ಫ್ಲಿಕರ್ ಗೆ ಸುಲಭವಾಗಿ ಫೋಟೋ ಅಪ್ಲೋಡ್ ಮಾಡಿ

ಇತ್ತೀಚೆಗೆ ಫೋಟೋಗ್ರಫಿ ಮಾಡಲಿಳಿದವರಿಂದ ಹಿಡಿದು, ಪಳಗಿದ ಫೋಟೋಗ್ರಾಫರುಗಳಿಗೆ ಫ್ಲಿಕರ್ ಎಂದರೆ ಅಚ್ಚುಮೆಚ್ಚು. ತಮ್ಮ ಫೋಟೋಗಳನ್ನು ಇತರೆ ಫೋಟೋಗ್ರಾಫರುಗಳೊಂದಿಗೆ ಹಂಚಿಕೊಳ್ಳುತ್ತಾ, ಸಮುದಾಯ, ಸ್ಪರ್ಧೆ ಇತ್ಯಾದಿಗಳೊಂದಾಗಿಸಿಕೊಂಡು ದಿನ ಕಳೆಯುವುದು ಅವರ ದಿನಚರಿಯಲ್ಲೊಂದಾಗಿರುತ್ತದೆ.

ಗ್ನು/ಲಿನಕ್ಸ್ ಬಳಕೆದಾರರಾದ ಈ ಫೋಟೋಗ್ರಾಫರುಗಳಿಗೆ ಫೋಟೋ ಅಪ್ಲೋಡ್ ಮಾಡಲಿಕ್ಕೆ ಹರಸಾಹಸ ಪಡಬೇಕಿಲ್ಲ. ತಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನಲ್ಲಿ ಕಾಣುವ ಫೋಟೋ ಮೇಲೆ ಮೌಸ್ ನ ಬಲಭಾಗದ ಬಟನ್ ಒತ್ತಿದರೆ ಫ್ಲಿಕರ್ ಗೆ ಅಪ್ಲೋಡ್ ಮಾಡಲಿಕ್ಕೊಂದು ಸೂಚನೆ ಇರಿಸುವುದಕ್ಕೆ ಸಾಧ್ಯ. Postr ಎಂಬ ತಂತ್ರಾಂಶ ಉಪಯೋಗಿಸಿಕೊಂಡು Gnome ಡೆಸ್ಕ್ಟಾಪ್ ನಲ್ಲಿಯೂ , kflickr ಎಂಬ ತಂತ್ರಾಂಶವನ್ನು KDE ಡೆಸ್ಕ್ತಾಪ್ ನಲ್ಲಿಯೂ ನೀವು ಈ ವ್ಯವಸ್ಥೆಯನ್ನು ಪಡೆಯಬಹುದು.

 

 

ಮೇಲ್ಕಂಡ ಚಿತ್ರ Postr ಉಬುಂಟುವಿನಲ್ಲಿ ಕೆಲಸಮಾಡುತ್ತಿರುವುದನ್ನು ತೋರಿಸುತ್ತದೆ. ನಿಮ್ಮ ಚಿತ್ರದ ಹೆಸರು, ವಿವರಣೆ, ಟ್ಯಾಗ್ , ಅದರ ಗುಂಪು, ಗೌಪ್ಯತೆಯ ವಿಚಾರ ಇತ್ಯಾದಿಗಳನ್ನು ಫ್ಲಿಕರ್ ಗೆ ಫೋಟೋ ಅಪ್ಲೋಡ್ ಮಾಡುವುದಕ್ಕೆ ಮುಂಚಿತವಾಗಿಯೇ ನೀವು ನಿರ್ಧರಿಸಬಹುದು.

F-Spot ಮತ್ತು digiKam ಫೋಟೋ ಆರ್ಗನೈಸರ್ ಗಳಿಗೂ ನೀವು ಫ್ಲಿಕರ್ ಪ್ಲಗಿನ್ ಗಳನ್ನು ಅಳವಡಿಸಿಕೊಂಡು ಫೋಟೋ ಎಡಿಟ್ ಮಾಡುವಾಗಲೇ ಅವನ್ನು ಫ್ಲಿಕರ್ ಗೆ ಅಪ್ಲೋಡ್ ಮಾಡಬಹುದು.

Postr ನನಗೆ ಅತ್ಯಂತ ಪ್ರಿಯವಾದ ಫ್ಲಿಕರ್ ಟೂಲ್. ಅದನ್ನು ಇನ್ಸ್ಟಾಲ್ ಮಾಡಿಕೊಳ್ಳುವುದೂ ಅಷ್ಟೇ ಸುಲಭ. Postr ಅನ್ನು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನಲ್ಲಿ ಹುಡುಕಿ ಇನ್ಸ್ಟಾಲ್ ಮಾಡಿಕೊಳ್ಳಿ ಅಥವಾ ಈ ಕೆಳಕಂಡ ಕಮ್ಯಾಂಡ್ ಅನ್ನು ಟರ್ಮಿನಲ್ ನಲ್ಲಿ ಟೈಪಿಸಿದರಾಯಿತು.

sudo apt-get install postr

ದಿನಬಳಕೆಗೆ ಸಂಭಂದಿಸಿದ ಅನೇಕ ತಂತ್ರಾಂಶಗಳು ಮುಕ್ತ ಹಾಗು ಸ್ವತಂತ್ರ ತಂತ್ರಾಂಶಗಳ ರೂಪದಲ್ಲಿ ನಿಮಗೆ ಈಗಾಗಲೇ ಲಭ್ಯವಿವೆ. ನಿಮಗೆ ಬೇಕಿರುವ ತಂತ್ರಾಂಶದ ಬಗ್ಗೆ ಮಾಹಿತಿ ಪಡೆಯಲು ಗೂಗಲ್ ಬಳಸಬಹುದು. ನಿಮ್ಮ ಈ ಒಂದು ಕೆಲಸ ಮತ್ತಷ್ಟು ಸುಲಭವಾಗಬೇಕೆಂದರೆ ಲಿನಕ್ಸಾಯಣಕ್ಕೆ ಒಂದು ಸಂದೇಶ ಕಳಿಸಿದರೂ ಆಯ್ತು.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This