ಕಾಲ್ಪಿಟಿ – ಯುನಿಟಿ ೩ಡಿ ಕಾಲ್ಪಿಗರೆಷನ್ ಬದಲಿಸಲಿಕ್ಕೆ

by | May 26, 2011 | ತಂತ್ರಾಂಶಗಳು | 0 comments

ಇತ್ತೀಚೆಗೆ ಉಬುಂಟುವಿನಲ್ಲಿ ಪರಿಚಯಿಸಲಾಗಿರುವ ಯುನಿಟಿ ೩ಡಿ ಡೆಸ್ಕ್ಟಾಪ್ ಮ್ಯಾನೆಜರ್ ನ ಕಾಲ್ಫಿಗರೇಷನ್ ಅಂದ್ರೆ ಅದರ ಹಾವಭಾವಗಳನ್ನು ಬದಲಾಯಿಸಬೇಕಾದರೆ Compiz Configuration Manager ಅಥವಾ GConf ಅನ್ನು ಬಳಸ ಬೇಕು. ಇವುಗಳಲ್ಲಿರುವ ಸೂಚನೆ ಇತ್ಯಾದಿ ಮೊದಲ ಭಾರಿ ಈ ಟೂಲ್ ಗಳನ್ನು ನೋಡಿದವರಿಗೆ ಕ್ಲಿಷ್ಟ ಅನಿಸಬಹುದು. ಹಾಗೂ ಕೇವಲ ಯುನಿಟಿಗೆ ಸಂಬಂದಪಟ್ಟ ಕಾನ್ಪಿಗರೇಷನ್ ಸಿಗದೆ ಹೋಗಬಹುದು. ಇದಕ್ಕೆ Confity ಎಂಬ ತಂತ್ರಾಂಶ ಯೋಜನೆ ಉತ್ತರ ಕೊಡುತ್ತದೆ. ಯುನಿಟಿಯನ್ನು ಸುಲಭವಾಗಿ ಬದಲಿಸಲು Confity ನಮಗೆ ಸಹಾಯ ಮಾಡುತ್ತದೆ.

ಲಾಂಚರ್ ನಲ್ಲಿನ ಐಕಾನ್ ಗಾತ್ರ ಬದಲಿಸಲು, ಟ್ರಾನ್ಪರೆನ್ಸಿ , ಆನಿಮೇಷನ್ ಇತ್ಯಾದಿ ಬದಲಿಸಲು ಇದನ್ನು ಬಳಸಬಹುದಾಗಿದೆ. ಲಾಂಚರ್ ನ ಸ್ಥಿತಿ, QuickList ಹಾಗೂ ಕೀಬೋರ್ಡ್ ಶಾರ್ಟ್ಕಟ್ ಗಳನ್ನೂ ಸುಲಭವಾಗಿ ಬದಲಿಸಬಹುದಾಗಿದೆ.

ಕಾನ್ಪಿಟಿಯನ್ನು ಉಬುಂಟು ೧೧.೦೪ ನಲ್ಲಿ ಉಪಯೋಗಿಸಿ ನೋಡಲು ಅದರ ಸೋರ್ಸ್ ಫೈಲನ್ನು ಇಲ್ಲಿಂದ ಇಳಿಸಿಕೊಳ್ಳಿ. ನಂತರ ಅದನ್ನು ಎಕ್ಸ್ಟ್ರಾಕ್ಟ್ ಮಾಡಿ ಅದರಲ್ಲಿನ confity.py ಮೇಲೆ ಡಬಲ್ ಕ್ಲಿಕ್  ಅಥವಾ setup.py ಕ್ಲಿಕ್ಕಿಸಿ ಇನ್ಸ್ಟಾಲ್ ಮಾಡಿದರಾಯ್ತು.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

Share This