಕ್ ಆವೃತ್ತಿ ೩೧ರಲ್ಲಿ ಕನ್ನಡವನ್ನೂ ನೋಡುವ ಅವಕಾಶ ಇದರಿಂದ ಲಭ್ಯವಾಯಿತು (ಮೊಬೈಲ್‌ನಲ್ಲಿ). ಈಗಾಗಲೇ ಮೊಝಿಲ್ಲಾ ಡೆಸ್ಕ್‌ಟಾಪ್ ಆವೃತ್ತಿ ಕನ್ನಡದಲ್ಲಿ ಲಭ್ಯವಿರುವುದು ನಿಮಗೆ ತಿಳಿದಿರಬಹುದು.
image

ಫೆನೆಕ್‌ಗೆ ಕನ್ನಡ ಆವೃತ್ತಿ ಸೇರಿಸಲು ಮೊದಲು ಅದರಲ್ಲಿರುವ ಎಲ್ಲ ಇಂಗ್ಲೀಷ್ ವಾಕ್ಯಗಳನ್ನು ಕನ್ನಡೀಕರಿಸುವ ಕೆಲಸ ಮೊದಲಾಗಬೇಕಿತ್ತು. ೪೪೫೯ ಪದಗಳನ್ನು ಒಳಗೊಂಡ ದೊಡ್ಡ ಮೊತ್ತದ ಸಾಲುಗಳನ್ನು ಕನ್ನಡೀಕರಿಸುವ ಕೆಲಸವನ್ನು ಮೊಝಿಲ್ಲಾ ಕನ್ನಡ ಸಮುದಾಯ ಪೂರ್ಣಗೊಳಿಸಿದೆ.

ಜೊತೆಗೆ ಇದಕ್ಕೆ ಸಂಬಂಧಿಸಿದ ಇತರೆ ಕೆಲಸಗಳ ವೇಳಾಪಟ್ಟಿ ಇಂತಿದೆ:

Activity Assignee Timeline
Translation (product/web) L10n team Now –19 May
Productization – bug to come L10n team Now –19 May
Single-locale testing Regional community Now –26 May
Sign-off review Jeff 26 May
maemo-locales (Adds locale to multilocale Fennec) Jeff 27 May – 6 June
  • ಇದರಲ್ಲಿ ಮೊದಲನೆ ಹಂತದ ಕೆಲಸ ಏಪ್ರಿಲ್ ಎರಡನೇ ವಾರದಲ್ಲೇ ಮುಗಿದದ್ದು ಖುಷಿಯ ಸಂಗತಿ.
  • Productization – ಕೆಲಸ ಸಾಗಿದೆ.

ಜೊತೆಗೆ ಈಗ ಮುಗಿಸಲಾಗಿರುವ ಅನುವಾದದ ಕೆಲಸವನ್ನು ಮೊಬೈಲ್‌ ಅಪ್ಲಿಕೇಷನ್ ಬಳಸಿ ಟೆಸ್ಟ್ ಮಾಡಬಹುದಾಗಿದೆ. ಅದಕ್ಕೆ ಸಂಬಂಧಿಸಿದ ಕೊಂಡಿಯನ್ನು ಕೆಳಗೆ ನೀಡಲಾಗಿದೆ.

[   ] fennec-31.0a2.kn.android-arm.apk 06-May-2014 09:59 30M
[   ] fennec-31.0a2.kn.android-arm.checksums 06-May-2014 09:59 678
[TXT] fennec-31.0a2.kn.android-arm.checksums.asc 06-May-2014 09:59 198

