ಮೊಬೈಲ್‌ನಲ್ಲಿ ಕನ್ನಡ ವಿಕಿಪೀಡಿಯ

by | Mar 4, 2012 | ನಿಮಗಿದು ತಿಳಿದಿದೆಯೇ?, ಸಾಮಾನ್ಯ ಜ್ಞಾನ, ಸುದ್ದಿ | 0 comments

 ವಿಕಿಪೀಡಿಯವನ್ನು ಇಂಟರ್ನೆಟ್ ಬ್ರೌಸರ್‌ನಲ್ಲಿ ನೋಡಿದವರಿಗೆ ತಮ್ಮ ಮೊಬೈಲ್ ನಲ್ಲೂ ಅದನ್ನು ಕಾಣಬೇಕು ಎಂದು ಬಹಳ ಬಾರಿ ಅನಿಸಿರಬಹುದು. ಸ್ವಲ್ಪ ದಿನಗಳ ಹಿಂದಿನವರೆಗೆ ಕನ್ನಡ ಅಕ್ಷರಗಳು ಮೂಡುವಂತಹ ಮೊಬೈಲ್ ಕೊರತೆಯಿಂದಾಗಿ ಇದು ಸಾಧ್ಯವಾಗದಿರಲಿಕ್ಕೂ ಸಾಕು. ಸ್ಯಾಮ್‌ಸಂಗ್‌ನ ಏಸ್ ಮತ್ತಿತರ ಆಡ್ರಾಂಯ್ಡ್ ಫೋನುಗಳು ಇತರ ಭಾರತೀಯ ಭಾಷೆಗಳ ಜೊತೆಗೆ ಕನ್ನಡವೂ ಮೊಬೈಲ್ ಪರದೆಯ ಮೇಲೆ ಮೂಡುವಂತೆ ಮಾಡಿರುವುದರಿಂದ ಕನ್ನಡದ ವೆಬ್‌ಸೈಟ್ ಇತ್ಯಾದಿಗಳು ಈಗ  ಅಂಗೈ ಅಗಲದ ಮೊಬೈಲ್ ಪರದೆಯಲ್ಲಿ ರಾರಾಜಿಸುತ್ತಿವೆ.

ಇದಾದ ನಂತರವೂ ವಿಕಿಪೀಡಿಯ ಕನ್ನಡ (https://kn.wikipedia.org) ಪುಟವನ್ನು ತೆರೆದಾಗ ವಿಕಿಪೀಡಿಯ ಮೊಬೈಲ್ ಪುಟವನ್ನು ಮರೆ ಮಾಡಿ, ಎಂದಿನ ಆವೃತ್ತಿಯಲ್ಲಿ ಈ ಪುಟ ನೋಡಿ ಎಂಬ ಮಾಹಿತಿ ಮಾತ್ರ ನಮಗೆ ದೊರಕುತ್ತಿತ್ತು. ಈಗ ಅದಕ್ಕೆ ಕೊನೆ. ಕನ್ನಡ ವಿಕಿಪೀಡಿಯದ ಮೊಬೈಲ್ ಪುಟ ಈಗ ಲಭ್ಯವಿದೆ. ಖುದ್ದಾಗಿ ಇದನ್ನು ಸರಿ ಪಡಿಸಬೇಕು ಎಂದು ಕೊಂಡಿದ್ದು ವಿಕಿಪೀಡಿಯದ ಇನ್ನೊಬ್ಬ ಗೆಳೆಯ ಹರೀಶ್ ಎಂ.ಜಿ ಗೆ ಹೇಗೆ ಕೇಳಿಸಿತೋ ತಿಳಿಯದು.

ಮತ್ತೊಂದು ವಿಷಯ ಕನ್ನಡದ ವಿಕಿಪೀಡಿಯಕ್ಕೆ ಮೊಬೈಲ್ ಮೂಲಕ (ಸಧ್ಯಕ್ಕೆ ಸ್ಯಾಮ್‌ಸಂಗ್ ನ ಆಂಡ್ರಾಯ್ಡ್ ಫೋನುಗಳಲ್ಲಿ ಮಾತ್ರ ಇದು ಸಾಧ್ಯ) ಕೂಡ ನೀವು ಲೇಖನಗಳನ್ನು ಸಂಪಾದಿಸಬಹುದು. ಕನ್ನಡ ಟೈಪಿಸಲು ಅನಿಸಾಫ್ಟ್ ಕನ್ನಡ ಕೀಬೋರ್ಡ್ ಅನ್ನು ಆಂಡ್ರಾಯ್ಡ್ ಮಾರ್ಕೆಟ್ ನಿಂದ ಡೌನ್‌ಲೋಡ್ ಮಾಡಿಕೊಂಡ್ರಾಯ್ತು.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು

‍ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ - ಬೆಂಗಳೂರು, ಐ.‌ಐ.ಎಂ.ಬಿ ಕ್ಯಾಂಪಸ್‌ನಲ್ಲಿ ನವೆಂಬರ್ ೧೭-೧೮ರಂದು ನೆಡೆಯುತ್ತಿದೆ. ಇದು ಏಷ್ಯಾದ ಓಪನ್ ಸ್ಟ್ರೀಟ್ ಮ್ಯಾಪ್ ಸಮುದಾಯಗಳ ವಾರ್ಷಿಕ ಸಮ್ಮೇಳನವಾಗಿದ್ದು, ೨೦೧೫ರಲ್ಲಿ ಪ್ರಾರಂಭವಾಗಿತ್ತು. ‍ ಮೊದಲ ಸ್ಟೇಟ್ ಆಫ್ ಮ್ಯಾಪ್ ಏಷ್ಯಾ (SOTMA) ಅನ್ನು ಜಕಾರ್ತ,...

read more
Share This