ಲಿನಕ್ಸಾಯಣ – ೮ – ಲಿನಕ್ಸ್ ನೆಟ್ವರ್ಕಿಂಗ್ ಕಷ್ಟ ಅಲ್ಲ

by | Sep 19, 2010 | ಸಾಮಾನ್ಯ ಜ್ಞಾನ | 0 comments

ಕಂಪ್ಯೂಟರ್ ಇಂಟರ್ನೆಟ್ ಗೆ ಕನೆಕ್ಟ್ ಆಗಿರ್ರ್ಲಿಲ್ಲ ಅಂದ್ರೆ ದಿನ ದೂಡುವುದು ತುಂಬಾ ಕಷ್ಟ ಅಲ್ವೇ?

ನಿಮ್ಮ ಲಿನಕ್ಸ್ ಕಂಪ್ಯೂಟರ್ ಅನ್ನು ನಿಮ್ಮ ಆಫೀಸ್ ನಲ್ಲಿನ ನೆಟ್ವರ್ಕ್ ಅಥವಾ, ಬಿ.ಎಸ್.ಎನ್.ಎಲ್ ನಂತಹ ಇಂಟರ್ನೆಟ್ ಕಂಪನಿಯ ನೆಟ್ವರ್ಕ್ ಗೆ ಸೇರಿಸೋದು ತುಂಬಾ ಸುಲಭ. ಉಬುಂಟುವಿನ ಡೆಸ್ಕ್ಟಾಪ್ ನ ಮೇಲ್ಭಾಗದಲ್ಲಿ ಕಾಣಿಸುವ ಬಾರ್ ನಲ್ಲಿ ಕಾಣಿಸುವ ಕಂಪ್ಯೂಟರ್ ನ ಮೇಲೆ ಕ್ಲಿಕ್ಕಿಸಿ “Manual Configuration” ಸೆಲೆಕ್ಟ್ ಮಾಡಿ ಅಥವಾ “System” ಮೆನು ನಲ್ಲಿ, Administration -> Network ನಿಂದ ಕೂಡ ನೆಟ್ವರ್ಕ್ ಕಾನ್ಫಿಗರೇಶನ್ ವಿಂಡೋ ಪಡೆಯಬಹುದು. ಅದು ಕೆಳಕಂಡ ಚಿತ್ರದಲ್ಲಿರುವಂತೆ ಕಾಣಿಸುತ್ತದೆ.

ಇಲ್ಲಿ ಮೊದಲು ನೆಟ್ವರ್ಕ್ ಸೆಟ್ಟಿಂಗ್ಸ್ unlock ಮಾಡಿ (ಇದು ಉಬುಂಟು ೮.೦೪ ನಲ್ಲಿ ಮಾತ್ರ ಬೇಕಿದೆ ಹಳೆಯ ಉಬುಂಟುವಿನಲ್ಲಿ unlock ಆಫ್ಚನ್ ಇರುವುದಿಲ್ಲ) .

ನಂತರ ನಿಮ್ಮ ISP (Internet Service Provider ಉದಾ: BSNL) ನಿಮಗೆ ನೀಡುವ ಮಾರ್ಗದರ್ಶನದಂತೆ, “Static ip address” ಅಥವಾ “Automatic Configuration” ಅನ್ನ ಉಪಯೋಗಿಸ ಬೇಕಾಗುತ್ತದೆ. “Wired Connection” ಅನ್ನು ಸೆಲೆಕ್ಟ್ ಮಾಡಿ, Properties ಮೇಲೆ ಕ್ಲಿಕ್ ಮಾಡಿ. ನಂತರ  “Static ip address” ಉಪಯೋಗಿಸ ಬೇಕಿದ್ದರೆ, ISP ನವರು ನೀಡುವ I.P, Gateway ಮತ್ತು DNS ವಿಳಾಸ(Adress)ಗಳನ್ನ ಬಳಿಯಲ್ಲಿ ಕೊಳ್ಳಿ. ಮುಂದೆ ತೋರಿಸಿರುವ ಚಿತ್ರ ನಿಮ್ಮ ಕಂಪ್ಯೂಟರ್ನ ಮೇಲಾಗಲೇ ಬಂದಿದ.

ಇಲ್ಲಿ “Configuration” ಬಳಿ ಗಮನಿಸಿ. “Static IP Address” ಅನ್ನು ಆಯ್ಕೆ ಮಾಡಲಾಗಿದೆ. ನಿಮ್ಮ ISP ಕೊಟ್ಟಿರುವ ವಿಳಾಸಗಳನ್ನ ಇಲ್ಲಿ ಟೈಪ್ ಮಾಡಿ.

