ಲಿನಕ್ಸಾಯಣ – ೩೮ – ಡೆಬಿಯನ್ ಗ್ನು/ಲಿನಕ್ಸ್ ೫.೦ ಈಗ ಲಭ್ಯ

ಇತ್ತೀಚೆಗೆ ಸಂಪದದಲ್ಲಿ “ಡೆಬಿಯನ್” ಸುದ್ದಿ ನಮ್ಮ ಟೆಕ್ನಿಕಲ್ ತಂಡದ ಗ್ನು/ಲಿನಕ್ಸ್ ಹಬ್ಬದಲ್ಲಿ “ಚಿಗುರು” ಆಗಿ ಚಿಗುರೊಡೆಯಿತು. ತಂಡದ ತಂತ್ರಜ್ಞಾನದಲ್ಲಿ ಕನ್ನಡ ಸಂಬಂದೀ ವಿಷಯಗಳಿಗೆ ಸುದೃಡ ತಂತ್ರಾಂಶವಾಗಬಲ್ಲದು ಎಂಬ ಆಯಶದೊಂದಿಗೆ, ಗ್ನು/ಲಿನಕ್ಸ್ ನಲ್ಲಿ ನಮ್ಮೆಲ್ಲರ ಅನುಭವದ ಆಧಾರದ ಮೇಲೆ, ಡೆಬಿಯನ್ ಡಿಸ್ಟ್ರಿಬ್ಯೂಷನ್ ಅನ್ನು ತಂಡ ಇನ್ಮುಂದೆ ಉಪಯೋಗಿಸೋದು ಅಂತ ತೀರ್ಮಾನಿಸಿದ್ದು.

೨೨ ತಿಂಗಳಿನಿಂದ, ವಿಶ್ವದ ಎಲ್ಲ ಕಡೆಗಳಿಂದ, ಸ್ವತಂತ್ರ ತಂತ್ರಾಂಶದ ಸಮುದಾಯದ ಅನೇಕ ಡೆವೆಲಪರ್ಗಳು, ತಂತ್ರಜ್ಞರು, ಲೇಖಕರು  ಇನ್ನೂ ಅನೇಕರು ಚಲ ಬಿಡದ ತಿವಿಕ್ರಮರಂತೆ ನಿರಂತರವಾಗಿ ಅಭಿವೃದ್ದಿ  ಪಡಿಸಿದ, ಡೆಬಿಯನ್ ಗ್ನು/ಲಿನಕ್ಸ್ ನ ೫.೦ ಆವೃತ್ತಿ ಫೆಬ್ರವರಿ ೧೪ ರಂದು, ಎಲ್ಲರಿಗೆ “stable”, ಅಂದ್ರೆ ನಿಮ್ಮೆಲ್ಲ ರೀತಿಯ ಕಂಪ್ಯೂಟರುಗಳಲ್ಲಿ ಬಳಸಿಕೊಳ್ಳಲಿಕ್ಕೆ ಸಿದ್ದವಾಗಿರುವುದು ಮತ್ತು ಯೋಗ್ಯವಾದದ್ದು ಎಂದು ಘೋಷಿಸಲ್ವಟ್ಟಿತು. ಈ ಆವೃತ್ತಿಯನ್ನ “ಲೆನ್ನಿ (Lenny)” ಎಂದು ಕರೆಯಲಾಗಿದೆ.

೧೨ ವಿವಿಧ ರೀತಿಯ ಕಂಪ್ಯೂಟರ್ ಪ್ರೋಸೆಸರ್ ಆರ್ಕಿಟೆಕ್ಚರ್ ಗಳಿಗೆ ಲಭ್ಯವಿದ್ದು, KDE, Gnome, Xfce ಮತ್ತು LXDE ಡೆಸ್ಕ್ಟಾಪ್ ಎನ್ವಿರಾನ್ಮೆಂಟ್ ಗಳನ್ನು ತನ್ನ ತೆಕ್ಕೆಯಲ್ಲಿ ತುಂಬಿಕೊಂಡಿದ್ದು , ಎಲ್ಲ ವರ್ಗದ ಜನರಿಗೆ ಬಹಳ ಕಾಲದವರೆಗೆ ಧೃಡವಾದ ಕಂಪ್ಯೂಟಿಂಗ್ ಅನುಭವವನ್ನ ಕೊಡವ ಬರವಸೆಯನ್ನ ಮೂಡಿಸಿದೆ. ಪ್ಲಾಮ್ ಟಾಪ್ ಗಳಿಂದ ಹಿಡಿದು, ಸೂಪರ್ ಕಂಪ್ಯೂಟರ್ ಗಳವರೆ ಮತ್ತು ಅದರ ನಡುವೆ ನಿಮಗೆ ಕಾಣಸಿಗುವ ಎಲ್ಲ ರೀತಿಯ ಕಂಪ್ಯೂಟರುಗಳ ಮೇಲೆ ಇದು ಕೆಲಸ ಮಾಡಬಲ್ಲದು.

ಡೆಬಿಯನ್ ಸಪೋರ್ಟ್ ಮಾಡುವ ೧೨ ಆರ್ಕಿಟೆಕ್ಚರ್ಗಳು ಇಂತಿವೆ:

Sun SPARC (sparc), HP Alpha (alpha), Motorola/IBM PowerPC (powerpc), Intel IA-32 (i386), IA-64 (ia64), HP PA-RISC (hppa), MIPS (mips, mipsel), ARM (arm, armel), IBM S/390 (s390), and AMD64 and Intel EM64T (amd64).

ಡೆಬಿಯನ್ ಲೆನ್ನಿಯ ಈ ಆವೃತ್ತಿಯನ್ನು ಡಿಸೆಂಬರ್ ೨೬,೨೦೦೮ ರಂದು ಕಾರ್ ಅಪಘಾತದಲ್ಲಿ ಮೃತರಾದ ಡೆಬಿಯನ್ ಡೆವೆಲಪರ್ Thiemo Seufer ಗೆ ಅರ್ಪಿಸಲಾಗಿದ್ದು, ಡೆಬಿಯನ್ ಗೆ ಅನೇಕ ಕೊಡುಗೆಗಳನ್ನ ನೀಡಿದ Thiemo ನನ್ನು  , ಅವನ ಕಠಿಣ ಪರಿಶ್ರಮ, ಜ್ಞಾನವನ್ನ  ಎಂದಿಗೂ ಮರೆಯಲಾಗದಂತೆ ಈ ಆವೃತ್ತಿ ಮಾಡಿದೆ.

ಡೆಬಿಯನ್ ಚಿಗುರಿನ ಮುಂದಿನ ಆವೃತ್ತಿ ಲೆನಿಯಲ್ಲಿ ಎಲ್ಲ ಹೊಸ ಅಪ್ದೇಟ್ಗಳನ್ನ ನಿಮ್ಮ ಮುಂದೆ ತರಲಿದೆ. ಚಿಗುರು ಉಪಯೋಗಿಸುತ್ತಿರುವವರು, ಅದನ್ನ ಇಂಟರ್ನೆಟ್ ಮೂಲಕ ಅಪ್ಡೇಟ್ ಮಾಡಿಕೊಂಡ್ರೆ ಸಾಕು.

ಡೆಬಿಯನ್ ಚಿಗುರು :)
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ, ಇಲ್ಲಿಂದ ಪಡೆಯಿರಿ.

ಹೆಚ್ಚಿನ ವಿಚಾರ ವಿನಿಮಯಕ್ಕೆ: [email protected]

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This