Currently Browsing: ಸಾಮಾನ್ಯ ಪ್ರಶ್ನೆಗಳು

IPv6 ನಿಷ್ಕ್ರಿಯಗೊಳಿಸುವುದು ಹೇಗೆ?

ಉಬುಂಟು ೧೨.೦೪, ಲಿನಕ್ಸ್ ಮಿಂಟ್ ಇತ್ಯಾದಿಗಳಲ್ಲಿ IPv6 ನಿಂದಾಗಿ ಇಂಟರ್ನೆಟ್ ಸಂಪರ್ಕ ಬಹಳ ನಿಧಾನವಾಗಿ ಕೆಲಸ ಮಾಡುವುದು. ಇದು ಸಾಮಾನ್ಯವಾಗಿ ಕೇಳಿಬರುವ ತೊಂದರೆಯಾಗಿದೆ. IPv6ನ ಬಳಕೆ ಇನ್ನೂ ದಿನಬಳಕೆಯಲ್ಲಿ ಇಲ್ಲದಿರುವುದರಿಂದ ಇದನ್ನು ನಿಷ್ಕ್ರಿಯಗೊಳಿಸುವುದರಿಂದ ಈ ತೊಂದರೆ ನಿವಾರಿಸಬಹುದು. ನಿಷ್ಕ್ರಿಯಗೊಳಿಸಲು ಈ ಕೆಳಗೆ ನೀಡಿರುವ ಹಂತಗಳನ್ನು ಹಂತ ಹಂತವಾಗಿ ನಿಮ್ಮ ಉಬುಂಟುವಿನಲ್ಲಿ ಬಳಸಿ: ೧. Ctrl+Alt+T ಪ್ರೆಸ್ ಮಾಡಿ ಟರ್ಮಿನಲ್ ತೆರೆಯಿರಿ. ೨. ಟರ್ಮಿನಲ್‌ನಲ್ಲಿ ಈ ಸಾಲನ್ನು ಟೈಪ್ ಮಾಡಿ: sudo gedit...

ಉಬುಂಟು ಲಾಗಿನ್ ಪುಟದಲ್ಲಿ ಬರುವ ಗೆಸ್ಟ್(ಅತಿಥಿ) ಸಮಾವೇಶ/ಲಾಗಿನ್ ತೆಗೆಯುವುದು

ನಿಮ್ಮ ಕೀ ಬೋರ್ಡ್‌ನಲ್ಲಿ CTRL + ALT + T ಪ್ರೆಸ್ ಮಾಡಿ, ಅದು ತೋರಿಸುವ ರನ್ ಕಮ್ಯಾಂಡ್ ಎನ್ನುವಲ್ಲಿ ಈ ಕೆಳಗಿನ ಆದೇಶ ನೀಡಿ: sudo nano /usr/share/lightdm/lightdm.conf.d/50-ubuntu.conf ನಂತರ ನಿಮ್ಮೆದುರಿಗೆ ಬರುವ ಎಡಿಟರ್‌ನಲ್ಲಿ (ನೋಟ್‌ಪ್ಯಾಡ್ ನಂತಹದ್ದು) ಇದನ್ನು ಸೇರಿಸಿ ಸೇವ್ ಮಾಡಿ. allow-guest=false ನಿಮ್ಮ ಸಿಸ್ಟಂ ರೀಬೂಟ್ ಮಾಡಿ. ಈಗ ನಿಮ್ಮ ಉಬುಂಟುವಿನಲ್ಲಿ ಅತಿಥಿ ಸಮಾವೇಶ...

ಲಿನಕ್ಸ್ ತಂತ್ರಾಂಶಗಳ ಅವಲಂಬನೆಯ ಬಗ್ಗೆ ತಿಳಿಯುವುದು ಹೇಗೆ?

