ಇಂಟರ್ನೆಟ್ ನ ಸ್ಪೀಡ್ ಟೆಸ್ಟ್ ಮಾಡಿ

ಇತ್ತೀಚಿನ ದಿನಗಳಲ್ಲಿ ಅತಿವೇಗದ ಇಂಟರ್ನೆಂಟ್ ಭಾರತದಲ್ಲಿ ಲಭ್ಯವಿದೆ. ಇಂಟರ್ನೆಟ್ ಸೌಲಭ್ಯ ಕೊಡುವ ಕಂಪನಿಗಳಿಗೇನೂ ಕಡಿಮೆಯಿಲ್ಲ. ಜೊತೆಗೆ ಹತ್ತಾರು ಆಫ‌ರ್ ಗಳು. ಆದಾಗ್ಯೂ ಸಹ ಕೆಲವೊಮ್ಮೆ ನಾವು ಕೊಂಡ ಕನೆಕ್ಷನ್ ಗೂಗಲ್ ಮುಖಪುಟವನ್ನೂ ಕೂಡ ತೆರೆಯಲು ಅಳುತ್ತದೆ. ಈ ಕಂಪೆನಿಗಳ SLA (Service Level Agreement) ಅಥವಾ ಕರಾರಿನ ಪ್ರಕಾರ ಅವು ತಿಂಗಳಿಗೆ ಏನಿಲ್ಲವೆಂದರೂ ೯೯% ಸಂಪರ್ಕ ಸಾಧ್ಯತೆಯನ್ನು ಕೊಡುತ್ತೇವೆಂದು ಆಶ್ವಾಸನೆ ನೀಡಿರುತ್ತವೆ ಜೊತೆಗೆ ಹಣಕ್ಕೆ ತಕ್ಕಂತೆ ವೇಗ ಕೂಡ ನಿರ್ಧಾರವಾಗಿರುತ್ತದೆ.

ಹಣ ಕೊಟ್ಟು ಕನೆಕ್ಷನ್ ಪಡೆದ ನಂತರ ಆಗಾಗ ಇಂಟರ್ನೆಟ್ ವೇಗ ಸರಿಯಿದೆಯೇ, ನಮಗೆ ಐ.ಎಸ್.ಪಿ ಹೇಳಿದಷ್ಟು uptime ಸಿಗುತ್ತಿದೆಯೇ ಎಂದು ಗ್ರಾಹಕರಾದ ನಾವು ಪರೀಕ್ಷಿಸಿಕೊಳ್ಳಬೇಕಾಗುತ್ತದೆ.

ಇಂಟರ್ನೆಟ್ ವೇಗ ಪರೀಕ್ಷಿಸಲು ಸುಲಭ ಮಾರ್ಗ – speedtest.net ಎಂಬ ವೆಬ್‌ಸೈಟ್ ಬಳಸುವುದು.

ಇಲ್ಲವಾದಲ್ಲಿ, ಯಾವುದಾದರೂ ಒಂದು ದೊಡ್ಡಗಾತ್ರದ ಫೈಲನ್ನು ಡೌನ್ಲೋಡ್ ಮಾಡುತ್ತಾ ಅದರ ಡೌನ್ಲೋಡ್ ವೇಗ ಪರೀಷಿಸುವುದು. ಫಲಿತಾಂಶದಲ್ಲಿ ಸಂದೇಹ ಬರುವಷ್ಟು ಸ್ಪೀಡ್ ಕಡಿಮೆ ಇದ್ದರೆ ಮರೆಯದೆ ನಿಮ್ಮ ಐ.ಎಸ್.ಪಿ ಗೆ ಒಂದು ಕಾಲ್ ಹಾಕಿ.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This