ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಗ್ನು/ಲಿನಕ್ಸ್ ಅನ್ನು ಮುಕ್ತವಾಗಿ ಪಡೆಯಬಹುದು ಎಂದು ಓದಿದ್ದೆವು. ಆದರೆ ಇದನ್ನೇ ಆಧರಿಸಿ ಸೇವೆಗಳನ್ನು ನೀಡುವ ಕಂಪೆನಿಯೊಂದು ವರ್ಷಕ್ಕೆ ೧ಬಿಲಿಯನ್ ಡಾಲರುಗಳನ್ನು ತನ್ನ ಆಧಾಯವೆಂದು ಘೋಷಿಸಿದ್ದನ್ನು ಪ್ರಾಯಶ: ಕೇಳಿರಲಿಕ್ಕಿಲ್ಲ. ರೆಡ್‌ಹ್ಯಾಟ್ ಈ ಮೈಲಿಗಲ್ಲನ್ನು ದಾಟಿದ ಮೊದಲ ಕಂಪೆನಿಯಾಗಿದೆ. 17 ವರ್ಷ ಪ್ರಾಯದ ಈ ಕೆಂಪೆನಿಯ ಮೈಲಿಗಲ್ಲು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಮತ್ತೊಂದು ಮುಖದ ಪರಿಚಯವನ್ನು ನಿಮಗೆ ಮಾಡಿಕೊಡುತ್ತದೆ. ಗ್ನು/ಲಿನಕ್ಸ್ ಅನ್ನು ಇಂಟರ್ನೆಟ್ ಹಾಗೂ ಇತರೆ ಸೇವೆಗಳಿಗೆ ಬಳಸುವ ಸರ್ವರ್ಗಳಲ್ಲಿ...

Zorin-OS – ವಿಂಡೋಸ್ ಬಳಕೆದಾರರಿಗೆ ಲಿನಕ್ಸ್‌ನಲ್ಲೊಂದು ಪ್ರತಿರೂಪ

ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ಕೊಳ್ಳಲೂ ಹಣಕೊಡಬೇಕೆ ಎನ್ನುವವರಿಗೆ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುವಾಗ ಆಗಾಗ ತಲೆ ಕೆಡಿಸುವ ವೈರಸ್ , ಬ್ಲೂ ಸ್ಕ್ರೀನ್ ಇತ್ಯಾದಿಗಳಿಂದ ದೂರ ಉಳಿಯಲು ಆಸಕ್ತರಿರುವವರಿಗೆ ಗ್ನು/ಲಿನಕ್ಸ್ ತಂತ್ರಾಂಶಗಳು ಬಹಳ ಅಚ್ಚುಮೆಚ್ಚಾಗುತ್ತವೆ. ಲಿನಕ್ಸ್ ಎಂಬ ಪದ ಕೇಳಿದೊಡನೆಯೇ ಅದು ಸಾಮಾನ್ಯರಿಗಲ್ಲ ಎನ್ನುವವರಿಗೆ ಅಚ್ಚರಿಗೊಳಿಸುವಷ್ಟು ಈ ತಂತ್ರಾಂಶಗಳು ಇಂದು ಅಭಿವೃದ್ದಿಗೊಂಡಿವೆ. ಉದಾಹರಣೆಗೆ – ಇತ್ತೀಚೆಗೆ ಅತ್ಯಂತ ಜನಪ್ರಿಯವಾಗುತ್ತಿರುವ ಮೊಬೈಲ್ ತಂತ್ರಾಂಶ ಆಂಡ್ರಾಯ್ಡ್ ಬಗ್ಗೆ...

