Zorin-OS – ವಿಂಡೋಸ್ ಬಳಕೆದಾರರಿಗೆ ಲಿನಕ್ಸ್‌ನಲ್ಲೊಂದು ಪ್ರತಿರೂಪ

ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ಕೊಳ್ಳಲೂ ಹಣಕೊಡಬೇಕೆ ಎನ್ನುವವರಿಗೆ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುವಾಗ ಆಗಾಗ ತಲೆ ಕೆಡಿಸುವ ವೈರಸ್ , ಬ್ಲೂ ಸ್ಕ್ರೀನ್ ಇತ್ಯಾದಿಗಳಿಂದ ದೂರ ಉಳಿಯಲು ಆಸಕ್ತರಿರುವವರಿಗೆ ಗ್ನು/ಲಿನಕ್ಸ್ ತಂತ್ರಾಂಶಗಳು ಬಹಳ ಅಚ್ಚುಮೆಚ್ಚಾಗುತ್ತವೆ. ಲಿನಕ್ಸ್ ಎಂಬ ಪದ ಕೇಳಿದೊಡನೆಯೇ ಅದು ಸಾಮಾನ್ಯರಿಗಲ್ಲ ಎನ್ನುವವರಿಗೆ ಅಚ್ಚರಿಗೊಳಿಸುವಷ್ಟು ಈ ತಂತ್ರಾಂಶಗಳು ಇಂದು ಅಭಿವೃದ್ದಿಗೊಂಡಿವೆ. ಉದಾಹರಣೆಗೆ – ಇತ್ತೀಚೆಗೆ ಅತ್ಯಂತ ಜನಪ್ರಿಯವಾಗುತ್ತಿರುವ ಮೊಬೈಲ್ ತಂತ್ರಾಂಶ ಆಂಡ್ರಾಯ್ಡ್ ಬಗ್ಗೆ...

ಲಿನಕ್ಸ್ ಬಳಸುವ ಸಂಸ್ಥೆಗಳಿಗೆ ೧೦ ವರ್ಷದ ನಿಶ್ಚಿಂತೆ

ಇತ್ತೀಚೆಗೆ ರೆಡ್‌ಹ್ಯಾಟ್ ಲಿನಕ್ಸ್ ತನ್ನ ಎಂಟರ್‌ಪ್ರೈಸ್ ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳ ಸಪೋರ್ಟ್ ಅವಧಿಯನ್ನು ೧೦ ವರ್ಷಗಳಿಗೆ ಹೆಚ್ಚಿಸಿದೆ. ಸಾಮಾನ್ಯವಾಗಿ ೭ ವರ್ಷದ ವರೆಗೆ ಲಿನಕ್ಸ್ ಅನ್ನು ಅವಲಂಭಿಸಿ ಅದರ ಸೇವೆಗಳನ್ನು ರೆಡ್‌ಹ್ಯಾಟ್ ನಿಂದ ಪಡೆಯುತ್ತಿದ್ದ ಕಂಪೆನಿಗಳು ಅಪ್ದೇಟ್/ಸಹಾಯವನ್ನು ಇದುವರೆಗೆ ಪಡೆಯ ಬಹುದಿತ್ತು. ಚಿತ್ರ – ರೆಡ್‌ಹ್ಯಾಟ್ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೊಂಡಿಯಿಂದ ಪಡೆಯಬಹುದು.  ಲಿನಕ್ಸ್ ಮಾರುಕಟ್ಟೆಯಲ್ಲಿ ಸೇವೆಯ ಮಾರಾಟದ ಮೂಲಕ  ೫೫-೬೦% ರಷ್ಟು ವ್ಯವಹಾರವನ್ನು ರೆಡ್‌ಹ್ಯಾಟ್...

