Currently Browsing: ಗ್ನು/ಲಿನಕ್ಸ್ ವಿತರಣೆಗಳು

ಲಿನಕ್ಸ್ ಬಳಸುವ ಸಂಸ್ಥೆಗಳಿಗೆ ೧೦ ವರ್ಷದ ನಿಶ್ಚಿಂತೆ

ಇತ್ತೀಚೆಗೆ ರೆಡ್‌ಹ್ಯಾಟ್ ಲಿನಕ್ಸ್ ತನ್ನ ಎಂಟರ್‌ಪ್ರೈಸ್ ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳ ಸಪೋರ್ಟ್ ಅವಧಿಯನ್ನು ೧೦ ವರ್ಷಗಳಿಗೆ ಹೆಚ್ಚಿಸಿದೆ. ಸಾಮಾನ್ಯವಾಗಿ ೭ ವರ್ಷದ ವರೆಗೆ ಲಿನಕ್ಸ್ ಅನ್ನು ಅವಲಂಭಿಸಿ ಅದರ ಸೇವೆಗಳನ್ನು ರೆಡ್‌ಹ್ಯಾಟ್ ನಿಂದ ಪಡೆಯುತ್ತಿದ್ದ ಕಂಪೆನಿಗಳು ಅಪ್ದೇಟ್/ಸಹಾಯವನ್ನು ಇದುವರೆಗೆ ಪಡೆಯ ಬಹುದಿತ್ತು. ಚಿತ್ರ – ರೆಡ್‌ಹ್ಯಾಟ್ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೊಂಡಿಯಿಂದ ಪಡೆಯಬಹುದು.  ಲಿನಕ್ಸ್ ಮಾರುಕಟ್ಟೆಯಲ್ಲಿ ಸೇವೆಯ ಮಾರಾಟದ ಮೂಲಕ  ೫೫-೬೦% ರಷ್ಟು ವ್ಯವಹಾರವನ್ನು ರೆಡ್‌ಹ್ಯಾಟ್...

ಡ್ರಾಗನ್‌ಫ್ಲೈ ಬಿ.ಎಸ್.ಡಿ ೩ ಬಿಡುಗಡೆಗೊಂಡಿದೆ

ಇದೇನಪ್ಪ ಏರೋಪ್ಲೇನ್ ಚಿಟ್ಟೆ ಅನ್ಕೊಂಡ್ರಾ? ಇದು ಬಿ.ಎಸ್.ಡಿ ಲಿನಕ್ಸ್ ಒಂದರ ಲೋಗೋ. ಹೆಸರು ಡ್ರಾಗನ್‌ಪ್ಲ್ಹೈ. ಇದರ ೩ ನೇ ಆವೃತ್ತಿ ಇತ್ತೀಚೆಗೆ ಬಿಡುಗಡೆಗೊಂಡಿದೆ. ವರ್ಚುಅಲೈಸೇಷನ್ (Virtualization) ಮತ್ತು ಕಲ್ಸ್ಟರಿಂಗ್ (Clustering) ಕಂಪ್ಯೂಟರ್ ಜಗತ್ತಿನಲ್ಲಿ ಇಂದು ಬಜ್‌ವರ್ಡ್ – ಕ್ಲೌಡ್ ಕಂಪ್ಯೂಟಿಂಗ್ (Cloud Computing) ಮನೆ ಮಾತಾಗಿರುವಾಗ ಹತ್ತಾರು ಕಂಪ್ಯೂಟರ್‌ಗಳು ಒಂದೇ ಹಾರ್ಡ್ವೇರ್ ನಿಂದ ಕೆಲಸ ಮಾಡುವಂತೆ ಮಾಡಲು ನೆಡೆದ ಹತ್ತಾರು ಯೋಜನೆಗಳಂತೆ ಇದೂ ಒಂದು. ೨೦೦೩ ರಲ್ಲಿ ಪ್ರಾರಂಭವಾದ ಈ...

