ಲಿನಕ್ಸಾಯಣ – ೩೩ – ಲಿನಕ್ಸ್ ಮಾಸ ಪತ್ರಿಕೆಗಳು

ಗ್ನು/ಲಿನಕ್ಸ್ ಬಗ್ಗೆ ನಿಮ್ಮೆಲ್ಲರ ಜೊತೆ ವಿಷಯಗಳನ್ನ ಇದುವರೆಗೂ ಹಂಚಿಕೊಳ್ತಾ ಬರ್ತಿದ್ದೇನೆ. ಅದರ ಜೊತೆ ಗ್ನು/ಲಿನಕ್ಸ್ ಅಂತರಾಳವನ್ನ ಅರಿಯಲು ಸಹಾಯ ಮಾಡಿದ ಕೆಲವು ರಹಸ್ಯಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ತಿದ್ದೇನೆ. ಆ ರಹಸ್ಯಗಳಲ್ಲೊಂದು ನಮಗೆ ಲಭ್ಯವಿರುವ ಗ್ನು/ಲಿನಕ್ಸ್ ಮಾಸಪತ್ರಿಕೆಗಳು.

ಮೊದಲು ನಿಮಗೆ ಉಚಿತವಾಗಿ ಸಿಗುವ ಆನ್ಲೈನ್ ಮಾಸ ಪತ್ರಿಕೆ ಬಗ್ಗೆ ಹೇಳ್ತೇನೆ.

ಫುಲ್ ಸರ್ಕಲ್ ಮ್ಯಾಗಜೀನ್ ಸ್ವತಂತ್ರ,ವೈಯುಕ್ತಿಕ ಮತ್ತು ಉಬುಂಟು ಲಿನಕ್ಸ್ ಗೆಂದೇ ಮುಡಿಪಾಗಿರುವ ಪತ್ರಿಕೆ. ಪ್ರತಿ ತಿಂಗಳೂ ನಿಮಗೆ ಇತರೆ ಲಿನಕ್ಸ್ ಬಳಕೆದಾರರು ಬರೆದಿರುವ ಲೇಖನಗಳ ಜೊತೆ, ಉಬುಂಟು ಉಪಯೋಗಿಸಲು, ಅದರಲ್ಲಿನ ಇತರೆ ತಂತ್ರಾಂಶಗಳನ್ನು ಬಳಸುವ ಮಾಹಿತಿಯನ್ನ ಹೊಂದಿರುತ್ತದೆ. ಕೆಳಗೆ ಕೊಟ್ಟಿರುವ ಚಿತ್ರದ ಮೇಲೆ ಕ್ಲಿಕ್ಕಿಸಿ ಈ ಪತ್ರಿಕೆಯ ತಾಣಕ್ಕೆ ನೀವು ಸರಿಯಬಹುದು.

ಕೆಲವರಿಗೆ ಮ್ಯಾಗಜೀನ್ ಗಳು ಕಾಗದದಲ್ಲಿ ಅಚ್ಚಾಗಿದ್ದರೇ ಚೆನ್ನ. ಅವರಿಗಂತ್ಲೇ ಇದೆ ಲಿನಕ್ಸ್ ಫಾರ್ ಯು (Linux for you)  ಪ್ರತಿ ತಿಂಗಳು ಇದಕ್ಕೆ ನೀವು ೧೦೦ ರೂ ತೆರಬೇಕಾಗುತ್ತದೆ.

ಮ್ಯಾಗಜೀನ್ ಜೊತೆ ನಿಮಗೆ ಸ್ವತಂತ್ರ ತಂತ್ರಾಂಶಗಳ ಡಿವಿಡಿ ಮತ್ತು ಸಿ.ಡಿಗಳು ಸಿಗುತ್ತವೆ.

ಈ ತಿಂಗಳಿನ ಹಂಚಿಕೆಯ ಜೊತೆ ಸಿಕ್ಕ ಸಿ.ಡಿಗಳನ್ನ ನೀವು ಕೆಳಗಿನ ಚಿತ್ರದಲ್ಲಿ ನೋಡ ಬಹುದು.

ಲಿನಕ್ಸ್ ಫಾರ್ ಯು ನಿಮಗೆ ಸ್ವತಂತ್ರ ತಂತ್ರಾಂಶದ ಸುತ್ತ ಮುತ್ತ ನೆಡೆಯುತ್ತಿರುವ ಅಭಿವೃದ್ದಿ, ಕಾರ್ಯಕ್ರಮಗಳು, ಬದಲಾವಣೆಗಳು ಇತ್ಯಾದಿಗಳ ಜೊತೆ ಓದುಗರ ಬರಹಳನ್ನೂ ಪ್ರಕಟಿಸುತ್ತದೆ. ಪ್ರತಿ ತಿಂಗಳೂ ಹೊಸ ವಿಷಯಗಳನ್ನ ಅರಿಯಲು ಇದು ನನಗೆ ಎಷ್ಟೋ ಸಹಾಯ ಮಾಡಿದೆ.

ನಿಮಗೂ ಇಂತಹ  ಪತ್ರಿಕೆಗಳ ಬಗ್ಗೆ ತಿಳಿದಿದ್ದರೆ, ಇತರೆ ಸಂಪದಿಗರಿಗೆ ತಿಳಿಸ್ತೀರಲ್ಲಾ?

ವಿ.ಸೂ : ಈ ಪತ್ರಿಕೆಗಳು ಇಂಗ್ಲೀಷಿನಲ್ಲಿವೆ.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This