DNS ವಿಳಾಸಗಳನ್ನು ಮುಂದೆ ಉಪಯೋಗಿಸುತ್ತೇವೆ. ಕೆಲವು ಐ.ಎಸ್.ಪಿ ಗಳು “Static IP Address” ಬದಲಾಗಿ “DHCP” ವಿಳಾಸ ಬಳಸುತ್ತವೆ. DHCP ಆಡ್ರೆಸ್ ಅನ್ನು ಐ.ಎಸ್.ಪಿ  ನಿಮ್ಮ ಮನೆಗೆ ನೀಡುವ ADSL ಮೋಡೆಮ್ ನಿಮ್ಮ ಕಂಪ್ಯೂಟರ್ ಗೆ ತಲುಪಿಸುತ್ತದೆ ಆದ್ದರಿಂದ ನಿಮಗೆ ನೆಟ್ವರ್ಕ್ ಕಾನ್ಫಿಗರ್ ಮಾಡೋದು ತುಂಬಾ ಸುಲಭವಾಗುತ್ತದೆ.

ಇಲ್ಲಿ “Configuration”ನಲ್ಲಿ “Automatic Configuration”ಆಯ್ಕೆ ಮಾಡಿದರಾಯಿತು. ನಿಮ್ಮ ನೆಟ್ವರ್ಕ್ ಕಾನ್ಫಿಗರೇಶನ್ ಮುಗೀತು ಅಂತ.

ನಿಮಗೆ ಯಾವುದನ್ನ ಉಪಯೋಗಿಸಿ ಅಂತ ಹೇಳಿದಾರೋ ಅದನ್ನ ಬಳಸಿ, Ok ಕ್ಲಿಕ್ಕಿಸಿ.

ಮೊದಲ ಚಿತ್ರದಲ್ಲಿ “Wired Connection” ಹಿಂಬದಿಯಿರುವ ಚೌಕಾಕಾರದ ಬಾಕ್ನ್ ಸೆಲೆಕ್ಟ್ ಆಗಿದೆಯೇ ಗಮನಿಸಿ. ನಿಮ್ಮ ISP , DNS ವಿಳಾಸಗಳನ್ನ ಕೊಟ್ಟಿದ್ದರೆ, ಮೊದಲ ಚಿತ್ರದಲ್ಲಿ ವನ್ನ ಮತ್ತೊಮ್ಮೆ ಗಮನಿಸಿ ಅದರಲ್ಲಿ DNS ಅನ್ನುವ ಟ್ಯಾಬ್ ಕ್ಲಿಕ್ ಮಾಡಿ. ಅದು ಕೆಳಕಂಡಂತೆ ಕಾಣಿಸುತ್ತದೆ.

ನೀವು DHCP ಬಳಸ ಬೇಕಾದರೆ ಇದರ ಅಗತ್ಯವಿಲ್ಲ.

ನಿಮ್ಮ ಕೆಲಸ ಮುಗೀತು “Close” ಕ್ಲಿಕ್ ಮಾಡಿ ಮತ್ತೆ :)

ಇಷ್ಟಾದರೆ ನಿಮ್ಮ ಕಂಪ್ಯೂಟರ್ ನೆಟ್ವರ್ಕ್ ಕಾನ್ಫಿಗರೇಶನ್ ಮುಗೀತು, ಆದರೆ ನಿಮ್ಮ ಕಂಪ್ಯೂಟರ್ ನ ನೆಟ್ವರ್ಕ್ ಕಾರ್ಡನ್ನು ADSL ಮೊಡೆಮ್ ಗೆ ನೆಟ್ವರ್ಕ್ ಕೇಬಲ್ ನ ಸಹಾಯದಿಂದ ಸೇರಿಸುವುದನ್ನ ಮರೆಯಬೇಡಿ.

ADSL modem ಕೆಳಕಂಡಂತೆ ಕಾಣಿಸುತ್ತದೆ.

ಇಲ್ಲಿ ನೆಟ್ವರ್ಕ್ ಕೇಬಲ್ ಮತ್ತು ಪವರ್ ಕೇಬಲ್ ಗಳನ್ನೂ ನೀವು ಗಮನಿಸ ಬಹುದು.

ಈ ಲೇಖನದಲ್ಲಿ ನಿಮಗೆ ಏನರ್ಥವಾಗ್ಲಿಲ್ಲ ಅಂತ ಹೇಳಿದರೆ ಅದನ್ನ ಇನ್ನೂ ಸುಲಭವಾಗಿ ವಿವರಿಸುವ ಪ್ರಯತ್ನ ಪಡ್ತೇನೆ. IP, DNS, Gateway  ಅವುಗಳ ಬಗ್ಗೆ ಮತ್ತೊಮ್ಮೆ ವಿವರಿಸಿ ಹೇಳ್ತೇನೆ.   Wireless ನೆಟ್ವರ್ಕ್ ಮತ್ತು Dialup ಕನೆಕ್ಶನ್ ಕಾನ್ಫಿಗರ್ ಮಾಡೋದು ಕೂಡ ಕಷ್ಟ ಅಲ್ಲ. ಅದನ್ನೂ ನೋಡುವ.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು...

read more
Share This