0xB16B00B5 ಮತ್ತು ಮೈಕ್ರೋಸಾಫ್ಟ್

ಲಿನಕ್ಸ್ ಕರ್ನೆಲ್‌ ಅನ್ನು  ಮೈಕ್ರೋಸಾಫ್ಟ್‌ನ ಹೈಪರ್‌ವಿ ವರ್ಚುಅಲೈಸೇಷನ್ ತಂತ್ರಾಂಶಕ್ಕೆ ಸೇರಿಸುವ ಕೋಡ್‌ನಲ್ಲಿದ್ದ ಅಸಭ್ಯ ಪದ  hex ಕೋಡ್‌ನಲ್ಲಿದ್ದದ್ದನ್ನು ಲಿನಕ್ಸ್ ಕರ್ನೆಲ್ ಡೆವೆಲಪರ್ ಮತ್ತು ಬ್ಲಾಗರ್ ಮ್ಯಾಥ್ಯೂ ಗ್ಯಾರೆಟ್ ಬೆಳಕಿಗೆ ತಂದಿದ್ದಾರೆ. 0xB16B00B5 ಎಂಬ ಈ ಪದ ‘BIG BOOBS’ ಎಂದು ಅರ್ಥೈಸಲ್ಪಡುತ್ತದೆ. ಬ್ಯುಸಿನೆಸ್ ಪ್ರಪಂಚದಲ್ಲಿ ಪಳಗಿರುವವರು, ಬೆಳದಿರುವ ಅನೇಕ ಮಂದಿ ಇಂತಹ ಅಸಂಭದ್ದ ನಡವಳಿಕೆಗೆ ಈಗ ಕಿಂಚಿತ್ತೂ ಬೆಲೆಕೊಡುವುದಿಲ್ಲ. ಜೊತೆಗೆ ಇಂತಹ ಘಟನೆಗಳು ಲಿನಕ್ಸ್ ಕರ್ನೆಲ್‌ನ ೨.೪ ರ ಆವೃತ್ತಿ ಇಂದೀಚೆಗೆ ಬಹಳಷ್ಟು ಬಾರಿ ಕಂಡಿವೆ ಕೂಡ. ಮೈಕ್ರೋಸಾಫ್ಟ್‌ನ ಡೆವೆಲಪರ್ ಒಬ್ಬನಿಂದ ಹೊರಬಂದಿದೆ ಎನ್ನಲಾದ ಈ ಪದದ ಬಗ್ಗೆ, ಮೈಕ್ರೋಸಾಫ್ಟ್ ನೆಟ್‌ವರ್ಕ್ ಸಮುದಾಯದ ಎಲ್ಲರ ಬಳಿ ಕ್ಷಮೆಯಾಚಿಸಿ, ಇದನ್ನು ಅಳಿಸಿ ಹಾಕಲು ಈಗಾಗಲೇ ಪ್ಯಾಚ್ ಬಿಡುಗಡೆ ಮಾಡಿರುವುದಾಗಿ ಹೇಳಿದೆ.

ಈ ಸುದ್ದಿಯ ಸುತ್ತಲಿನ ಹೆಚ್ಚಿನ ಚರ್ಚೆ ಹಾಗೂ ಮಾಹಿತಿಗೆ ಈ ಕೊಂಡಿಯನ್ನು ನೋಡಿ.

ಸುದ್ದಿ ಮೂಲ: ಸ್ಲಾಶ್ ಡಾಟ್

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This