ಫೈರ್‌ಫಾಕ್ಸ್ ೧೦ – ಡೆವೆಲಪರ್‌ಗಳಿಗೆ ಬಲು ಪ್ರಿಯ

HTML5 ನ ಹೊಸ ಅವತಾರಗಳನ್ನೆಲ್ಲಾ ತನ್ನಲ್ಲಿ ಹುದುಗಿಸಿಕೊಂಡು, ಇಂಟರ್ನೆಟ್ ತಂತ್ರಜ್ಞಾನಗಳ ಅಭಿವೃದ್ದಿಯಲ್ಲಿ ತೊಡಗಿರುವವರಿಗೆ ಫೈರ್‌ಫಾಕ್ಸ್‌ ಬ್ರೌಸರ್‌ನ ಹೊಸ ಆವೃತ್ತಿ – ೧೦ ಬಹಳ ಪ್ರಿಯವಾಗುತ್ತಿದೆ. ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಅದರಲ್ಲಿ ಇನ್ನೇನಿದೆ ನೋಡಲು ಈ ಕೆಳಗಿನ ವಿಡಿಯೋ ನೋಡಿ. Watch this video on YouTube Embedded with WP YouTube Lyte. Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative...

Ruby ಕಲಿಯಲಿಕ್ಕೆ RubyMonk

Ruby ಒಂದು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ – ಇಂಟರ್ನೆಟ್ ನಲ್ಲಿನ ತರಾವರಿ ವೆಬ್‌ಸೈಟ್‌ಗಳು ಇಂದು Ruby on Rails ಬೆಂಬಲದಿಂದ ಅಭಿವೃದ್ದಿ ಹೊಂದುತ್ತಿವೆ. ಈ ಭಾಷೆಯನ್ನು ನಿಮಗೆ ಕಲಿಸಲು ರೂಬಿ ಮಾಂಕ್ ಸುಲಭ ಆನ್ಲೈನ್ ವೆಬ್‌ಸೈಟ್‌ನಲ್ಲಿ ಲಭ್ಯ. http://rubymonk.com/ ಆನ್‌ಲೈನ್‌ನಲ್ಲಿ ಪ್ರೋಗ್ರಾಮಿಂಗ್ ಕಲಿಯುವುದು ಹೇಗೆ ಎಂಬ ಪ್ರಶ್ನೆ ಇದ್ದರೆ ಈ ಮೇಲಿನ ಕೊಂಡಿ ಕ್ಲಿಕ್ಕಿಸಿ ನೋಡಿ. Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons...

ಟಚ್‌ಪ್ಯಾಡ್ ಕೆಲಸ ಮಾಡುತ್ತಿಲ್ಲವೇ?

ನಿಮ್ಮ ಲ್ಯಾಪ್‌ಟಾಪ್‌ನ ಟಚ್ ಪ್ಯಾಡ್ ಕೆಲವೊಮ್ಮೆ ಕೆಲಸ ಮಾಡುವುದಿಲ್ಲ ಎಂಬ ದೂರಿದೆಯೇ? ಡೆಬಿಯನ್, ಉಬುಂಟು, ಲಿನಕ್ಸ್ ಮಿಂಟ್ ಇತ್ಯಾದಿ ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳನ್ನು ಕೆಲವೊಂದು ಲ್ಯಾಪ್‌ಟಾಪ್‌ಗಳಲ್ಲಿ ಇನ್ಸ್ಟಾಲ್ ಮಾಡಿದಾಗ ಈ ತೊಂದರೆ ಆಗಾಗ ಮರುಕಳಿಸುತ್ತದೆ. ಇದನ್ನುಸರಿದೂಗಿಸುವುದು ಇಲ್ಲಿಯವರೆಗೆ ಕಷ್ಟ ಸಾಧ್ಯವಾಗಿತ್ತು. ಈಗ ಇದಕ್ಕೊಂದು ಸುಲಭ ವಿಧಾನವಿದೆ. gpointing-device-settings ಎಂಬ ತಂತ್ರಾಂಶವೊಂದನ್ನು ಇನ್ಸ್ಟಾಲ್ ಮಾಡಿಕೊಂಡರೆ ಆಯ್ತು. ಇದರಲ್ಲಿ ಟಚ್‌ಪ್ಯಾಚ್ ಕೆಲಸ ಮಾಡಲು ಬೇಕಿರುವ ಎಲ್ಲ...

« Previous Entries

Powered by HostRobust | © 2006 - 2014 Linuxaayana