ಲಿನಕ್ಸಾಯಣ – ೨೮ – ಉಬುಂಟು ೮.೧೦ – ಇನ್ಟ್ರೆಪಿಡ್ ಐಬೆಕ್ಸ್ ನಿಮಗಾಗಿ

by | Sep 19, 2010 | ಇನ್ಸ್ಟಾಲೇಷನ್, ಗ್ನು/ಲಿನಕ್ಸ್ ವಿತರಣೆಗಳು, ಸಾಮಾನ್ಯ ಜ್ಞಾನ | 0 comments

ಉಬುಂಟುವಿನ ಹೊಸ ಆವೃತ್ತಿ ೮.೧೦ ಅಥವಾ ಇನ್ಟ್ರೆಪಿಡ್ ಐಬೆಕ್ಸ್ ಈಗ ನಿಮಗೆ ಲಭ್ಯವಿದೆ.

೩ಡಿ ಗ್ರಾಫಿಕ್ಸ್, ಇಂಟರ್ನೆಟ್ ಬ್ರೌಸಿಂಗ್, ಫೋಟೋಗಳಿಗಾಗಿ, ಸಂಗೀತ, ಚಲನಚಿತ್ರ ಇತರೆ ಮನರಂಜನೆಗಾಗಿ, ದಿನ ನಿತ್ಯದ ಆಫೀಸ್ ಕೆಲಸಗಳಿಗೆ ಇನ್ನೂ ಅನೇಕ ವಿಷಯಗಳಿಗೆ ಬೇಕಾದ ತಂತ್ರಾಂಶಗಳನ್ನ ಪ್ರಪಂಚದಾಧ್ಯಂತ ಎಲ್ಲರಿಗೆ ಮುಟ್ಟಿಸ್ತಿರೋ ಕೆನಾನಿಕಲ್ ಕಂಪನಿಯಿಂದ ಪ್ರಾಯೋಜಿತವಾಗಿರುವ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ “ಉಬುಂಟು” ಹೊಸ ಆವೃತ್ತಿ, ನಿಮಗೆ ಅನೇಕ ಅಪ್ಡೇಟ್ಗಳನ್ನ ಹೊತ್ತು ತಂದಿದೆ.

ಹಿಂದಿನ ಆವೃತ್ತಿ ಗಿಂದ ಅದೆಷ್ಟೋ ಮೇಲು. ನಾನಿದನ್ನ ಇದರ ಪರೀಕ್ಷಾರ್ಥ ಆವೃತ್ತಿ ಬಿಡುಗಡೆಯಾದಾಗಲಿಂದ್ಲೂ ಉಪಯೋಗಿಸ್ಕೊಂಡು ಬಂದಿದ್ದೇನೆ.

ಇದರ ISO ಗಳನ್ನ ಅಥವಾ ಟಾರೆಂಟ್ ಡೌನ್ಲೋಡ್ ಮಾಡ್ಕೊಳ್ಳಿ: ubuntu-8.10-desktop-i386.iso.

ಲಭ್ಯವಿರುವ ಎಲ್ಲ ಟಾರೆಂಟ್ಗಳು ಇಲ್ಲಿವೆ -> Ubuntu torrents

ನೀವಾಗಲೇ ಉಬುಂಟು ಇನ್ಸ್ಟಾಲ್ ಮಾಡ್ಕೊಂಡಿದ್ರೆ ಅದನ್ನ ಅಪ್ಡೇಟ್ ಮಾಡ್ಕೊಂಡ್ರೆ ಸಾಕು.

Alt+F2 ಪ್ರೆಸ್ ಮಾಡಿ, update-manager -d ಎಂದು ಟೈಪ್ ಮಾಡಿ

ನಂತರ “Update button” ಪ್ರೆಸ್ ಮಾಡಿದರಾಯಿತು.

(ಸೂಚನೆ: ಇಂಟರ್ನೆಟ್ ಸಂಪರ್ಕ ಇರಬೇಕು :) )

ಹೊಸ ಆವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಇನ್ನೊಂದು ಲೇಖನದಲ್ಲಿ ಕೊಡ್ತೇನೆ.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್‌ನಲ್ಲಿ ಬಳಸುವುದು

ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್‌ನಲ್ಲಿ ಬಳಸಲು ಈ ಕೆಳಗಿನ ಮಾಹಿತಿ ನಿಮಗೆ ಉಪಯುಕ್ತವಾಗಬಹುದು. ಟೆಸರಾಕ್ಟ್ ಬಳಸಲು ಈ ಕೆಳ‍ಗಿನ ತಂತ್ರಾಂಶಗಳನ್ನು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಿ. ‍1. Java Version 13 - https://www.oracle.com/technetwork/java/javase/downloads/jdk13-downloads-5672538.html 2....

read more
Share This