ಗೂಗಲ್ ಕ್ರೋಮ್ – ಒಂದು ಪರಿಚಯ

ಗೂಗಲ್ ಕ್ರೋಮ್ ಇಂದಿನ ಅಂತರ್ಜಾಲಕ್ಕೆಂದೇ ಹೇಳಿ ಮಾಡಿಸಿರುವ ವೆಬ್ ಬ್ರೌಸರ್ ತಂತ್ರಾಂಶ – ಇಂಟರ್ನೆಟ್ – ವೆಬ್ – ಅಂತರ್ಜಾಲ ಎಂದೆಲ್ಲಾ ಕರೆಸಿಕೊಳ್ಳುವ ಕಂಪ್ಯೂಟರ್ ಜಾಲ ಇಂದು ಅನೇಕಾನೇಕ ಸಾಧ್ಯತೆಗಳ ತಾಣವೆಂದೇ ಹೇಳಬಹುದುಇಂಟರ್ನೆಟ್ ಬಳಕೆದಾರ ಕೇವಲ ತಾನು ನೋಡಿದ್ದನ್ನಷೇ ಮತ್ತೆ ತೋರಿಸುವ ವಿಶ್ವದ ಕಿಂಡಿಯಾಗಿ ಉಳಿದಿಲ್ಲಬದಲಾಗಿ ವಿಶ್ವವನ್ನು ನೋಡುತ್ತಾತನಗೆ ಮಾಡಬೇಕೆನಿಸಿದ ಕೆಲಸಗಳನ್ನೆಲ್ಲಾ ಮಾಡಲು ಸಾಧ್ಯವಾಗಿಸಬಲ್ಲ ಸಾಧನವೂ ಆಗಿದೆ.ಕ್ರೋಮ್ ಅತಿವೇಗದ ಮತ್ತು ನೀಳವಾದ ಬ್ರೌಸರ್ ಆಗಿದ್ದುಬಳಕೆದಾರನಿಗೆ ಆಧುನಿಕ ಇಂಟರ್ನೆಟ್‌ನ ಸಂಪೂರ್ಣವಾಗಿ ಆಸ್ವಾದಿಸಲು ಅನುವು ಮಾಡಿಕೊಡುತ್ತದೆ.ಇಂದಿಗೆ ೧೬೦ ಮಿಲಿಯನ್ ಬಳಕೆದಾರರು ವಿಶ್ವದಾದ್ಯಂತ ಗೂಗಲ್ ಕ್ರೋಮ್ ಬಳಸುತ್ತಾರೆ.

ಇಂಟರ್ನೆಟ್ ಬ್ರೌಸ್ ಮಾಡುವಾಗ ಗೂಗಲ್ ಕ್ರೋಮ್‌ನ ಸಂಪೂರ್ಣ ಉಪಯೋಗ ಪಡೆಯಲು ನೀವು ಈ ಕೆಳಗಿನ ಮಾಹಿತಿಯನ್ನು ಬಳಸಿಕೊಳ್ಳಬಹುದು.

  • ಯಾವುದೇ ಪದವನ್ನು ಅಥವಾ ಮಾಹಿತಿಯನ್ನು ಇಂಟರ್ನೆಟ್ ನಲ್ಲಿ ಸರ್ಚ್ ಮಾಡಲು ಗೂಗಲ್ ಕ್ರೋಮ್ ‌ನ ‘omnibox’ ಬಳಸಬಹುದುಅಂದರೆ ಇಂಟರ್ನೆಟ್ ಜಾಲತಾಣಗಳ ವಿಳಾಸ ಟೈಪಿಸಲು ಬಳಸುವ ಆಡ್ರೆಸ್ ಬಾರ್ ಅನ್ನೇ ಗೂಗಲ್ ಸರ್ಚ್ ಮಾಡಲು ಬಳಸಬಹುದುಉದಾಹರಣೆಗೆ ಕೆಳಗಿನ ಚಿತ್ರದಲ್ಲಿ [Hardware Zone] ಸರ್ಚ್ ಮಾಡುತ್ತಿರುವುದನ್ನು ನೋಡಿ.

ಕ್ರೋಮ್ ನೀವು ಟೈಪಿಸುತ್ತಿರುವ ಪದವನ್ನು ತಾನೇ ಕಂಡುಹಿಡಿಯಲಿಕ್ಕೆ ಪ್ರಯತ್ನಿಸುತ್ತಿರುವುದನ್ನು ನೀವು ಕಾಣಬಹುದುಪೂರ್ಣವಾಗಿ ಟೈಪಿಸುವುದಕ್ಕಿಂತ ಮುಂಚೆಯೇ ನಿಮಗೆ ನೀವು ಹುಡುಕುತ್ತಿರಬಹುದಾದ ವಿಷಯವನ್ನು ಗೂಗಲ್ ನಿಮ್ಮ ಪರದೆಯ ಮುಂದೆ ಸೂಚಿಸಬಹುದುಇಳಿಬಿದ್ದಿರುವ ಮೆನುವಿನಲ್ಲಿ ನಿಮಗೆ ಬೇಕಾದ ಫಲಿತಾಂಶವನ್ನು ಕ್ಲಿಕ್ ಮಾಡಿ ನಿಮಗೆ ಬೇಕಿರುವ ಉತ್ತರ ಪಡೆದುಕೊಳ್ಳಬಹುದು.

ವಿಳಾಸ ಹುಡುಕುವುದು ಕೂಡ ಒಂದು ಕ್ಲಿಕ್ ನಷ್ಟೇ ದೂರಮೇಲ್ ಸಂದೇಶವೆಬ್‌ಸೈಟ್ ಇತ್ಯಾದಿಗಳಲ್ಲಿ ನಿಮಗೆ ಕಾಣಿಸುವ ಆಡ್ರೆಸ್‌ಗಳನ್ನು ಸೆಲೆಕ್ಟ್ ಮಾಡಿಕೊಂಡು ಅದರ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ “Search Google.com for ___” ಎನ್ನುವ ಆಯ್ಕೆ ಆಯ್ದುಕೊಂಡರಾಯ್ತುನಿಮಗೆ ಬೇಕಿರುವ ವಿಳಾಸದ ಹೆಚ್ಚಿನ ವಿವರ ಮ್ಯಾಪ್ ಜೊತೆಗೆ ನಿಮ್ಮ ಪರದೆಯ ಮೇಲಿರುತ್ತದೆ.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This