ಮೊಝಿಲ್ಲಾದ ಮೊಬೈಲ್‌ನ ಅನುವಾದ ಕಾರ್ಯಗಳು Firefox for Android (Aurora) ಈ ಕೊಂಡಿಯಲ್ಲಿ ನೆಡೆದವು. ಮೊಬೈಲ್ ಅಪ್ಲಿಕೇಷನ್ ಅನ್ನು ಇನ್ಸ್ಟಾಲ್ ಮಾಡಿಕೊಂಡ ನಂತರ ಅನುವಾದದಲ್ಲಿ ಕಂಡು ಬರುವ ತಪ್ಪುಗಳನ್ನು ನೀವೇ ಖುದ್ದಾಗಿ ಇಲ್ಲಿ ಸರಿಪಡಿಸಬಹುದು (ಈಗಾಗಲೇ ಇಲ್ಲಿ ನಿಮ್ಮ ಲಾಗಿನ್ ಇಲ್ಲದಿದ್ದರೆ, ಈ ಲೇಖನಕ್ಕೆ ಪ್ರತಿಕ್ರಿಯಿಸಿ ಅಥವಾ ನನಗೊಂದು ಸಂದೇಶ ಕಳುಹಿಸಿ).ಎಪಿಕೆ ಫೈಲ್ ಅನ್ನು ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದರ ಮೇಲೆ ಕ್ಲಿಕ್ ಮಾಡಿದಲ್ಲಿ, ಅದು ಸಾಮಾನ್ಯ ಅಪ್ಲಿಕೇಷನ್ ನಂತೆ ಇನ್ಸ್ಟಾಲ್ ಆಗುತ್ತದೆ. (ಗಮನಿಸಿ: ನಿಮ್ಮ ಮೊಬೈಲ್ ಫೋನ್ ಅನ್ನು ರೂಟ್ ಮಾಡುವ ಅವಶ್ಯಕತೆ ಇಲ್ಲ).
image

ನೇರವಾಗಿ ಅನುವಾದಗಳನ್ನು ತಿದ್ದುವುದು ಕಷ್ಟವಾದಲ್ಲಿ ಅದನ್ನು ಈ ಲೇಖನದ ಅಡಿಯಲ್ಲಿ ಚರ್ಚಿಸಬಹುದು.

ಮೊಝಿಲ್ಲಾ ಫೈರ್ಫಾಕ್ಸ್‌ನ ಇತರೆ ಯೋಜನೆಗಳನ್ನು ಕನ್ನಡೀಕರಿಸಲೂ ಕೂಡ ನೀವು ನಮ್ಮ ಜೊತೆಗೂಡಬಹುದು. – https://mozilla.locamotion.org/kn/
ವಿಶೇಷ: ಮೊಝಿಲ್ಲಾ ಆಂಡ್ರಾಯ್ಡ್ ಕನ್ನಡ ತಂತ್ರಾಂಶದಲ್ಲಿ ಯಾಹೂ ಮತ್ತು ಗೂಗಲ್ ಸರ್ಚ್ ಪ್ಲಗಿನ್‌ಗಳ ಜೊತೆಗೆ ಕನ್ನಡ ವಿಕಿಪೀಡಿಯ ಹಾಗೂ ವಿಕ್ಷನರಿ ಸರ್ಚ್ ಪ್ಲಗಿನ್‌ಗಳನ್ನೂ ಸೇರಿಸಲಾಗಿದೆ. ಅಮೇಜಾನ್ ಇಂಡಿಯಾ ಸರ್ಚ್ ಸೇರಿಸಲಾಗಿದ್ದು ಪ್ಲಿಪ್‌ಕಾರ್ಟ್ ಕೂಡ ಇನ್ಮುಂದಿನ ದಿನಗಳಲ್ಲಿ ಇಲ್ಲಿ ಸೇರುವ ಸಾಧ್ಯತೆ ಇದೆ.

ಕನ್ನಡ ಮೊಝಿಲ್ಲಾ ಫೈರ್ಫಾಕ್ಸ್ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಕೊಂಡಿಗಳನ್ನು ಬಳಸಿ (https://www.mozilla.org/en-US/firefox/all/):

ಕನ್ನಡ ಫೈರ್ಫಾಕ್ಸ್ (ಡೆಸ್ಕ್‌ಟಾಪ್‌ಗಾಗಿ) Downloadವಿಂಡೋಸ್
Downloadಮ್ಯಾಕ್
Downloadಲಿನಕ್ಸ್
Downloadಲಿನಕ್ಸ್ ೬೪ ಬಿಟ್
ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

Share This