ಉಬುಂಟುವಿನಲ್ಲಿ ಗೆಸ್ಟ್ ಸೆಷನ್ ನಿರ್ಬಂಧಿಸುವುದು ಹೇಗೆ?

ಉಬುಂಟುವಿನಲ್ಲಿ ಲಾಗಿನ್ ಆಗುವಾಗ, ನಿಮ್ಮ ಹೆಸರಿನ ಕೆಳಗೆ ‌’Guest’ ಎಂಬ ಹೆಸರಿನ ಬಳಕೆದಾರನನ್ನೂ ಕಾಣುತ್ತೀರಲ್ಲವೇ? ಅದನ್ನು ಎಂದಾದರು ಕ್ಲಿಕ್ ಮಾಡಿ ನೋಡಿದ್ದೀರಾ? ಕ್ಲಿಕ್ ಮಾಡಿದ್ದೇ ಆದಲ್ಲಿ, ಪಾಸ್‌ವರ್ಡ್ ಇಲ್ಲದೆಯೇ ಯಾರು ಬೇಕಾದರೂ ನಿಮ್ಮ ಕಂಪ್ಯೂಟರಿನಲ್ಲಿ ಇದರ ಮೂಲಕ ಕೆಲಸ ಮಾಡಬಹುದು.

ಸುರಕ್ಷೆಯ ವಿಚಾರವಾಗಿ ನಾವು ಈ ‌Guest ಬಳಕೆದಾರನನ್ನು ನಿರ್ಬಂಧಿಸಬಹುದು.

ಮೊದಲಿಗೆ ಈ ಕೆಳಗಿನ ಕಮ್ಯಾಂಡ್ ಅನ್ನು ಟರ್ಮಿನಲ್ ‌ನಲ್ಲೋ ಅಥವಾ Alt+F2 ಪ್ರೆಸ್ ಮಾಡಿದಾಗ ಬರುವ ಪ್ರಾಮ್ಟ್ ನಲ್ಲೋ ಟೈಪಿಸಿ.

sudo gedit /etc/lightdm/lightdm.conf

ನಿಮ್ಮ ಮುಂದೆ ಬರುವ ಕಡತದಲ್ಲಿ ಈ ಕೆಳಗಿನ ಸಾಲುಗಳನ್ನು ಕಾಣುತ್ತೀರಿ

[SeatDefaults]

greeter-session=unity-greeter
user-session=ubuntu

ಈ ಸಾಲುಗಳಿಗೆ ಕೆಳಗಿನ ಸಾಲೊಂದನ್ನು ಸೇರಿಸಿ, ಸೇವ್ ಮಾಡಿದರೆ ಆಯ್ತು.

allow-guest=false

‌Guest ಬಳಕೆದಾರ ನಿಮ್ಮ ಕಂಪ್ಯೂಟರ್ ರೀಸ್ಟಾರ್ಟ್ ಆದ ನಂತರದಿಂದ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ.

ಸೂಚನೆ: ಡೆಸ್ಕ್‌ಟಾಪ್‌ನ ಬಲ ಮೂಲೆಯಲ್ಲಿ ಕಾಣುವ ನಿಮ್ಮ ಪ್ರೊಫೈಲ್ ಮೆನು ಕೂಡ ಇದರಿಂದ ಕಾಣೆಯಾಗುತ್ತದೆ

ಇದನ್ನು ಮತ್ತೆ ಎನೇಬಲ್ ಮಾಡಲು, ಮೇಲೆ ಸೇರಿಸಿದ ಸಾಲನ್ನು ತೆಗೆದರೆ ಆಯ್ತು.

One Response to “ಉಬುಂಟುವಿನಲ್ಲಿ ಗೆಸ್ಟ್ ಸೆಷನ್ ನಿರ್ಬಂಧಿಸುವುದು ಹೇಗೆ?”

  1. silver account says:

    ಪ್ರತಿಕ್ರಿಯೆಗೆ ಧನ್ಯವಾದಗಳು . ಬಹುಶ: ಹೊಸ ಇಂಟರ್ ಫೇಸ್ ದೇ ಸಮಸ್ಯೆ . ಬೂಟ್ ಆಗುವಾಗ ಉಬುಂಟು ಗುಲಾಬಿ ಸ್ಕ್ರೀನ್ ಕಾಣಿಸುತ್ತದೆ . ಲಾಗಿನ್ , ಪಾಸ್ವರ್ಡ್ ಸ್ಕ್ರೀನ್ ಬರುವ ಹೊತ್ತಿಗೆ ಸ್ಕ್ರೀನ್ ಕಪ್ಪಗೆ ಇರುತ್ತದೆ. ಮೌಸ್ ನ ಕರ್ಸರ್ ಕಾಣುತ್ತದೆ. ಲಾಗಿನ್ / ಪಾಸ್ವರ್ಡ್ ಕಾಣುವದೇ ಇಲ್ಲ. ಈ ಹಂತದಲ್ಲಿ ತಾನೇ ನಾವು ಇಂಟರ್ ಫೇಸ್ ಬದಲಿಸಬಹುದಾದದ್ದು ? ಬೇರೆ ಎಲ್ಲ ಕ್ಯಾರಕ್ಟರ್ ಟರ್ಮಿನಲ್ ಸಿಗುತ್ತವೆ. ಯಾವುದೋ ಕಾನ್ಫಿಗರೇಶನ್ ಫೈಲಿನಲ್ಲಿ ಎಲ್ಲೋ ಈ ಸೆಟ್ಟಿಂಗ್ ಇರಬೇಕು. ಅದನ್ನು ಪತ್ತೆ ಮಾಡಿ ಬದಲಿಸಿದರೆ ಸರಿ ಹೋದೀತು. ನೋಡೋಣ. ನಮ್ಮ ಲಿನಕ್ಸಾಯಣದ ಗುರುಗಳ ಮೊರೆ ಹೋಗಬೇಕು! ಅವರು ಈ ಬಗ್ಗೆ ಸಹಾಯ ಮಾಡಬಹುದು.

Leave a Reply to silver account Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This