ಡೆಬಿಯನ್ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಯೋಜನೆಯ ಹಿಂದಿರುವ ಡೆಬಿಯನ್ ತಂಡ ಎಲ್ಲರನ್ನು ಬರುವ ಡೆಬಿಯನ್ ದಿನ/ಡೇ ಗೆ ಆಹ್ವಾನಿಸುತ್ತಿದೆ. ಇದು ಇದೇ ತಿಂಗಳ ೨೪ ರಂದು Banski Dvor, Banja Luka, Republic of Srpska, Bosnia and Herzegovina ದಲ್ಲಿ ನೆಡೆಯಲಿದೆ. ಇದು ಡೆಬಿಯನ್ ನ ವಾರ್ಷಿಕ ಸಮ್ಮೇಳನದ ಪ್ರಾರಂಭವೂ ಆಗಲಿದೆ.
ಸಮ್ಮೇಳನದ ಮೊದಲನೆಯ ದಿನ ನೆಡೆಯುವ ಡೆಬಿಯನ್ ಡೇ ಡೆಬಿಯನ್ ಮತ್ತು ಮುಕ್ತ ತಂತ್ರಾಂಶಗಳ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸುವವರಿಗೆ, ಆಸಕ್ತರಿಗೆ, ಬಳಕೆದಾರರಿಗೆ ಹಾಗೂ ಡೆವೆಲಪರ್ಗಳಿಗೆ ದಿನಪೂರ ಅನೇಕ ವಿಷಯಗಳ ಬಗ್ಗೆ ಭಾಷಣಗಳನ್ನು ಏರ್ಪಡಿಸಿದೆ. ಸರ್ಕಾರ ಮತ್ತು ಉದ್ಯಮಗಳಲ್ಲಿ ಮುಕ್ತ ತಂತ್ರಾಂಶ ಹಾಗೂ ಅದನ್ನು ಒಳಗೊಳ್ಳಿಸುವಿಕೆ, ಡೆಬಿಯನ್ ಯೋಜನೆ ಮತ್ತು ಆಪರೇಟಿಂಗ್ ಸಿಸ್ಟಂನ ಬಗೆಗಿನ ಭಾಷಣಗಳು ಇದರಲ್ಲಿ ಮುಖ್ಯವಾಗಿವೆ.
ಡೆಬಿಯನ್ ಡೇಯ ಪ್ರಾರಂಭೋತ್ಸವದಲ್ಲಿ ಅಡ್ನಾನ್ ಹಾಡ್ಜಿಕ್ ಸ್ವಾಗತ ಭಾಷಣದ ನಂತರ ನೆಡೆಯುವ ಭಾಷಣಗಳ ಪಟ್ಟಿ ಇಲ್ಲಿದೆ.
Ubuntu and Debian in education, business and government, by Mark Shuttleworth
Understanding Debian, by Bdale Garbee
My life with Free Software, by Enrico Zini
How to contribute and get involved, by Alexander Reichle-Schmehl and Meike Reichle
Debian in enterprise: a Google case study, by Guido Trotter and Jesus Climent
Austrian e-health systemby Gerfried Fuchs
ಈ ದಿನದ ಹೆಚ್ಚಿನ ಮಾಹಿತಿಗೆ ಈ ಕೊಂಡಿ ಕ್ಲಿಕ್ಕಿಸಿ Debian Day page.
Leave a Reply