ಬ್ಯಾಕ್‌|ಟ್ರಾಕ್ ೫

ಬ್ಯಾಕ್|ಟ್ರಾಕ್ ೫ ವಿಶ್ವದ ಅತಿ ಶ್ರೇಷ್ಟ ಎಂದೇ ಪರಿಗಣಿಸಲ್ಪಟ್ಟ ಮತ್ತು ಹೆಸರಿಸಲ್ಪಟ್ಟ ಗ್ನು/ಲಿನಕ್ಸ್ ಸೆಕ್ಯೂರಿಟಿ ಆಪರೇಟಿಂಗ್ ಸಿಸ್ಟಂ ವಿತರಣೆ/ಡಿಸ್ಟ್ರಿಬ್ಯೂಷನ್. ಬ್ಯಾಕ್‌ಟ್ರಾಕ್ Backtrack-Linux.org ವೆಬ್‌ಸೈಟ್ ಮೂಲಕ ನಮಗೆಲ್ಲ ದೊರೆಯುತ್ತದೆ. ಸೆಕ್ಯೂರಿಟಿ ಪ್ರೊಫೆಷನಲ್‌ಗಳಿಗೆ ತಮ್ಮ ಪೆನಟ್ರೇಷನ್ ಟೆಸ್ಟ್‌ (ಸೆಕ್ಯೂರಿಟಿ ಲೋಪಗಳನ್ನು ಕಂಡುಹಿಡಿಯಲಿಕ್ಕೆಂದೇ ಇರುವ ಪರೀಕ್ಷೆಗಳು)ಗಳಿಗೆ ಬೇಕಿರುವ ಎಲ್ಲ ಆಯುಧಗಳನ್ನು, ಹ್ಯಾಕಿಂಗ್ ಇತ್ಯಾದಿಗಳ ಮೂಲಕ ಯಾವುದೇ ಕಂಪ್ಯೂಟರ್ ವ್ಯವಸ್ಥೆ, ತಂತ್ರಾಂಶ ಇತ್ಯಾದಿಗಳ...

ಡೆಬಿಯನ್ ಲಿನಕ್ಸ್ ೬.೦.೨ ಆವೃತ್ತಿ ಈಗ ಲಭ್ಯ

ಡೆಬಿಯನ್ ಗ್ನು/ಲಿನಕ್ಸ್ ಯೋಜನೆ ತನ್ನ ೬.೦ ಆವೃತ್ತಿಗೆ ಎರಡನೇ ಅಪ್ಡೇಟ್ ಬಿಡುಗಡೆ ಮಾಡಿದೆ. ಈ ಅಪ್ಡೇಟ್ ಡೆಬಿಯನ್‌ನ ಸೆಕ್ಯೂರಿಟಿ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ಕೆಲವು ತೊಂದರೆಗಳಿಗೆ ಉತ್ತರವನ್ನೂ ಇದು ಕೊಡುತ್ತದೆ. ಈ ಅಪ್ಡೇಟ್ನಲ್ಲಿ ಬಿಡುಗಡೆಗೊಂಡಿರುವ ಸೆಕ್ಯೂರಿಟಿ ತೊಂದರೆಗಳನ್ನು ನಿವಾರಿಸಿ ಬೇರೆಡೆಗಳಲ್ಲಿ ಅವುಗಳ ಬಗ್ಗೆ ವಿವರಗಳನ್ನು ನೀಡಲಾಗಿತ್ತು. ಈ ಅಪ್ಡೇಟ್ ಹೊಸ ಡೆಬಿಯನ್ ವಿತರಣೆ ಆಗಿರದೆ ಕೆಲವೊಂದು ಪ್ಯಾಕೇಜ್‌ಗಳಿಗೆ ಮಾತ್ರ ಅಪ್ಡೇಟ್ ಆಗಿರುತ್ತದೆ. ಹೊಸ ಸಿ.ಡಿ ಅಥವಾ ಡಿ.ವಿ.ಡಿ ಗಳನ್ನು...

ವೈದ್ಯರಿಗಾಗಿ ಓಪನ್ ಸುಸೆ-ಮೆಡಿಕಲ್ ೧೧.೪

ನೀವು ವೈದ್ಯಕೀಯ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮದೇ ಕ್ಲಿನಿಕ್ ನೆಡೆಸುತ್ತಿದ್ದರೆ ಅಥವಾ ವೈದ್ಯಕೀಯ ಅಧ್ಯಯನದಲ್ಲಿ ತೊಡಗಿದ್ದರೆ ನಿಮಗೂ ಕೂಡ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಅನೇಕ ತಂತ್ರಾಂಶಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿದೆ. ಈಗ ಅದನ್ನು ನಿಮ್ಮ ಕಂಪ್ಯೂಟರ್, ಲ್ಯಾಪ್ಟಾಪ್ ಅಥವಾ ನೆಟ್‌ಬುಕ್ ನಲ್ಲಿ ಸವಿಯುವ ಭಾಗ್ಯ ನಿಮ್ಮದಾಗಿದೆ. ಓಪನ್‌ಸುಸೆ ಮೆಡಿಕಲ್‌ನ ಆವೃತ್ತಿ ೧೧.೪ ಈಗ ಲಭ್ಯವಿದೆ. ಓಪನ್‌ಸುಸೆ ಮೆಡಿಕಲ್‌ ಯೋಜನೆ ವೈದ್ಯಕೀಯದಲ್ಲಿ ತೊಡಗಿರುವವರಿಗೆ ವರದಾನವೇ ಸರಿ. ವೃತ್ತಿ ಸಂಬಂದಿತ...

« Previous Entries

Powered by HostRobust | © 2006 - 2014 Linuxaayana