ಅನ್ವಯ (ಅಪ್ಲಿಕೇಶನ್) ಮತ್ತು ಜಾಲ (ವೆಬ್) ವಿಕಸನೆಗಾರ

ನಾಗಲೋಟದಲ್ಲಿ ಓಡುತ್ತಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ಲಿನಕ್ಸಿನ ಪಾಲಿನ ಕುರಿತು ನಿಮಗೆಲ್ಲಾ ಸಾಕಷ್ಟು ಅರಿವಿರಬಹುದು. ಇಂದಿನ ಕಾರ್ಪೋರೇಟ್ ಜಗತ್ತಿನಲ್ಲಿ ಅದರ ಬಳಕೆ ಹೆಚ್ಚಾದ ಕಾರಣ ಜಾಲ ಆಧರಿತವಾಗಿ ವಿಷಯವನ್ನು ಪ್ರಕಟಿಸುವಿಕೆ ಕಾರ್ಯವು ಬಹುಮಟ್ಟಿಗೆ ಲಿನಕ್ಸ್, PHP, MySQl ಮತ್ತು Apache ಮೇಲೆಯೆ ಅವಲಂಬಿತವಾಗಿದೆ. ಈ ಕಾರಣದಿಂದಾಗಿ, ಪ್ಲಗ್ ‌ಇನ್ ‌ಗಳು ಮತ್ತು ಆಡ್-ಆನ್ ‌ಗಳನ್ನು ಅಭಿವೃದ್ಧಿಪಡಿಸುವ, ಅನೇಕ ಪ್ರೊಗ್ರಾಮಿಂಗ್ ಭಾಷೆಯಲ್ಲಿ ಕೋಡ್ ‌ ಬರೆಯುವ, ಡೇಟಾಬೇಸ್ ‌ಗಳನ್ನು ಮತ್ತು ಅನ್ವಯಗಳನ್ನು ವಿನ್ಯಸಿಸುವ ಮತ್ತು ಗಣಕಸೇವೆಗಳನ್ನು ನಿರ್ವಹಿಸುವ ತಂತ್ರಜ್ಞರ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದೆ. ಇಷ್ಟೆ ಅಲ್ಲದೆ, ಡೆಸ್ಕ್ ‌ಟಾಪ್ ‌ ಕ್ಷೇತ್ರದಲ್ಲಿ ಲಿನಕ್ಸ್ ಬಳಕೆಯು ಹೆಚ್ಚುತ್ತಿರುವುದರಿಂದಲೂ ಸಹ ಹಲವು ತಂತ್ರಾಂಶ ತಯಾರಕರು ಮತ್ತು ಸಂಸ್ಥೆಗಳು ತಮ್ಮ ಅನ್ವಯಗಳು ಮತ್ತು ಆಟಗಳ ಲಿನಕ್ಸ್ ಆವೃತ್ತಿಗಳನ್ನು ಹೊರತರುತ್ತಿದ್ದಾರೆ. ಈ ಬಗೆಯ ಅನ್ವಯಗಳು ಹೆಚ್ಚಾಗಿ GTK+ ಮತ್ತು QT ಯಂತಹ ಮೇಲುಸ್ತರದ ಕೋಡ್ ‌ ಮಾಡುವ ಟೂಲ್‌ಕಿಟ್‌ಗಳನ್ನು ಅಥವ ಕೆಳಸ್ತರದ ಪ್ರೊಗ್ರಾಮಿಂಗ್ ಭಾಷೆಗಳಾದಂತಹ C++, C ಮತ್ತು ಅಸೆಂಬ್ಲರ್ ಬಳಸಿಕೊಳ್ಳಲಾಗಿರುತ್ತದೆ.

ಕನ್ನಡದಲ್ಲಿ ತಂತ್ರಾಂಶಗಳು – ಲೋಕಲೈಸೇಷನ್ ಸುತ್ತ ಕೆಲಸ ಮಾಡುತ್ತಿರುವ ಶಂಕರ್ ಪ್ರಸಾದ್ ರೆಡ್‌ಹ್ಯಾಟ್ ನಲ್ಲಿ ಕೆಲಸ ಮಾಡುತ್ತಿದ್ದು. ಸಂಚಯದ ಸಕ್ರಿಯ ಸದಸ್ಯರೂ ಹೌದು. ಫೈರ್‌ಫಾಕ್ಸ್ , ಜಿನೋಮ್, ಓಪನ್ ಅಫೀಸ್ ಇತ್ಯಾದಿ ತಂತ್ರಾಂಶಗಳ ಕನ್ನಡೀಕರಣ ಇವರ ಮುಖ್ಯ ಕೊಡುಗೆ.
banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This