ಕೊನೆಗೂ ಸಾಮಾನ್ಯನೆಡೆಗೆ – ಟೆಕ್ ಕನ್ನಡದ ಮೂಲಕ

ಲಿನಕ್ಸಾಯಣವನ್ನು ಬರೆಯುವ ಕನಸು ಕಟ್ಟಿದ್ದು ನನ್ನಲ್ಲಿನ ಜ್ಞಾನದ ಅರಿವನ್ನು ಸಾಮಾನ್ಯರಿಗೆ ಹರಿದು ಬಿಡಲು. ಅನೇಕ ಕಾರಣಗಳಿಂದ ಅದು ಲಿನಕ್ಸಾಯಣ.ನೆಟ್ ನಲ್ಲೇ ಬೀಡುಬಿಟ್ಟಿತ್ತು. ಇಂಟರ್ನೆಟ್ ತಲುಪಲಾರದ ಸಾಮಾನ್ಯರೂ ಇರುತ್ತಾರಲ್ಲವೇ? ಅವರನ್ನು ತಲುಪುವುದು ಹೇಗೆ? ಈ ಪ್ರಶ್ನೆಗಳಿಗೆ ಅನೇಕ ಉತ್ತರಗಳಿದ್ದರೂ, ಕೆಲಸದ ಒತ್ತಡ, ಸಮಯದ ಅಭಾವ ಹೀಗೆ ಹತ್ತು ಹಲವು ಕಾರಣಗಳಿಂದ ಲಿನಕ್ಸಾಯಣದ ಇತರೆ ಯೋಜನೆಗಳಿಗೆ ಚಾಲನೆ ಸಿಗುವುದು ಆಗಾಗ ಮಾತ್ರ. ಪತ್ರಿಕೆಗಳ ಮೂಲಕ ಇಲ್ಲಿ ಬರೆದ ಕೆಲವೊಂದು ವಿಷಯಗಳು ಜನರಿಗೆ ಮುಟ್ಟಿದರೂ, ಅದರ...

ಲಿನಕ್ಸ್ – ಉದ್ಯೋಗಗಳಿಗಿಲ್ಲ ಕೊರತೆ

ಲಿನಕ್ಸ್ ಫೌಂಡೇಷನ್ ಇತ್ತೀಚಿಗೆ ನೆಡೆಸಿದ ಸಮೀಕ್ಷೆಯ ಪ್ರಕಾರ ಲಿನಕ್ಸ್ ಸಂಬಂಧಿತ ಉದ್ಯೋಗಾವಕಾಶಗಳಿಗೆ ಕೊರತೆ ಇಲ್ಲ. ಯಾವುದೇ ಆರ್ಥಿಕತೆಯ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಬೇಕಿರುವ ಕೆಲಸಗಾರರ ಸಂಖ್ಯೆಯಲ್ಲಿ ಅಷ್ಟೇನೂ ಬದಲಾವಣೆಗಳಾಗುವುದಿಲ್ಲ. ಮುಖ್ಯವಾಗಿ ಸರ್ವರ್ ಅಡ್ಮಿನಿಸ್ಟ್ರೇಷನ್, ಇನ್ಪ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಇತ್ಯಾದಿ. ಸಮೀಕ್ಷೆಯ ಸಂಪೂರ್ಣ ಮಾಹಿತಿಗೆ ಮೇಲಿನ ಚಿತ್ರದ ಮೇಲೆ ಕ್ಲಿಕ್ಕಿಸಿ. Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed...

FUEL – ಕನ್ನಡ ತಾಂತ್ರಿಕ ಪದಕೋಶದ ಏಕೀಕರಣಕ್ಕೊಂದು ಕಾರ್ಯಾಗಾರ

ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ  ಕೊಂಚ ಮಟ್ಟಿನ ಚಟುವಟಿಕೆಯನ್ನು ಕಾಣಬಹುದಾಗಿರುತ್ತದೆ. ಹೀಗೆ ಉತ್ಸುಕರಾಗಿರುವವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ತಂತ್ರಾಂಶ ಸಂಬಂಧಿ ಅನುವಾದ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಇವರಿಗೆ...

« Previous Entries

Powered by HostRobust | © 2006 - 2014 Linuxaayana