ಈಗಾಗಲೇ ನಿಮ್ಮ ಲಿನಕ್ಸ್‌ನಲ್ಲಿ ಇನ್ಸ್ಟಾಲ್ ಮಾಡಿರುವ ತಂತ್ರಾಂಶಗಳು ಒಂದಲ್ಲಾ ಒಂದು ತಂತ್ರಾಂಶಗಳ ಜೊತೆಗೆ ಅವಲಂಬಿತವಾಗಿರುತ್ತವೆ. ಯಾವುದೇ ಒಂದು ತಂತ್ರಾಂಶವನ್ನು ಅದರಲ್ಲೂ ಸಿಸ್ಟಂ ಲೈಬ್ರರಿಗಳೆಂದು ಕರೆಸಿಕೊಳ್ಳುವ ತಂತ್ರಾಂಶಗಳನ್ನು ಅನ್‌ಇನ್ಸ್ಟಾಲ್ ಮಾಡುವ ಮುನ್ನ, ಇನ್ಯಾವುದೇ ತಂತ್ರಾಂಶಗಳಿಗೆ ತೊಂದರೆ ಆಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳಿತು. ಅದರಲ್ಲೂ ಸಿಸ್ಟಂ ಅಡ್ಮಿನಿಸ್ಟ್ರೇಟರ್‌ಗಳಿಗೆ ಇದರ ಅವಶ್ಯಕತೆ ತುಂಬಾ ಇರುತ್ತದೆ.  ಈ ಕೆಳಗಿನ ಕಮ್ಯಾಂಡ್ ಬಳಸಿ ಯಾವುದೇ ತಂತ್ರಾಂಶಗಳ...

ಲಿನಕ್ಸ್‌ನಲ್ಲಿ ಮದರ್‌ಬೋರ್ಡ್ ಮಾದರಿ ಕಂಡುಹಿಡಿಯುವುದು

  dmidecode -t 2 ಕಮ್ಯಾಂಡ್ ಬಳಸಿಕೊಂಡು ನಿಮ್ಮ ಕಂಪ್ಯೂಟರಿನ ಮದರ್‌ಬೋರ್ಡ್‌ನ ಮಾದರಿಯನ್ನು ಸುಲಭವಾಗಿ ಕಂಡುಕೊಳ್ಳಬಹುದು.  ಉಬುಂಟುವಿನಲ್ಲಿ ನೇರವಾಗಿ ಈ ಕಮ್ಯಾಂಡ್ ಬಳಸಲು ಸಾಧ್ಯವಾಗದಿದ್ದಲ್ಲಿ, ಈ ಕೆಳಕಂಡಂತೆ  sudo ಬಳಸಿ ಉತ್ತರ ಪಡೆದುಕೊಳ್ಳಬಹುದು. ~$ sudo dmidecode -t 2 # dmidecode 2.12 SMBIOS 2.7 present. Handle 0x0011, DMI type 2, 15 bytes Base Board Information Manufacturer: LENOVO Product Name: 3254D7Q Version: Not Available Serial Number:...

ನಿಮ್ಮ ಪ್ರಾಸೆಸ್ಸರ್, ಫ್ಯಾನ್ ಇತ್ಯಾದಿಗಳ ಉಷ್ಣತೆ ತಿಳಿಯಬೇಕೆ?

ಕಂಪ್ಯೂಟರಿನ ಸಿ.ಪಿ.ಯು, ಫ್ಯಾನ್, ವಿದ್ಯುತ್ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆಯಲು ಉಬುಂಟು ನಿಮಗೆ ಅನೇಕ ಟೂಲ್‌ಗಳನ್ನು ಕೊಟ್ಟಿರಬಹುದು. ಆದರೆ ಗ್ನು/ಲಿನಕ್ಸ್‌ನಲ್ಲಿ lm_sensors ತಂತ್ರಾಂಶದ ಪ್ಯಾಕೇಜ್ ಇನ್ಸ್ಟಾಲ್ ಆಗಿದ್ದಲ್ಲಿ ಅವೆಲ್ಲವನ್ನು ಸುಲಭವಾಗಿ ಟರ್ಮಿನಲ್ ಮೂಲಕ ನೋಡಬಹುದು. sensors ಎನ್ನುವ ಆದೇಶದ ಫಲಿತಾಂಶವನ್ನು ಈ ಕೆಳಗೆ ನೋಡುತ್ತಿರುವಿರಿ. $ sensors acpitz-virtual-0 Adapter: Virtual device temp1: +29.8°C (crit = +100.0°C) thinkpad-isa-0000 Adapter: ISA adapter...

« Previous Entries

Powered by HostRobust | © 2006 - 2014 Linuxaayana