ನಾಸಾದ ಹೊಸ ಓಪನ್‌ಸೋರ್ಸ್ ತಾಣ

ನಾಸಾ ಇತ್ತೀಚೆಗೆ code.nasa.gov ಎಂಬ ಹೊಸ ತಾಣವನ್ನು ತಂತ್ರಜ್ಞಾನ ಅಭಿವೃದ್ದಿಗೆ ತೆರೆದಿದೆ. ಇದು ಮುಂದೆ ನಾಸಾದ ಓಪನ್‌ಸೋರ್ಸ್ ತಾಣವಾಗಲಿದೆ.

ತಂತ್ರಜ್ಞಾನದ ಅಭಿವೃದ್ದಿಯನ್ನು ಜನಸಮುದಾಯದ ಭಾಗವಹಿಸುವಿಕೆಯ ಮೂಲಕ ಅತಿ ಕಡಿಮೆ ಖರ್ಚಿನಲ್ಲೂ ಹಾಗು ಯಾವುದೇ ಸಂಸ್ಥೆಯ ಹೊರಗಿನ ಹೆಚ್ಚು ಬುದ್ದಿಮತ್ತೆಯ ಅನುಭವಿ ತಜ್ಞರಿಂದ ಪಡೆದುಕೊಳ್ಳುವುದಕ್ಕೆ ‘ಓಪನ್‌ಸೋರ್ಸ್‘ ಯೋಜನೆಗಳಲ್ಲಿ ಆಯಾ ಯೋಜನೆಯ ಸಂಪೂರ್ಣ ಸೋರ್ಸ್ ಅಥವ ಮಾಹಿತಿಯನ್ನು ಸ್ವತಂತ್ರವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ ಸೋರ್ಸ್‌ಕೋಡ್ ಉಪಯೋಗಿಸಿಕೊಂಡು ಮನುಕುಲಕ್ಕೆ ಬೇಕಾದ ಅತ್ಯುತ್ತಮ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿ, ಅದನ್ನು ಮತ್ತೆ ಸಮುದಾಯಕ್ಕೆ ಹಿಂತಿರುಗಿಸುವಂತಾಗಲು ‘ಓಪನ್‌ಸೋರ್ಸ್’ ಯೊಜನೆಗಳು ಸಹಾಯ ಮಾಡುತ್ತವೆ. ತಂತ್ರಜ್ಞಾನದ ಮಟ್ಟದಲ್ಲಿ ಅತ್ಯುನ್ನತ ಮಟ್ಟದ ವಿಜ್ಞಾನಿಗಳನ್ನು ಹೊಂದಿರುವ ನಾಸಾ ಸಂಸ್ಥೆ ಫ್ರೀ ಮತ್ತು ಓಪನ್‌ಸೋರ್ಸ್ ಯೋಜನೆಗಳನ್ನು ತನ್ನ ಕಾರ್ಯಕ್ರಮಗಳಲ್ಲಿ ಮುಂಚಿನಿಂದಲೂ ಉಪಯೋಗಿಸಿಕೊಂಡು ಬಂದಿದೆ. ಸೈಂಟಿಫಿಕ್ ಲಿನಕ್ಸ್ ಅದಕ್ಕೊಂದು ಉತ್ತಮ ಉದಾಹರಣೆ. ಉಪಯೋಗಿಸಿಕೊಳ್ಳುವುದರ ಜೊತೆಗೆ ಅವುಗಳ ಅಭಿವೃದ್ದಿಯ ಕಡೆಗೂ ಮತ್ತದನ್ನು ಓಪನ್‌ಸೋರ್ಸ್ ಸಮುದಾಯಕ್ಕೆ ಹಿಂತಿರುಗಿಸುವಲ್ಲೂ ನಾಸಾ ಮುಂದಿದೆ. ಆದರೆ, ತನಗೆ ಬೇಕಿರುವ ಯೋಜನೆಗಳನ್ನು ಮೊದಲ ಭಾರಿಗೆ ನಾಸಾ ತನ್ನದೇ ವೆಬ್‌ಸೈಟ್‌ನ ಮೂಲಕ ಲೋಕಕ್ಕೆ ತೆರೆದಿಟ್ಟಿದೆ.

ಸಧ್ಯಕ್ಕೆ ಇದರಲ್ಲಿ ಓಪನ್‌ಸೋರ್ಸ್ ತಂತ್ರಾಂಶ ಯೋಜನೆಗಳ ಮೇಲೆ ಕೆಲಸ ಮಾಡುವ ಕಂಪೆನಿಗಳ ಡೈರೆಕ್ಟರಿ ಮತ್ತು ನಾಸಾ ತಾನು ಉಪಯೋಗಿಸುವ ಓಪನ್‌ಸೋರ್ಸ್ ತಂತ್ರಾಂಶಗಳ ದಾಖಲೆಗಳನ್ನು ಇರಿಸಿಕೊಂಡಿದೆ.

ವಿಜ್ಞಾನ, ತಂತ್ರಜ್ಞಾನ ಆಸಕ್ತರಿಗೆ ಮತ್ತು ಮುಕ್ತ ಹಾಗು ಸ್ವತಂತ್ರ ತಂತ್ರಾಂಶ ಅಭಿವೃದ್ದಿಯ ಕಡೆ ಗಮನಕೊಡುವ ಅನೇಕರಿಗೆ ಇದು ಸಿಹಿ ಸುದ್ದಿ.

Creative Commons License
Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at http://linuxaayana.net.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This