ಯು.ಎಸ್.ಬಿ ನಲ್ಲೊಂದು ಪಿ.ಸಿ – ೨೫$ ಅಥವಾ ೧೫೦೦ ರೂಗಳಿಗೆ

by | Nov 1, 2011 | ಸುದ್ದಿ | 0 comments

ಕಂಪ್ಯೂಟರ್ ಗೇಮ್ ತಂತ್ರಜ್ಞ ಡೇವಿಡ್ ಬಾರ್ಬೆನ್ ಚಿಕ್ಕದೊಂದು ಯು.ಎಸ್.ಬಿ ಪಿ.ಸಿ ಕಂಡುಹಿಡಿದಿದ್ದಾರೆ. ನೀವು ಈಗಾಗಲೇ ಬಳಸುತ್ತಿರಬಹುದಾದ ಯು.ಎಸ್.ಬಿ ಸ್ಟಿಕ್ ಗೆ ಹೆಚ್ಚುವರಿ ಎಚ್.ಡಿ.ಎಮ್.ಐ ಪೋರ್ಟ್ ಅನ್ನು ಮತ್ತೊಂದು ತುದಿಗೆ ಸಿಕ್ಕಿಸಿ ಲಿನಕ್ಸ್ ತಂತ್ರಾಂಶದೊಡನೆ ಕೆಲಸ ಮಾಡುವಂತೆ ಇದನ್ನು ಅಭಿವೃದ್ದಿ ಪಡಿಸಲಾಗಿದೆ. ಈ ಕಂಪ್ಯೂಟರ್ ೨೫$ ಗಳ ಆಸುಪಾಸಿನಲ್ಲಿ ದೊರೆಯುತ್ತದೆ. ಇದರಲ್ಲಿ ೭೦೦ ಮೆಗಾಹರ್ಟ್ಸ್ ನ ಆರ್ಮ್೧೧ ಪ್ರೋಸೆಸರ್ ೧೨೮ ಎಂಬಿ ಮೆಮೋರಿಯೊಂದಿಗೆ OpenGL ES 2.0 ಇದ್ದು, ಉತ್ತಮ ೧೦೮೦ಪಿ ಗ್ರಾಫಿಕ್ಸ್ ಔಟ್‌ಪುಟ್ ಕೊಡುವಂತೆ ನೋಡಿಕೊಳ್ಳಲಾಗಿದೆ. ಯಾವುದೇ ಲಿನಕ್ಸ್ ಆವೃತ್ತಿಯನ್ನು ಬಳಸಲು ಇದರಲ್ಲಿ ಸಾಧ್ಯವಿದ್ದರೂ ಉಬುಂಟುವಿನೊಂದಿಗೆ ಈ ಪಿ.ಸಿ ಲಭ್ಯವಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಇಂಟರ್ನೆಟ್ ಬ್ರೌಸ್ ಮಾಡಲು, ಆಫೀಸ್ ತಂತ್ರಾಂಶಗಳನ್ನು ಬಳಸಲು ಮತ್ತು ಬಳಕೆದಾರನಿಗೆ ಸಂಪೂರ್ಣ ಬಳಕೆಗೆ ಸಾಧ್ಯವಾಗುವಂತ ಕಂಪ್ಯೂಟರ್ ಚಾಲನೆ ಶುರುಮಾಡಿದ ತಕ್ಷಣವೆ ಸಿಗುವುದು ಖಚಿತ.
ಇನ್ಮುಂದೆ ನಿಮ್ಮ ಕಂಪ್ಯೂಟರ್‌ಗಳನ್ನು ನಿಮ್ಮ ಜೇಬಿನಲ್ಲಿ ಕೊಂಡೊಯ್ಯುವುದು ಸುಲಭ ಮಾತ್ರವಲ್ಲ, ಒಂದಲ್ಲ ಹತ್ತು ಕಂಪ್ಯೂಟರ್‌ಗಳು ನಿಮ್ಮ ಕಿಸೆಯಲ್ಲಿ ತುಂಬಬಹುದು.

OLPC (‘One laptop per child’) ಮತ್ತು ಇತ್ತೀಚೆಗೆ ಭಾರತದ ಆಕಾಶ್ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಗಳಾಗಿ ಎಲ್ಲರ ಗಮನ ಸೆಳೆದಿದ್ದವು. ಅದಕ್ಕಿಂತಲೂ ಕಡಿಮೆ ಬೆಲೆಗೆ ಲ್ಯಾಪ್ಟಾಪ್ ಸಾಧ್ಯವೇ ಎನ್ನುವುದಕ್ಕೆ ಈ ಸುದ್ದಿ ಉತ್ತರ ನೀಡಬಹುದು.

ಮೂಲ ಸುದ್ದಿ – ಬಿ.ಬಿ.ಸಿ

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಕನ್ನಡ ವಿಕಿಪೀಡಿಯದಲ್ಲೀಗ ವಿಷಯ ಅನುವಾದಕ (ContentTranslator) ಲಭ್ಯ

ಕನ್ನಡ ವಿಕಿಪೀಡಿಯಕ್ಕೆ (https://kn.wikipedia.org) ಲೇಖನಗಳನ್ನು ಸೇರಿಸಿ ಎಂದಾಗ ತಕ್ಷಣ ಯಾವ ವಿಷಯ ಸೇರಿಸಬಹುದು ಜೊತೆಗೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಾಮಾನ್ಯ. ಈಗಾಗಲೇ ಕನ್ನಡಲ್ಲೇ ಲಭ್ಯವಾಗಿಸಿರುವ ವಿಕಿ ಸಂಪಾದನೆಯ ಮಾಹಿತಿ, ವಿಡಿಯೋ ಇತ್ಯಾದಿಗಳನ್ನು ತೋರಿಸಿದಾಗ ಕೂಡ ನಮ್ಮಿಂದ ಇದು ಸಾಧವೇ ಎನ್ನುವ ಪ್ರಶ್ನೆಯೊಂದಿಗೆ...

read more

ಕನ್ನಡ ಪುಸ್ತಕಗಳ ಹುಡುಕಿ ಬನ್ನಿ – ಸಮೂಹ ಸಂಚಯ

ಕನ್ನಡ ಪುಸ್ತಕಗಳನ್ನು ಸುಲಭವಾಗಿ ಇಂಟರ್ನೆಟ್‌ನಲ್ಲಿ ಮತ್ತು ವಿಕಿಪೀಡಿಯದಲ್ಲಿ ಹುಡುಕುವಂತೆ ಮಾಡಲು ಹೊರಟಿರುವ ಸಮೂಹ ಸಂಚಯ - ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ ಕನ್ನಡ ಪುಸ್ತಕಗಳ ಹೆಸರು, ಲೇಖಕರು ಹಾಗೂ ಪ್ರಕಾಶಕರ ಹೆಸರನ್ನು ಕಂಗ್ಲೀಷ್‌ನಿಂದ ಕನ್ನಡೀಕರಿಸುತ್ತಿದೆ. ೫೦೦೦ದಷ್ಟು ಪುಟಗಳನ್ನು...

read more

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ ಬಳಗವು ಹಂಚಿಕೊಳ್ಳಲು ಹರ್ಷಿಸುತ್ತದೆ. ನಿರಂಜನ (೧೯೨೪-೧೯೯೨) ,  ಇದು ಕುಳಕುಂದ ಶಿವರಾವ್ ಅವರ ಲೇಖನಾಮ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು...

read more
Share This