Mageia – ರಿಲೀಸ್ ಕ್ಯಾಂಡಿಡೇಟ್ ೧ ಬಿಡುಗಡೆ

ಮಾಗೀಅ  ಹುಟ್ಟು – ಮ್ಯಾಂಡ್ರೀವಾ ಲಿನಕ್ಸ್ ತನ್ನ ಶೇರುಗಳನ್ನು ಮತ್ತೊಂದು ಕಂಪೆನಿಯ ಜೊತೆ ಹಂಚಿಕೊಂಡು ತನ್ನ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತು. ಇದನ್ನು ವಿರೋದಿಸಿದ ಕೆಲವರು ಮತ್ತು ಮ್ಯಾಂಡ್ರೀವಾ ಲಿನಕ್ಸ್ ಸಮುದಾಯದ ಸದಸ್ಯರು ಮ್ಯಾಂಡ್ರೀವಾ ಪ್ರೋರ್ಕ್ ಮಾಡುವುದಾಗಿ ಹೊರಟು ಮಾಗೀಅ ಎಂಬ ಹೊಸ ಗ್ನು/ಲಿನಕ್ಸ್ ಆವೃತ್ತಿ ಹುಟ್ಟು ಹಾಕಿದರು. ಮ್ಯಾಂಡ್ರೀವಾದ ಮೂಲ ಗ್ನು/ಲಿನಕ್ಸ್  ತನ್ನ ಗ್ರಾಫಿಕ್ಸ್ ಮತ್ತು ಬಳಕೆದಾರ ಸ್ನೇಹಿ ಸೌಲಭ್ಯಗಳಿಂದ ಮನೆಮಾತಾಗಿತ್ತು. ಅದನ್ನು ಮುಂದೆಯೂ ಬಳಕೆದಾರರು ಮುಕ್ತವಾಗಿ ಪಡೆಯಲು ಅನುಕೂಲವಾಗುವಂತೆ ಮಾಗೀಅ ಇರುತ್ತದೆ ಎಂದು ಸಮುದಾಯ ಹೇಳುತ್ತದೆ.

ಮಾಗೀಅ ಬಳಕೆಗೆ ಸಿದ್ದವಿದೆಯೇ ಎಂದು ಪರೀಕ್ಷಿಸಲು ಮೊದಲ ರಿಲೀಸ್ ಕ್ಯಾಂಡಿಡೇಟ್ ಬಿಡುಗಡೆ ಮಾಡಲಾಗಿದೆ.ನೀವೂ ಬಳಸಿ ಈ ಗ್ನು/ಲಿನಕ್ಸ್ ಮ್ಯಾಂಡ್ರೀವಾದಷ್ಟೇ ಸದೃಡವೇ ತಿಳಿಸಿ.

banner ad

Leave a Reply

Powered by HostRobust | © 2006 - 2014 Linuxaayana