ಲಿನಕ್ಸಾಯಣ – ೩೨ – ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

by | Sep 19, 2010 | ಸಾಮಾನ್ಯ ಜ್ಞಾನ | 0 comments

ಲಿನಕ್ಸ್ ನ ಟರ್ಮಿನಲ್ ಬಳಸಿದ್ದೀರಲ್ಲವೆ? (Applications -> Accessories -> Terminal) ಹೌದು ವಿಂಡೋಸ್ ನಲ್ಲಿನ ಡಾಸ್ (Dos) ಪ್ರಾಂಪ್ಟ್ ನಂತಹದ್ದು. ಇಲ್ಲಿ ls ಎಂದು ಟೈಪ್ ಮಾಡಿದರೆ, ನಿಮಗೆ ಫೈಲ್ ಮತ್ತು ಡೈರೆಕ್ಟರಿಗಳನ್ನ ಪಟ್ಟಿ ಮಾಡಿ ತೋರಿಸುತ್ತದೆ. ಆದ್ರೆ ಅದನ್ನ ಉಲ್ಟಾ ಅಂದ್ರೆ sl ಅಂತ ಟೈಪ್ ಮಾಡಿದ್ರೆ ಏನಾಗತ್ತೆ? ಕೆಳಗಿನ Error ನಿಮಗೆ ಕಾಣಿಸುತ್ತೆ.

-bash: sl: command not found

ಇದನ್ನ ತಪ್ಪಿಸಿ, ರೈಲ್ ಬಿಡಬೇಕಾ? ಹೌದ್ರಿ, ನಮ್ಮ ಅರವಿಂದ ಇದಾನಲ್ಲ, ಮೊನ್ನೆ ಒಂದು ತಂತ್ರಾಂಶ ಇನ್ಸ್ಟಾಲ್ ಮಾಡಿ ನೋಡು ಅಂದ. ಯಾವ್ದು ಅಂದ್ರಾ?  sl ಅಂತ. ಅಂದ್ರೆ “ಸ್ಟೀಮ್ ಲೊಕೊಮೋಟೀವ್” (Steam Locomotive).

ಕೆಳಗೆ ಕೊಟ್ಟಿರುವ ಚಿತ್ರ ನಿಮಗೆ ಇದನ್ನ ಸಿನಾಪ್ಟೆಕ್ ಉಪಯೋಗಿಸಿ  ಹೇಗೆ ಇನ್ಸ್ಟಾಲ್ ಮಾಡಬಹುದು ಅನ್ನೋದನ್ನ ತೋರಿಸುತ್ತದೆ. ಇಲ್ಲಾಂದ್ರೆ

sudo aptitude install sl

ಅನ್ನೋ ಕಮ್ಯಾಂಡನ್ನ ನಿಮ್ಮ ಟರ್ಮಿನಲ್ ನಲ್ಲಿ ರನ್ ಮಾಡಿ. ನಂತರ sl ಟೈಪ್ ಮಾಡಿ ನೋಡಿ. ಉಗಿಬಂಡಿ ಬರ್ಲಿಲ್ಲಾಂದ್ರೆ ಹೇಳಿ. (ಉಬಂಟು ಮತ್ತು ಇತರೆ ಡೆಬಿಯನ್ ಮೂಲದ ಓ.ಎಸ್ ಗಳಿಗೆ ಮಾತ್ರ ಬೇರೆಯದರಲ್ಲಿ ಇದನ್ನ ನಾನಿನ್ನೂ ಬಳಸಿ ನೋಡಿಲ್ಲ)


Steam Locomotive

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ ಮಾಡಿ)

ಚಿತ್ರದ ಆಕರ: https://nicubunu.blog…

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು...

read more
Share This