ಡ್ರಾಗನ್‌ಫ್ಲೈ ಬಿ.ಎಸ್.ಡಿ ೩ ಬಿಡುಗಡೆಗೊಂಡಿದೆ

ಇದೇನಪ್ಪ ಏರೋಪ್ಲೇನ್ ಚಿಟ್ಟೆ ಅನ್ಕೊಂಡ್ರಾ? ಇದು ಬಿ.ಎಸ್.ಡಿ ಲಿನಕ್ಸ್ ಒಂದರ ಲೋಗೋ. ಹೆಸರು ಡ್ರಾಗನ್‌ಪ್ಲ್ಹೈ. ಇದರ ೩ ನೇ ಆವೃತ್ತಿ ಇತ್ತೀಚೆಗೆ ಬಿಡುಗಡೆಗೊಂಡಿದೆ. ವರ್ಚುಅಲೈಸೇಷನ್ (Virtualization) ಮತ್ತು ಕಲ್ಸ್ಟರಿಂಗ್ (Clustering) ಕಂಪ್ಯೂಟರ್ ಜಗತ್ತಿನಲ್ಲಿ ಇಂದು ಬಜ್‌ವರ್ಡ್ – ಕ್ಲೌಡ್ ಕಂಪ್ಯೂಟಿಂಗ್ (Cloud Computing) ಮನೆ ಮಾತಾಗಿರುವಾಗ ಹತ್ತಾರು ಕಂಪ್ಯೂಟರ್‌ಗಳು ಒಂದೇ ಹಾರ್ಡ್ವೇರ್ ನಿಂದ ಕೆಲಸ ಮಾಡುವಂತೆ ಮಾಡಲು ನೆಡೆದ ಹತ್ತಾರು ಯೋಜನೆಗಳಂತೆ ಇದೂ ಒಂದು. ೨೦೦೩ ರಲ್ಲಿ ಪ್ರಾರಂಭವಾದ ಈ ಲಿನಕ್ಸ್‌ನ ಅಭಿವೃದ್ದಿಯ ಬಗ್ಗೆ http://www.dragonflybsd.org/history/ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು. ಫ್ರೀ ಬಿ.ಎಸ್.ಡಿ (FreeBSD 4.8) ಇಂದ ಈ ಲಿನಕ್ಸ್ ಹುಟ್ಟಿತಾದರೂ ಮೊದಲ ಆವೃತ್ತಿ ಕಂಡದ್ದು ೨೦೦೭ ರಲ್ಲಿ. HAMMER ಫೈಲ್ ಸಿಸ್ಟಂ ಅನ್ನು ಡ್ರಾಗನ್‌ಪ್ಲೈ ಲಿನಕ್ಸ್ ಜಗತ್ತಿಗೆ ಪರಿಚಯಿಸಿತು. ಫೈಲ್‌ಸಿಸ್ಟಂ ‌ನ ಅನೇಕ ತಲೆನೋವುಗಳನ್ನು ನಿವಾರಿಸುವುದು ಇದರ ಮುಖ್ಯ ಗುರಿಯಾಗಿತ್ತು. ಡ್ರಾಗನ್‌ಪ್ಲೈ ಸೃಷ್ಟಿಕರ್ತ Matthew Dillon.

banner ad

ಪ್ರತಿಕ್ರಿಯೆಯನ್ನು ಉಳಿಸಿ

Your email address will not be published. Required fields are marked *

Powered by HostRobust | © 2006 - 2014 Linuxaayana