FUEL – ಕನ್ನಡ ತಾಂತ್ರಿಕ ಪದಕೋಶದ ಏಕೀಕರಣಕ್ಕೊಂದು ಕಾರ್ಯಾಗಾರ

by | Jan 27, 2012 | ವಿಶೇಷ, ಸುದ್ದಿ | 0 comments

ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ  ಕೊಂಚ ಮಟ್ಟಿನ ಚಟುವಟಿಕೆಯನ್ನು ಕಾಣಬಹುದಾಗಿರುತ್ತದೆ. ಹೀಗೆ ಉತ್ಸುಕರಾಗಿರುವವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ತಂತ್ರಾಂಶ ಸಂಬಂಧಿ ಅನುವಾದ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಇವರಿಗೆ ಎದುರಾಗುವ ಪ್ರಮುಖ ಸಮಸ್ಯೆಯೆಂದರೆ ಕೆಲವು ಇಂಗ್ಲೀಷ್ ಪದ ಅಥವ ಪದಗುಚ್ಛಗಳಿಗೆ ಸನ್ನಿವೇಶಕ್ಕೆ ಅನುಗುಣವಾದ ಸೂಕ್ತವಾದ ಪರ್ಯಾಯ ಕನ್ನಡ ಪದ ದೊರೆಯದೆ ಇರುವುದು. ಇಂತಹ ಸಂದರ್ಭಗಳಲ್ಲಿ ಇವರು ತಮಗೆ ತೋಚಿದ ಯಾವುದೊ ಒಂದು ಪದವನ್ನು ಬಳಸಿದಾಗ ಆ ತಂತ್ರಾಂಶವನ್ನು ಬಳಸುವ ಬಳಕೆದಾರರಿಗೆ ಸಹ ಗೊಂದಲ ಉಂಟಾಗಿ, ಅದರ ಇಂಗ್ಲೀಷ್‌ನ ಆವೃತ್ತಿಗೆ ಮರಳುವ ಸಾಧ್ಯತೆ ಇರುತ್ತದೆ.

ಇದನ್ನು ಪರಿಹರಿಸಲು, ಇಂತಹ ಅನುವಾದ ಕಾರ್ಯಗಳಲ್ಲಿ ಬಳಸಬಹುದಾದ ಒಂದು ಶಿಷ್ಟ ಪದಕೋಶವು ಲಭ್ಯವಿರಬೇಕಾಗುತ್ತದೆ. ಎಲ್ಲಾ ಅನ್ವಯಿಕಗಳಲ್ಲಿ ಏಕಪ್ರಕಾರದ ಪರ್ಯಾಯ ಕನ್ನಡ ಪದ/ಪದಗುಚ್ಛವನ್ನು ಬಳಸುವುದಲ್ಲಿ, ಸಾಮಾನ್ಯ ಜನರಿಗೆ ಅಂತಹ ಅನ್ವಯಿಕ ತಂತ್ರಾಂಶವು ಬಳಕೆಗೆ ಸುಲಭವಾಗುತ್ತದೆ. ಇದರಿಂದಾಗ ಅನುವಾದದ ಉದ್ಧೇಶವು ನೆರವೇರುವುದರ ಜೊತೆಗೆ ಉಚಿತ ಹಾಗು ಮುಕ್ತ ತಂತ್ರಾಂಶಗಳ ಜನಪ್ರಿಯತೆಯೂ ಸಹ ಹೆಚ್ಚುವ ಸಾಧ್ಯತೆ ಇರುತ್ತದೆ. ಈ ಕೆಲಸಕ್ಕಾಗಿ, ತಂತ್ರಾಂಶಗಳ ಅನುವಾದದಲ್ಲಿ ಪದೇ ಪದೆ ಬಳಸಲಾಗುವ ಪದಗಳ (FUEL-Frequently Used Entries in Localization) ಒಂದು ಶಿಷ್ಟ ಕೋಶವನ್ನು ಮಾಡಬೇಕಿದೆ. ಈಗಾಗಲೆ ಸುಮಾರು ೫೦೦ ಕ್ಕೂ ಮಿಕ್ಕ ಇಂತಹ ಪದ/ಪದಗುಚ್ಛಗಳನ್ನು ಗುರುತಿಸಲಾಗಿದ್ದು , ಮುಂದಿನ ಹಂತದದಲ್ಲಿ ಇವುಗಳ ಪರಿಶೀಲನೆಯ ಕಾರ್ಯ ಆಗಬೇಕಿದೆ. ಇದಕ್ಕಾಗಿ ಕೆಲವು ಭಾಷಾಶಾಸ್ತ್ರಜ್ಞರು, ಅನುವಾದಕರು, ಪತ್ರಕರ್ತರು, ಗಣಕತಂತ್ರಜ್ಞರು ಒಂದೆಡೆ ಕಲೆತು ಈ ಪದಗಳನ್ನು ಅವಲೋಕಿಸಬೇಕಿದೆ. ಒಟ್ಟಿನಲ್ಲಿ ಒಮ್ಮತದಿಂದ ಒಂದು ಶಿಷ್ಟತೆಯನ್ನು ರೂಪಸುವ ಅಗತ್ಯವಿದೆ. ಈ ಕಾರ್ಯಕ್ಕಾಗಿ ಸುಮಾರು ೨ ದಿನ ತಗಲುವ ಸಾಧ್ಯತೆ ಇರುವುದರಿಂದ, ಉಚಿತ ಹಾಗು ಮುಕ್ತ ತಂತ್ರಾಂಶದ ಕನ್ನಡ ಸಮುದಾಯವಾದ ಸಂಚಯದ (sanchaya.net) ವತಿಯಿಂದ ಈ ಜನವರಿ ೨೮, ೨೯ ರಂದು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಸಿ ಐ ಎಸ್‌ನಲ್ಲಿ (ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿ) ಸಿಐಎಸ್ ಹಾಗು ರೆಡ್‌ ಹ್ಯಾಟ್‌ನ (Red Hat) ನೆರವಿನೊಂದಿಗೆ FUEL-ಕನ್ನಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

FUEL ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಾಣಬಹುದು: www.fuelproject.org ಹಾಗು https://fedorahosted.org/fuel/

Creative Commons License
Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at https://linuxaayana.net.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

Share This