ಆಂಡ್ರಾಯ್ಡ್ ಅನ್ವಯ ಅಭಿವೃದ್ಧಿ


android-app-developer2010 ರ ಈಚೆಗೆ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿರುವ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯೂ ಸಹ ಲಿನಕ್ಸ್ ಕರ್ನಲ್‌ ಆಧರಿತವಾಗಿದೆ. ಇದರ ಕೋಡ್‌ನಲ್ಲಿನ ಮುಕ್ತತೆ ಕಾರಣದಿಂದಾಗಿಯೆ ಇದರ ಬಳಕೆ ಈ ಮಟ್ಟಿಗೆ ಬೆಳದಿರುವುದು. ಇಂತಹ ಆಂಡ್ರಾಯ್ಡಿನ ಅನ್ವಯಗಳನ್ನು (ಆಪ್) ಅಭಿವೃದ್ಧಿಪಡಿಸುವವರಿಗೆ ಈಗ ಎಲ್ಲಿಲ್ಲದ ಬೇಡಿಕೆ ಇದೆ. ಮೊಬೈಲ್ ಮುಖಾಂತರ ಜನರನ್ನು ತಲುಪಲು ಶತಾಯಗತಾಯ ಪ್ರಯತ್ನಿಸುತ್ತಿರುವ ಪ್ರತಿಯೊಂದು ಕಂಪನಿ, ಪ್ರತಿಯೊಬ್ಬ ವ್ಯಕ್ತಿಯೂ ಸಹ ತಮ್ಮದೆ ಆದ ಆಪ್ ಹೊಂದಿರಲು ಬಯಸುತ್ತಿದ್ದಾರೆ. ಇದಕ್ಕೆ ಪೂರಕವಾದ ಕೋರ್ಸುಗಳೂ ಸಹ ಎಲ್ಲೆಡೆ ದೊರೆಯುತ್ತಿದೆ. ಲಿನಕ್ಸ್ ಮತ್ತು ಆಂಡ್ರಾಯ್ಡ್ ಅನ್ವಯಗಳನ್ನು ಅಭಿವೃದ್ಧಿಪಡಿಸುವಿಕೆಯಲ್ಲಿನ ತರಬೇತಿಯು ಸಾಕಷ್ಟು ಅವಕಾಶಗಳು ಒದಗಿಬರುವುದರಲ್ಲಿ ಸಂಶಯೇ ಇಲ್ಲ.
ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಕೆಲಸ ಮಾಡುತ್ತಿರುವ ಶಂಕರ್ ಪ್ರಸಾದ್ ರೆಡ್‌ಹ್ಯಾಟ್ ನಲ್ಲಿ ಕೆಲಸ ಮಾಡುತ್ತಿದ್ದು. ಸಂಚಯದ ಸಕ್ರಿಯ ಸದಸ್ಯರೂ ಹೌದು. ಫೈರ್‌ಫಾಕ್ಸ್ , ಜಿನೋಮ್, ಓಪನ್ ಅಫೀಸ್ ಇತ್ಯಾದಿ ತಂತ್ರಾಂಶಗಳ ಕನ್ನಡೀಕರಣ ಇವರ ಮುಖ್ಯ ಕೊಡುಗೆ.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This