GNOME3 ಯಲ್ಲಿ ಡೆಸ್ಕ್‌ಟಾಪ್‌ಗೆ ಹಿಂತಿರುಗಲು ಶಾರ್ಟ್‌ಕಟ್

GNOME3 ಬಳಸುತ್ತಿದ್ದೀರಾ? ಅದರಲ್ಲಿ ಶಾರ್ಟ್‌ಕಟ್‌ಗಳ ಜೊತೆಗೆ ಒಮ್ಮೊಮ್ಮೆ ಗುದ್ದಾಡಿದ್ದು ನೆನಪಿದ್ದಲ್ಲಿ, ಅದನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಮಾರ್ಗಸೂಚಿ. ನಿಮ್ಮ ಜಿನೋಮ್ ಡೆಸ್ಕ್ಟಾಪ್‌ನಲ್ಲಿ ಕಾಣುವ ನಿಮ್ಮ ಯೂಸರ್ ನೇಮ್ ಮೇಲೆ ಕ್ಲಿಕ್ ಮಾಡಿ System Settings ಸೆಲೆಕ್ಟ್ ಮಾಡಿಕೊಳ್ಳಿ. Hardware ವಿಭಾಗದ ಕೆಳಗೆ Keyboard ಮೇಲೆ ಕ್ಲಿಕ್ ಮಾಡಿ. ಈಗ ಶಾರ್ಟ್‌ಕಟ್ಸ್ ಟ್ಯಾಬ್ ಕ್ಲಿಕ್ ಮಾಡಿ ನಂತರ ಎಡ ಆಯ್ಕೆಗಳಲ್ಲಿ Navigation ಕ್ಲಿಕ್ ಮಾಡಿ. ಕೆಳಗೆ ಸ್ಕ್ರಾಲ್ ಮಾಡಿದಾಗ ನಿಮಗೆ Hide all normal windows...

CTRL+ALT+Backspace – ಕೆಲಸ ಮಾಡ್ತಿಲ್ವಾ?

ಉಬುಂಟುವಿನಲ್ಲಿ ಮೊದಲಿಂದಲೂ ಕೆಲಸ ಮಾಡ್ತಿದ್ದ್ರೆ, CTRL+ALT+Backspace ಉಪಯೋಗಿಸಿ ಲಾಗ್-ಔಟ್ ಆಗುತ್ತಿದ್ದದ್ದು ಹಳೆಯ ಕಥೆ. ಹೊಸ ಉಬುಂಟು ಆವೃತ್ತಿಗಳಲ್ಲಿ ಇದು ಸಾಧ್ಯವಿಲ್ಲ.. ಅನೇಕ ಬಳಕೆದಾರರು CTRL+ALT+Backspace ನಿಂದ ತೊಂದರೆಯಾಗುತ್ತಿದೆ ಎಂಬ ಅನಿಸಿಕೆ ನೀಡಿದ್ದರಿಂದ, UI ಎಕ್ಸ್ಪರ್ಟುಗಳು ಇದನ್ನು ಹೊಸ ಆವೃತ್ತಿಗಳಲ್ಲಿ ತೆಗೆದು ಹಾಕಿದರು. ಆದರೆ ನಮ್ಮಲ್ಲಿ ಅನೇಕರಿಗೆ ಇದು ಇನ್ನೂ ಬಹಳ ಉಪಯೋಗಿ. ಬೇರೆ ಬಳಕೆದಾರನ ಲಾಗಿನ್ ಹೆಸರನ್ನು ಬಳಸಿ ಕಂಪ್ಯೂಟರ್ ಗೆ ಲಾಗಿನ್ ಆಗಬೇಕಾದಲ್ಲಿ ಇದು ಬೇಕೆಬೇಕು. ಈ...

Powered by HostRobust | © 2006 - 2014 Linuxaayana