ಟೆಕ್ನಿಶಿಯನ್ (ಲಿನಕ್ಸ್) ಕೆಲಸ

ಈ ವೃತ್ತಿಯನ್ನು ಬಯಸುservices_linuxವ ಅಭ್ಯರ್ಥಿಯು ಲಿನಕ್ಸ್ ವರ್ಕ್-ಸ್ಟೇಶನ್‌ಗಳನ್ನು ಮತ್ತು ಡೆಸ್ಕ್‌ಟಾಪ್‌ಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕಿರುತ್ತದೆ. ಒಬ್ಬ ಟೆಕ್ನಿಶಿಯನ್ ಆದ ವ್ಯಕ್ತಿಯು ಹಾರ್ಡ್ ಡಿಸ್ಕ್ ವಿಭಾಗ ಮಾಡುವಿಕೆ (ಪಾರ್ಟಿಶನಿಂಗ್), ಅನುಸ್ಥಾಪನೆ (ಇನ್ ‌ಸ್ಟಲೇಶನ್), ಸೇವೆಗಳನ್ನು (ಸರ್ವಿಸಸ್) ನಿರ್ವಹಿಸುವಿಕೆ, ಬಳಕೆದಾರರನ್ನು ನೋಡಿಕೊಳ್ಳುವಿಕೆ, ಜಾಲಬಂಧದಲ್ಲಿನ ತೊಂದರೆ ಸರಿಪಡಿಸುವಿಕೆ, ಸಣ್ಣಪುಟ್ಟ ಸ್ಕ್ರಿಪ್ಟ್ ಬರೆಯುವಿಕೆ ಮತ್ತು ಕಾರ್ಯಾಚರಣೆ ವ್ಯವಸ್ಥೆಯಲ್ಲಿ (ಆಪರೇಟಿಂಗ್ ಸಿಸ್ಟಂ) ತೊಂದರೆಗಳನ್ನು ಕೊನೆಗಾಣಿಸುವ ಜ್ಞಾನವನ್ನು ಹೊಂದಿರಬೇಕಿರುತ್ತದೆ. ಈ ಪರಿಣಿತಿಯನ್ನು ಹೊಂದಿರುವವರು ಲಿನಕ್ಸ್ ಬಳಸುವ ಕಂಪನಿಗಳಲ್ಲಿ, ಶಾಲೆ, ಕಾಲೇಜುಗಳಲ್ಲಿ, ಡೇಟಾಸೆಂಟರುಗಳಲ್ಲಿ, ಮಳಿಗೆ ಮುಂತಾದೆಡೆಗಳಲ್ಲಿ ಕೆಲಸ ಗಿಟ್ಟಿಸುವ ಅವಕಾಶವಿರುತ್ತದೆ. ಟೆಕ್ನಿಶಿಯನ್ ಆಗಿ ಹೆಚ್ಚಿನ ವರ್ಷಗಳ ಅನುಭವ ಹೊಂದಿದ ಮೇಲೆ ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್ ಆಗಿ ಬಡ್ತಿ ಹೊಂದಬಹುದು.

ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಕೆಲಸ ಮಾಡುತ್ತಿರುವ ಶಂಕರ್ ಪ್ರಸಾದ್ ರೆಡ್‌ಹ್ಯಾಟ್ ನಲ್ಲಿ ಕೆಲಸ ಮಾಡುತ್ತಿದ್ದು. ಸಂಚಯದ ಸಕ್ರಿಯ ಸದಸ್ಯರೂ ಹೌದು. ಫೈರ್‌ಫಾಕ್ಸ್ , ಜಿನೋಮ್, ಓಪನ್ ಅಫೀಸ್ ಇತ್ಯಾದಿ ತಂತ್ರಾಂಶಗಳ ಕನ್ನಡೀಕರಣ ಇವರ ಮುಖ್ಯ ಕೊಡುಗೆ.
banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This