ಲಿಬ್ರೆ ಆಫೀಸ್ – ಆರೇಕಲ್ ಗೆ ಸೆಡ್ಡು ಹೊಡೆದು

ಓಪನ್ ಆಫೀಸ್ ಇದುವರೆಗೆ ಲಿನಕ್ಸ್ ಬಳಸುತ್ತಿರುವ ಎಲ್ಲರಿಗೂ ತಿಳಿದಿರುವ ದೈನಂದಿನ ಕೆಲಸಗಳಿಗೆ ಮನೆ, ಅಫೀಸು ಇತರೆಡೆಗಳಲ್ಲಿ ಬಳಸಲಾಗುತ್ತಿರುವ ಮುಕ್ತ ಆಫೀಸ್ ತಂತ್ರಾಂಶ. ಈ ಸ್ತತಂತ್ರ ತಂತ್ರಾಂಶ ತನ್ನ ಸಮುದಾಯ ಹಾಗೂ  ಸನ್ ಮೈಕ್ರೋ ಸಿಸ್ಟಂ ಎಂಬ ತಂತ್ರಾಂಶ ದೈತ್ಯನ ಬೆಂಬಲದಿಂದ ಬೆಳೆಯುತ್ತಿತ್ತು.

ಸನ್ ಮೈಕ್ರೋಸಿಸ್ಟಂ ಅನ್ನು ರಿಸೆಷನ್ ನ ಸಮಯದಲ್ಲಿ ಕೊಂಡುಕೊಂಡ ಆರೇಕಲ್ ಕಂಪೆನಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ತನ್ನ ಲಾಭಾಂಶದ ಕಡೆಗಷ್ಟೇ ಗಮನ ಹರಿಸಿ, ಸಮುದಾಯದ ತತ್ವ, ಇಷ್ಟ ಕಷ್ಟಗಳನ್ನೆಲ್ಲ ಗಾಳಿಗೆ ತೂರಿ ಮುನ್ನೆಡೆಯುತ್ತಿದೆ ಎಂದರಿತ ಅನೇಕ ಮುಖ್ಯ ತಂತ್ರಾಂಶ ಅಭಿವೃದ್ದಿಯ ನಿರ್ವಾಹಕ ತಂತ್ರಜ್ಞರು, ಡಾಕ್ಯುಮೆಂಟ್ ಫೌಂಡೇಷನ್ ನ ನೆರವಿನಿಂದ ಲಿಬ್ರೆ ಆಫೀಸ್ ಎಂಬ ಹೊಸ ಯೋಜನೆಯ ಮೂಲಕ ಓಪನ್ ಆಫೀಸ್ ಎಂದೆಂದಿಗೂ ಜನ ಸಾಮಾನ್ಯರಿಗೆ ಸ್ವತಂತ್ರವಾಗಿ ಸಿಗುವಂತೆ ಮಾಡಲು ಮುಂದಾಗಿದ್ದಾರೆ.  ಸನ್ ಮೈಕ್ರೋಸಿಸ್ಟಂ ನಿಂದ ಬೆಳೆಸಲ್ಪಟ್ಟ ಓಪನ್ ಸೊಲಾರಿಸ್ ಯೋಜನೆಯನ್ನು ತನ್ನ ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಬಳಕೆ ಹೆಚ್ಚಿಸಲು ಸದ್ದಡಗಿಸಿದ್ದರೆ ಜೊತೆಗೆ, ಇನ್ನಿತರೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಕಡೆಗೆ ವಕ್ರ ದುಷ್ಟಿ ಬೀರಿ ಸ್ವತಂತ್ರ ತಂತ್ರಾಂಶ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಆರೇಕಲ್ ಇದರಿಂದ ಎಷ್ಟು ಎಚ್ಚೆತ್ತುಕೊಳ್ಳುತ್ತದೆ ಕಾದು ನೋಡಬೇಕಿದೆ.

ಡಾಕ್ಯುಮೆಂಟ್ ಫೌಂಡೇಶನ್ ನ ಪೂರ್ಣ ಆವೃತ್ತಿ ೨೦೧೧ ನ ಮೊದಲ ಭಾಗದಲ್ಲಿ ದೊರೆಯಲಿದ್ದು, ಆದರ ಪರೀಕ್ಷಾರ್ಥ ಬೀಟಾ ಆವೃತ್ತಿ ಈಗಾಗಲೇ ಲಭ್ಯವಿದೆ. ಅದನ್ನು ಇಲ್ಲಿಂದ ಪಡೆದುಕೊಳ್ಳಿ.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This