ಟೆಸ್ಟ್ ಡಿಸ್ಕ್(testdisk) – ಗ್ನು ಪಾರ್ಟೀಷನ್ ರಿಕವರಿ ಟೂಲ್

ಒಮ್ಮೆ ಕಂಪ್ಯೂಟರ್ನಲ್ಲಿ ಆಟ ಆಡ್ಲಿಕ್ಕೆ ಶುರು ಮಾಡಿದ್ರೆ ,ಅದನ್ನ ಕೆಲಸ ಮಾಡದ ಹಾಗೆ ಮಾಡಿ ಮತ್ತೆ ಅದನ್ನ ಮೊದಲಿನ ಸ್ಥಿತಿಗೆ ತರೋವರೆಗೂ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಕಡೆ ತಲೆ ಕೆಡಿಸಿ ಕೊಳ್ಳೊ ನನ್ನಂತಹವರಿಗೆ ಮತ್ತು, ಏನೋ ಮಾಡ್ಲಿಕ್ಕೋಗಿ ತಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನ ಡಾಟಾ ಕಳೆದು ಕೊಂಡು ಪರದಾಡುತ್ತಿರುವವರಿಗೆ ಈ ಲೇಖನ.

ಮೊನ್ನೆ ಹಾರ್ಡಿಸ್ಕ್ ಪಾರ್ಟೀಷನ್ ಮಾಡಿ ಲಿನಕ್ಸ್ ಇನ್ಸ್ಟಾಲ್ ಮಾಡಿಕೊಳ್ಲಿಕ್ಕೆ ಹೊರಟ ಗೆಳೆಯನೊಬ್ಬ ಮಾಡಿದ ಸಣ್ಣ ತಪ್ಪೊಂದು ಅವನ ಎಲ್ಲ ಪಾರ್ಟೀಷನ್ ಗಳನ್ನ “ಕಾಣದಂತೆ ಮಾಯ ಮಾಡಿತ್ತು”. ಇದು ನನಗೂ ೫-೬ ವರ್ಷಗಳ ಹಿಂದೆ ಅನುಭವಕ್ಕೆ ಬಂದ ವಿಷಯ. ಆಗ ಏನೇನೋ ಸಾಫ್ಟ್ವೇರ್ಗಳನ್ನ ಡೌನ್ ಲೋಡ್ ಮಾಡಿ ಡಿಸ್ಕ್ ರಿಕವರಿ ಮಾಡ್ಲಿಕ್ಕೆ ಆಗದೆ, ನಾನು ಪ್ರೊಪ್ರೈಟರಿ ಸಾಫ್ಟ್ವೇರೊಂದನ್ನೂ ಕೊಂಡದ್ದಿದೆ. ಆದ್ರೆ ಈಗ ನೀವು ನನ್ನನ್ನ ಕೇಳಿದ್ರೆ ನಾನು ನಿಮಗೆ ಗ್ನು ನ testdisk (ಟೆಸ್ಟ್ ಡಿಸ್ಕ್)  ಕಡೆಗೊಮ್ಮೆ ನೋಡಿ ಅಂತ ಹೇಳ್ತೇನೆ. ನೀವಿದಕ್ಕೆ ನಯಾ ಪೈಸೆ ಕೂಡ ಖರ್ಚು ಮಾಡಬೇಕಿಲ್ಲ. ನಿಮ್ಮ ಹಾರ್ಡಿಸ್ಕ್ ನ ಡಾಟ ಮರಳಿ ಪಡೆಯ ಬಹುದು.

ನಾನು ಮಾಡಿದ್ ಇಷ್ಟು. ಕಂಪ್ಯೂಟರ್ ಅನ್ನ ಉಬುಂಟು ಲೈವ್ ಸಿ.ಡಿ ಯಲ್ಲಿ ಬೂಟ್ ಮಾಡಿ, ಅದನ್ನ ನನ್ನ ನೆಟ್ವರ್ಕ್ ಗೆ ಕನೆಕ್ಟ್ ಮಾಡಿದೆ. ಇಂಟರ್ನೆಟ್ ಇರೋದು ಕಂಡ ತಕ್ಷಣ, Gnome-Terminal ತೆಗೆದು testdisk ಇನ್ಸ್ಟಾಲ್ ಮಾಡಿದೆ.

sudo aptitude install testdisk

ಆನಂತರ ,

sudo testdisk /dev/sda

ಟೈಪ್ ಮಾಡಿದೆ. ಇಲ್ಲಿ /dev/sda ಕಂಪ್ಯೂಟರಿನಲ್ಲಿದ್ದ ಹಾರ್ಡಿಸ್ಕ್ (ಪಾರ್ಟೀಷನ್ಗಳು ಮಾಯ ಆಗಿದ್ದು ಇದರಿಂದಲೇ).

ಇದು  ಡಾಟ ರಿಕವರಿ ಯುಟಿಲಿಟಿಯೊಂದನ್ನ ಪ್ರಾರಂಭಿಸಿತು.

ಇಲ್ಲಿ ಕಂಡು ಬರುವ ಕೆಲ ಆಪ್ಶನ್ ಗಳನ್ನ ಓದಿ ಕೊಂಡರಾಯಿತು ಸುಲಭವಾಗಿ ಕಳೆದು ಹೋದ ಪಾರ್ಟೀಷನ್ ಗಳನ್ನ ಮರಳಿ ಪಡೆಯಬಹುದು.

testdisk ವೆಬ್ ಸೈಟ್ ಗೊಮ್ಮೆ ಬೇಟಿ ಕೊಟ್ಟು ಈ ಯುಟಿಲಿಟಿಯ ವಿಂಡೋಸ್ ಮತ್ತು ಲಿನಕ್ಸ್ ಆವೃತ್ತಿಯನ್ನ ಡೌನ್ಲೋಡ್ ಮಾಡಿ ಇಟ್ಕೊಳ್ಳಿ. ಮುಂದೇ ಇದೆ ತೊಂದರೆ ಯಾದರೆ ಇಂಟರ್ನೆಟ್ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಕಿಲ್ಲ.

ವಿ.ಸೂ : ಇದರ ಬಗ್ಗೆ ಹೆಚ್ಚಿನ ಸಹಾಯವನ್ನ ಇದೇ ಪುಟದಲ್ಲಿ ದಾಖಲಿಸಿಲ್ಲದಿರುವುದಕ್ಕೆ ಕಾರಣ, ಇದು ಬುದ್ದಿವಂತರಿಗೆ ಮಾತ್ರ. ನೀವೇ ಕೊಂಚ ಓದಿ ಕೊಳ್ಳುವಷ್ಟು ಮತ್ತು ಪಲಿತಾಂಶಕ್ಕೆ ಕಾಯುವ ತಾಳ್ಮೆ ನಿಮ್ಮಲ್ಲಿ ಖಂಡಿತಾ ಇರಬೇಕು.

banner ad

Leave a Reply

Your email address will not be published. Required fields are marked *

Powered by HostRobust | © 2006 - 2014 Linuxaayana
Share This