ಕನ್ನಡ ವಿಕ್ಷನರಿ‌(ಮುಕ್ತ ನಿಘಂಟು) – ೨ ಲಕ್ಷ ಪದಗಳ ಮೈಲಿಗಲ್ಲು ದಾಟಿ

ಕನ್ನಡ ವಿಕಿಪೀಡಿಯದ ಮತ್ತೊಂದು ಯೋಜನೆ ಕನ್ನಡ ವಿಕ್ಷನರಿ. ಇದೊಂದು ಮುಕ್ತ ನಿಘಂಟು ಆಗಿದ್ದು, ಯಾರು ಬೇಕಾದರೂ ಈ ನಿಘಂಟಿಗೆ ಹೊಸ ಪದಗಳನ್ನು, ಅರ್ಥಗಳನ್ನು ಸೇರಿಸಬಹುದು. ಸಮುದಾಯದಿಂದಲೇ ಬೆಳೆಯುತ್ತಿರುವ ಈ ನಿಘಂಟು ಒಟ್ಟಾರೆ ೨ ಲಕ್ಷಕ್ಕೂ ಹೆಚ್ಚಿನ ಪದಗಳನ್ನು ತನ್ನಲ್ಲಿರಿಸಿಕೊಂಡಿದೆ. http://kn.wiktionary.org ಯನ್ನೊಮ್ಮೆ ಭೇಟಿ ಮಾಡಿ. ಕನ್ನಡ ವಿಕ್ಷನರಿಯ ಸುತ್ತ ನಿರಂತರವಾಗಿ ಕೆಲಸ ಮಾಡುತ್ತಿರುವ ಸಮುದಾಯದ ಸಂಪಾದಕರ ಪಟ್ಟಿ ಇಂತಿದೆ: User Edits Creates (New) Rank Articles Other First edit...

ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಗ್ನು/ಲಿನಕ್ಸ್ ಅನ್ನು ಮುಕ್ತವಾಗಿ ಪಡೆಯಬಹುದು ಎಂದು ಓದಿದ್ದೆವು. ಆದರೆ ಇದನ್ನೇ ಆಧರಿಸಿ ಸೇವೆಗಳನ್ನು ನೀಡುವ ಕಂಪೆನಿಯೊಂದು ವರ್ಷಕ್ಕೆ ೧ಬಿಲಿಯನ್ ಡಾಲರುಗಳನ್ನು ತನ್ನ ಆಧಾಯವೆಂದು ಘೋಷಿಸಿದ್ದನ್ನು ಪ್ರಾಯಶ: ಕೇಳಿರಲಿಕ್ಕಿಲ್ಲ. ರೆಡ್‌ಹ್ಯಾಟ್ ಈ ಮೈಲಿಗಲ್ಲನ್ನು ದಾಟಿದ ಮೊದಲ ಕಂಪೆನಿಯಾಗಿದೆ. 17 ವರ್ಷ ಪ್ರಾಯದ ಈ ಕೆಂಪೆನಿಯ ಮೈಲಿಗಲ್ಲು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಮತ್ತೊಂದು ಮುಖದ ಪರಿಚಯವನ್ನು ನಿಮಗೆ ಮಾಡಿಕೊಡುತ್ತದೆ. ಗ್ನು/ಲಿನಕ್ಸ್ ಅನ್ನು ಇಂಟರ್ನೆಟ್ ಹಾಗೂ ಇತರೆ ಸೇವೆಗಳಿಗೆ ಬಳಸುವ ಸರ್ವರ್ಗಳಲ್ಲಿ...

Zorin-OS – ವಿಂಡೋಸ್ ಬಳಕೆದಾರರಿಗೆ ಲಿನಕ್ಸ್‌ನಲ್ಲೊಂದು ಪ್ರತಿರೂಪ

ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ಕೊಳ್ಳಲೂ ಹಣಕೊಡಬೇಕೆ ಎನ್ನುವವರಿಗೆ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುವಾಗ ಆಗಾಗ ತಲೆ ಕೆಡಿಸುವ ವೈರಸ್ , ಬ್ಲೂ ಸ್ಕ್ರೀನ್ ಇತ್ಯಾದಿಗಳಿಂದ ದೂರ ಉಳಿಯಲು ಆಸಕ್ತರಿರುವವರಿಗೆ ಗ್ನು/ಲಿನಕ್ಸ್ ತಂತ್ರಾಂಶಗಳು ಬಹಳ ಅಚ್ಚುಮೆಚ್ಚಾಗುತ್ತವೆ. ಲಿನಕ್ಸ್ ಎಂಬ ಪದ ಕೇಳಿದೊಡನೆಯೇ ಅದು ಸಾಮಾನ್ಯರಿಗಲ್ಲ ಎನ್ನುವವರಿಗೆ ಅಚ್ಚರಿಗೊಳಿಸುವಷ್ಟು ಈ ತಂತ್ರಾಂಶಗಳು ಇಂದು ಅಭಿವೃದ್ದಿಗೊಂಡಿವೆ. ಉದಾಹರಣೆಗೆ – ಇತ್ತೀಚೆಗೆ ಅತ್ಯಂತ ಜನಪ್ರಿಯವಾಗುತ್ತಿರುವ ಮೊಬೈಲ್ ತಂತ್ರಾಂಶ ಆಂಡ್ರಾಯ್ಡ್ ಬಗ್ಗೆ...

