ಬ್ರೌಸರ್ ಮೂಲಕ ಪ್ರಿಂಟರ್ ನಿರ್ವಹಣೆ

ಲಿನಕ್ಸ್ ನಲ್ಲಿ ಪ್ರಿಂಟರ್ ಗಳನ್ನು ನಿರ್ವಹಿಸುವುದರ ಬಗ್ಗೆ ಒಂದೆರಡು ಮಾತು.

ಲಿನಕ್ಸ್ ಹಳೆಯ ಮತ್ತು ಹೊಸ ಪ್ರಿಂಟರ್ಗಳನ್ನು ಯಾವುದೇ ಡ್ರೈವರ್ ತಂತ್ರಾಂಶಗಳ ಇನ್ಸ್ಟಾಲೇಷನ್ ಇಲ್ಲದೆಯೇ ಉಪಯೋಗಕ್ಕೆ ಅಣಿಗೊಳಿಸಬಲ್ಲದು. ಡಾಟ್ ಮ್ಯಾಟ್ರಿಕ್ಸ್ ನಿಂದ ಹಿಡಿದು ಇಂದಿನ ಲೇಸರ್ ಪ್ರಿಂಟರ್ಗಳೂ ಸುಲಭವಾಗಿ ಕೆಲಸ ಮಾಡುತ್ತವೆ. ಆದರೆ ಕೆಲವೊಂದು ಖಾಸಗಿ ಮಾಲೀಕತ್ವದ ಪ್ರಿಂಟರ್ ಉತ್ಪಾದಕ ಸಂಸ್ಥೆಗಳು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಅಭಿವೃದ್ದಿಗೆ ಬೇಕಾದ ಮೂಲ ಹಾರ್ಡ್ವೇರ್ ನ ವಿವರಗಳನ್ನು ಬಹಿರಂಗಗೊಳಿಸದೆ ಇರುವುದರಿಂದ ಅವುಗಳನ್ನು ಲಿನಕ್ಸ್ ನಲ್ಲಿ ಬಳಸಲಿಕ್ಕೆ ಸ್ವಲ್ಪ ತೊಡಕು ಉಂಟಾಗಬಹುದು.

ಪ್ರಿಂಟರ್ ನಿರ್ವಹಣೆಗೆ ಮೊದಲು cups ಎಂಬ ಪ್ರಿಂಟರ್ ಕಾರ್ಯಗಳನ್ನು ನಿರ್ವಹಿಸುವ ತಂತ್ರಾಂಶದ ಸೂಚನೆಗಳನ್ನು (commands) ಸಿಸ್ಟಂ ಅಡ್ಮಿನಿಸ್ಟ್ರೇಟರುಗಳು ಕನ್ಸೋಲಿನಲ್ಲಿ ಕುಟ್ಟುತ್ತಿದ್ದರು. ಇದೆಲ್ಲ ಗೋಜಲು ಎಂದು ಕೊಳ್ಳುವವರಿಗೆ cups ಬ್ರೌಸರ್ ಮುಖೇನ ಕೂಡ ಪ್ರಿಂಟರ್ ನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ.

ಬ್ರೌಸರ್ ಮೂಲಕ ಪ್ರಿಂಟರ್ ನಿರ್ವಹಿಸಲು http://localhost:631 ಎಂಬ ವಿಳಾಸವನ್ನು ಬಳಸಬಹುದು.

ಮೇಲ್ಕಂಡ ಪುಟ ನಿಮ್ಮ ಬ್ರೌಸರ್ ಮೇಲೆ ಮೂಡಿದ ನಂತರ ಅಲ್ಲಿರುವ ಕೊಂಡಿಗಳು ನಿಮಗೆ ಪ್ರಿಂಟರ್ ಸ್ಥಾಪನೆ ಇಂದ ಹಿಡಿದು ದಿನ ನಿತ್ಯದ ಪ್ರಿಂಟಿಂಗ್ ಕಾರ್ಯಗಳು, ಪ್ರಿಂಟರ್ ನ ನಾಜಲ್ ಶುಚಿಗೊಳಿಸುವಿಕೆ ಇತ್ಯಾದಿ ಕ್ಲಿಷ್ಟಕರ ಕೆಲಸಗಳನ್ನೆಲ್ಲಾ ಸುಲಭಗೊಳಿಸುತ್ತದೆ.  ಈ ಪುಟ ಮೂಡದಿದ್ದರೆ cups ಸೇವೆ ನಿಮ್ಮ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಿ.

banner ad

One Response to “ಬ್ರೌಸರ್ ಮೂಲಕ ಪ್ರಿಂಟರ್ ನಿರ್ವಹಣೆ”

  1. manu says:

    thumba dhanyavadagalu..

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This