ಗೀಕ್ಸ್ ವಿದೌಟ್ ಫ್ರಂಟಿಯರ್ಸ್ – ವಿಶ್ವಕ್ಕೆ ಅಗ್ಗದ ಬೆಲೆಯ Wi-Fi

ಕಂಪ್ಯೂಟರ್ ಅನ್ನು ಸಾಮಾನ್ಯನಲ್ಲಿ ಸಾಮಾನ್ಯನಿಗೆ ಎಟುಕುವಂತೆ ಮಾಡಲು ಅಗ್ಗದ ಬೆಲೆಯ ಕಂಪ್ಯೂಟರ್‌ಗಳು (OLTP, Akash) ಬಂದವು, ಅದೇ ರೀತಿ ಸಮಾನ ಮನಸ್ಕ ಯೋಜನೆಯೊಂದು ಯಾವುದೇ ಅದ್ದೂರಿ ಪ್ರಚಾರವಿಲ್ಲದೆ ಎಲ್ಲರಿಗೂ ಅಗ್ಗದ ಇಂಟರ್ನೆಟ್ ಸಂಪರ್ಕ ಸಿಗುವಂತೆ ಮಾಡಲು ಯತ್ನಿಸುತ್ತಿದೆ.

ಈ ಯೋಜನೆಯ ಮುಖ್ಯ ಉದ್ದೇಶ ಕಡಿಮೆ ಬೆಲೆಯ, ಮುಕ್ತ ವೈ-ಫಿ ತಂತ್ರಾಂಶವನ್ನು ಅಭಿವೃದ್ದಿಪಡಿಸುವುದಾಗಿದೆ. ಇದು ಮನ್ನ ಎನರ್ಜಿ ಫೌಂಡೇಶನ್‌ನ ಕನಸಿನ ಕೂಸಾಗಿದ್ದು ಈ ಯೋಜನೆಯ ಕೊನೆಯ ಹಂತದ ಅಭಿವೃದ್ದಿಯ ಬಗ್ಗೆ ವಿವರಗಳನ್ನು ಬಿಡುಗಡೆ ಮಾಡಲಾಗಿದೆ.

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ಉದ್ದಿಮೆಗೆ ದೊಡ್ಡ ಮೊತ್ತದ ಹಣವನ್ನೇನೂ ತಂದು ಕೊಡದಿದ್ದರೂ, ಅಗ್ಗದ ಬೆಲೆಯ, ಉತ್ತಮ ಗುಣಮಟ್ಟದ ತಂತ್ರಾಂಶಗಳನ್ನು ವಿಶ್ವದಾದ್ಯಂತ ಎಲ್ಲರಿಗೂ ಸಿಗುವಂತೆ ಮಾಡಿವೆ. ವಿಶ್ವದಾದ್ಯಂತ ಬದುಕನ್ನು ಬದಲಿಸಬಲ್ಲ ಶಕ್ತಿ ಕೂಡ ಮುಕ್ತ ತಂತ್ರಾಂಶಕ್ಕೆ ಇದೆ.

ಟೈಡ್ಸ್ ಫೌಂಡೇಶನ್‌ನಿಂದ ಗೂಡು ಕಟ್ಟಿರುವ ಹೊಸ open80211s (o11s) ತಂತ್ರಜ್ಞಾನ, ದೊಡ್ಡ ಮಟ್ಟದ ವೈ-ಫೈ ಮೆಶ್ ನೆಟ್ವರ್ಕ್‌ಗಳ ಅಭಿವೃದ್ದಿ ಹಾಗೂ ಸ್ಥಾಪನೆ ಸಾಂಪ್ರದಾಯಿಕ ನೆಟ್ವರ್ಕ್‌ಗಳಿಗಿಂದ ಅರ್ಧ ಬೆಲೆಯಲ್ಲಿ ಕಾರ್ಯನಿರ್ವಹಿಸಲಿಕ್ಕೆ ಶುರುಮಾಡಲಿವೆ. ಈಗಾಗಲೇ ಇರುವ ಯಂತ್ರಾಂಶಗಳನ್ನು ಖರ್ಚು ಕಡಿಮೆ ಮಾಡಲು ಮತ್ತು ಈ ಸೇವೆಯ ಹೆಚ್ಚಿನ ಅವಲಬ್ದತೆಗಾಗಿ ಉಪಯೋಗಿಸಿಕೊಳ್ಳಲಾಗುತ್ತದೆ. ಈಗಿನ ಬ್ರಾಡ್‌ಬ್ಯಾಂಡ್ ತುಟ್ಟಿಯಾಗಿದ್ದು, ಸಾಮಾನ್ಯನಿಗೆ ಕೈಗೆಟುಕದೆ ಇರುವ ಇರಬಹುದು ಎಂಬ ಪ್ರದೇಶಗಳಿಗೂ ಇಂಟರ್ನೆಟ್ ಉಪಲಬ್ದತೆಯನ್ನು ಇರಮಾಡಲು ಇದು ಸಹಾಯ ಮಾಡುತ್ತದೆ.

ಕೋಜಿಬೈಟ್ ನಿಂದ ಮೂಲತ: ಅಭಿವೃದ್ದಿಪಡಿಸಲಾಗುತ್ತಿರುವ ಈ ತಂತ್ರಜ್ಞಾನದ ನಿರ್ವಹಣೆಯನ್ನು ಗೀಕ್ಸ್ ವಿದೌಟ್ ಫ್ರಂಟಿಯರ್ಸ್ ಮತ್ತು ಐ-ನೆಟ್ ಸೊಲ್ಯೂಷನ್ ನಿರ್ವಹಿಸಲಿವೆ. ಈ ಯೋಜನೆಗೆ ಗೂಗಲ್, ಗ್ಲೋಬಲ್ ಕನೆಕ್ಟ್, ನಾರ್ಟೆಲ್, ಓಎಲ್‌ಪಿಸಿ ಮತ್ತು ಮನ್ನ ಎನರ್ಜಿ ಫೌಂಡೇಷನ್‌ನ ಸಹಾಯ ಹಸ್ತ ಕೂಡ ಇದೆ.

ಈ ಕೆಳಗಿನ ವಿಡಿಯೋ ನಿಮಗೆ ಇದರ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ನೀಡುತ್ತದೆ.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This