ಮೊಬೈಲ್‌ನಲ್ಲಿ ಕನ್ನಡ ವಿಕಿಪೀಡಿಯ

 ವಿಕಿಪೀಡಿಯವನ್ನು ಇಂಟರ್ನೆಟ್ ಬ್ರೌಸರ್‌ನಲ್ಲಿ ನೋಡಿದವರಿಗೆ ತಮ್ಮ ಮೊಬೈಲ್ ನಲ್ಲೂ ಅದನ್ನು ಕಾಣಬೇಕು ಎಂದು ಬಹಳ ಬಾರಿ ಅನಿಸಿರಬಹುದು. ಸ್ವಲ್ಪ ದಿನಗಳ ಹಿಂದಿನವರೆಗೆ ಕನ್ನಡ ಅಕ್ಷರಗಳು ಮೂಡುವಂತಹ ಮೊಬೈಲ್ ಕೊರತೆಯಿಂದಾಗಿ ಇದು ಸಾಧ್ಯವಾಗದಿರಲಿಕ್ಕೂ ಸಾಕು. ಸ್ಯಾಮ್‌ಸಂಗ್‌ನ ಏಸ್ ಮತ್ತಿತರ ಆಡ್ರಾಂಯ್ಡ್ ಫೋನುಗಳು ಇತರ ಭಾರತೀಯ ಭಾಷೆಗಳ ಜೊತೆಗೆ ಕನ್ನಡವೂ ಮೊಬೈಲ್ ಪರದೆಯ ಮೇಲೆ ಮೂಡುವಂತೆ ಮಾಡಿರುವುದರಿಂದ ಕನ್ನಡದ ವೆಬ್‌ಸೈಟ್ ಇತ್ಯಾದಿಗಳು ಈಗ  ಅಂಗೈ ಅಗಲದ ಮೊಬೈಲ್ ಪರದೆಯಲ್ಲಿ ರಾರಾಜಿಸುತ್ತಿವೆ. ಇದಾದ ನಂತರವೂ...

ಕೊನೆಗೂ ಸಾಮಾನ್ಯನೆಡೆಗೆ – ಟೆಕ್ ಕನ್ನಡದ ಮೂಲಕ

ಲಿನಕ್ಸಾಯಣವನ್ನು ಬರೆಯುವ ಕನಸು ಕಟ್ಟಿದ್ದು ನನ್ನಲ್ಲಿನ ಜ್ಞಾನದ ಅರಿವನ್ನು ಸಾಮಾನ್ಯರಿಗೆ ಹರಿದು ಬಿಡಲು. ಅನೇಕ ಕಾರಣಗಳಿಂದ ಅದು ಲಿನಕ್ಸಾಯಣ.ನೆಟ್ ನಲ್ಲೇ ಬೀಡುಬಿಟ್ಟಿತ್ತು. ಇಂಟರ್ನೆಟ್ ತಲುಪಲಾರದ ಸಾಮಾನ್ಯರೂ ಇರುತ್ತಾರಲ್ಲವೇ? ಅವರನ್ನು ತಲುಪುವುದು ಹೇಗೆ? ಈ ಪ್ರಶ್ನೆಗಳಿಗೆ ಅನೇಕ ಉತ್ತರಗಳಿದ್ದರೂ, ಕೆಲಸದ ಒತ್ತಡ, ಸಮಯದ ಅಭಾವ ಹೀಗೆ ಹತ್ತು ಹಲವು ಕಾರಣಗಳಿಂದ ಲಿನಕ್ಸಾಯಣದ ಇತರೆ ಯೋಜನೆಗಳಿಗೆ ಚಾಲನೆ ಸಿಗುವುದು ಆಗಾಗ ಮಾತ್ರ. ಪತ್ರಿಕೆಗಳ ಮೂಲಕ ಇಲ್ಲಿ ಬರೆದ ಕೆಲವೊಂದು ವಿಷಯಗಳು ಜನರಿಗೆ ಮುಟ್ಟಿದರೂ, ಅದರ...

« Previous Entries

Powered by HostRobust | © 2006 - 2014 Linuxaayana