ಲಿನಕ್ಸಾಯಣ – ೩೯ – ಗ್ನು/ಲಿನಕ್ಸ್ ಕಲಿಸುತ್ತ ಯಹೂ ಡಾಟ್ ಕಾಮ್ ಹ್ಯಾಕ್ ಮಾಡಿದ್ದು

ಗ್ನು/ಲಿನಕ್ಸ್ ಕಲೀಬೇಕಾದ್ರೆ ಮತ್ತು ಕಲಿಸ್ಬೇಕಾದ್ರೆ ಮಜಾ ಬರುತ್ತೆ. ಇದು ಕಬ್ಬಿಣದ ಕಡಲೆ ಅಂದವರಿಗೆ, ನಗಿಸಿ ಕಡಲೆ ತಿನ್ನಿಸಿ, ಬೇಕಿದ್ರೆ ಹಲ್ಲೂ ಮುರೀಬಹುದು ನಗ್ತಾ ನಗ್ತಾ. ಇಲ್ರಿ ತಮಾಷೆ ಮಾಡ್ತಿಲ್ಲ.  ಈ ಕೆಳಗಿನ ಚಿತ್ರ ನೋಡಿ. ಮೊನ್ನೆ ನನ್ನ ಹುಡುಗರಿಗೆ, ಗ್ನು/ಲಿನಕ್ಸ್ ನಲ್ಲಿ ಡಿ.ಎನ್.ಎಸ್ (ಡೊಮೈನ್ ನೇಮಿಂಗ್ ಸಿಸ್ಟಂ) ಬಗ್ಗೆ ಹೇಳ್ತಾ, ಅದನ್ನ ಹ್ಯಾಗೆ ೫ – ೧೦ ನಿಮಿಷದಲ್ಲಿ ಎಲ್ಲವನ್ನ ಅರ್ಥ ಮಾಡ್ಕೊಂಡು ತಮ್ಮ ಸಿಸ್ಟಂಗಳಲ್ಲಿ ಕಾನ್ಫಿಗರ್ ಮಾಡ್ಕೊಳ್ಳೋದು ಅಂತ ಹೇಳ್ಬೇಕಾದ್ರೆ ಯಾಹೂ.ಕಾಮ್ ಹ್ಯಾಕ್ ಮಾಡಿ ತೋರಿಸಿದ್ದು.ತಮಾಷೆಯಾಗಿತ್ತು ಆದ್ರೆ, ಅದೇ ಅವರಿಗೆ ವಿಷಯವನ್ನ ಕಲಿಯೋ ಕುತೂಹಲ ಮೂಡಿಸಿದ್ದು. ನಂತರ ಅವರು ಕಲಿತ್ರು ಕೂಡ.
ಗೊತ್ತಾಯ್ತಾ ಏನ್ ಮಾಡ್ದೆ ಅಂತಾ? ಇಲ್ಲಾಂದ್ರೆ ಇಲ್ಲಿ ಹೇಳ್ತೀನಿ ಕೇಳಿ. ನನ್ನದೇ ಡಿ.ಎನ್.ಎಸ್ ಸರ್ವರ್ ರೆಡಿ ಮಾಡ್ಕೊಬೇಕು. ನನ್ನ ವೆಬ್ ಸೈಟ್ ಗಳನ್ನ ನಾನೇ ನೋಡ್ಕೋಬೇಕು. ಇದಕ್ಕೆ bind ಅನ್ನೋ ತಂತ್ರಾಂಶ ಹ್ಯಾಗೆ ಕೆಲಸ ಮಾಡುತ್ತೆ ಅಂತ ತಿಳೀಬೇಕು. ನನ್ನದೇ ಒಂದು ಡಮ್ಮಿ ವೆಬ್ ಸೈಟ್ ಅನ್ನು ರೆಡಿ ಮಾಡಿ ನನ್ನ ಲ್ಯಾಪ್ ಟಾಪ್ ನಲ್ಲೋ, ಕಂಪ್ಯೂಟರ್ ನಲ್ಲೋ ಟೆಸ್ಟ್ ಮಾಡಿದ್ರೆ ಅಲ್ಲಿಗೆ ನೋಡಿ ಮುಗೀತು ನನ್ನ ಕಲಿಕೆ.
ಆದ್ರೆ ಇದನ್ನೆಲ್ಲಾ ಹೇಳಕ್ ಮುಂಚೆ, ಅದನ್ನ ಯಾಕೆ ಕಲೀಬೇಕು, ಇತ್ಯಾದಿ ತಲೇಲಿದ್ದವರಿಗೆ, ನಾನು ಏನೋ ಮ್ಯಾಜಿಕ್ ಮಾಡ್ತೀನಿ ಅಂತಂದ್ರೆ ಇರಲಿ ಒಂದ್ ಕಿತ ನೋಡೇ ಬಿಡುವ ಅನ್ಸಲ್ವಾ? ಅದಕ್ಕೇ ನೋಡಿ, ಯಾಹೂ ನನ್ನ ಕೈನಲ್ಲೇ ಇದೆ ಅಂತ ಹೇಳಿದೆ. ಯಹೂ ಟೈಪ್ ಮಾಡಿದ್ರೆ ಯಾವ ಐ.ಪಿಗೆ ಸುದ್ದಿ ತಲುಪಿಸ ಬೇಕು ಅನ್ನೋದನ್ನ ಡಿ.ಎನ್.ಎಸ್ ಮಾಡುತ್ತೆ. ಡಿ.ಎನ.ಎಸ್ ಸರ್ವರ್ ಕಾನ್ಫಿಗರ್ ಮಾಡ್ತಾ ಯಾಹೂನ ನ ನನ್ನ ಸಿಸ್ಟಂನ ಐ.ಪಿಗೆ ಹೋಗಂಗೆ ಮಾಡು ಅಂತ ಅದಕ್ಕೆ ಹೇಳಿದ್ದಾಯ್ತು. ನಂತರ  ಮೇಲಿನ ಚಿತ್ರದಲ್ಲಿನ ತರ root (ಲಿನಕ್ಸ್ ಅಡ್ಮಿನಿಸ್ಟ್ರೇಟರ್) ಆಗಿ yahoo.com ಸರ್ವರ್ ಗೆ (ನನ್ನ ಕಂಪ್ಯೂಟರ್ಗೆ ;) ಅವರಿಗೆ ಕಂಡದ್ದು yahoo.com ಅಂತ) ಲಾಗಿನ್ ಆಗಿದ್ದನ್ನ ತೋರ್ಸಿ ಬೆಚ್ಚು ಬೀಳಿಸಿದೆ. ಆಮೇಲೆನೆ ಡಿ.ಎನ್.ಎಸ್. ಹ್ಯಾಗೆ ನನ್ನ ಕಂಪ್ಯೂಟರ್ನಲ್ಲಿ ಕಾನ್ಫಿಗರ್ ಮಾಡ್ಕೋಬಹುದು ಅಂತ ಅವರಿಗೆ ತಿಳಿಸಿ ಕೊಟ್ಟದ್ದು.  ಕಡೆ ಎರಡು ಸಾಲುಗಳಲ್ಲಿ ನನ್ನ ಕೋಡ್ ನೇಮ್ TechFiz ಪ್ರಿಂಟ್ ಆಗೋವರ್ಗು ಯಾರಿಗೂ ನಾನು ಸುಳ್ಳು ಹೇಳ್ತಿದ್ದೇನೆ ಅಂತ್ಲೇ ಗೊತ್ತಾಗ್ಲಿಲ್ಲ. ಆಮೇಲೆ ಹೇಳಿದ್ರು ಅದೆಂಗೆ ಸಾಧ್ಯ ಅಂತ. ಕಲಿತದ್ದಾಗಿತ್ತಲ್ಲ, ನನ್ನ ಸಿಸ್ಟಂ ಕಾನ್ಫಿಗರೇಷನ್ ಚೆಕ್ ಮಾಡಿದ್ರು. ಕಡೆಗೆ ಅವ್ರೂ ನಕ್ಕು, ಡಿ.ಎನ್.ಎಸ್ ಕಲ್ತು ಮನೆಗೆ ಹೋದ್ರು.
ಹ್ಯಾಕ್ (hack) ಅಂತಂದ್ರೆ, ಯಾರಿಗೋ ತೊಂದರೆ ಕೊಡೋದು ಅಂತಲ್ಲ. ಯಾವುದೇ ಕೆಲಸವನ್ನ ಸಾಮಾನ್ಯವಾಗಿ ಜನ ಮಾಡದ್ದನ್ನ ಮಾಡ್ಲಿಕ್ಕೆ ಪ್ರಯತ್ನ ಪಡೋದೇ ಹ್ಯಾಕಿಂಗ್ (Hacking). ಆದ್ರೆ, ಅದನ್ನೇ ಕೊಳ್ಳೆ ಹೊಡೀಲಿಕ್ಕೋ, ಅಥವಾ ಇನ್ಯಾವುದೋ ದುರುದ್ದೇಶಕ್ಕೋ ಅದನ್ನ ಬಳಸಿಕೊಂಡ್ರೆ ಅದನ್ನ ಕ್ರಾಕ್ರಿಂಗ್ (Cracking) ಅಂತ ಕರೀತಾರೆ.


ಚಲನಚಿತ್ರ
: ಒಮ್ಮೆ ಹ್ಯಾಕಿಂಗ್ ಆಧಾರಿತ ಚಲನಚಿತ್ರ “ಟೇಕ್ ಡೌನ್” ಅನ್ನು ನೋಡಿ.

ಇತರೆ: ಸ್ವತಂತ್ರ ತಂತ್ರಾಂಶ ಪಿತಾಮಹ ರಿಚರ್ಡ್ ಸ್ಟಾಲ್ಮನ್ ಅವರ ಮಾತಿನಲ್ಲಿ ಹ್ಯಾಂಕಿಂಗ್ ಅಂದ್ರೆ ಏನು ಅಂತ ತಿಳೀಲಿಕ್ಕೆ ಈ ಕೊಂಡಿ ನೋಡಿ .

ಕಲಿಕೆನ ಶಾಲೇಲೆ ಮಾಡ್ಬೇಕಂತಿಲ್ಲ. ಎಲ್ಲಿದ್ದೇವೋ ಅಲ್ಲೇ ಎಷ್ಟೋ ಕಲೀ ಬಹುದು. ಕಲಿಕೆಗೆ ಆಸಕ್ತಿ ಬೇಕು. ಅದನ್ನ ಯಾರುಬೇಕಾದ್ರೂ ಹುಟ್ಟಿ ಹಾಕಬಹುದು.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This